ಬೆಂಗಳೂರು: ಬೆಲ್ಲಿ ಫ್ಯಾಟ್, ತೂಕ ಹೆಚ್ಚಳ ಎಲ್ಲವೂ ಕೂಡ ಸೌಂದರ್ಯವನ್ನು ಹಾಳು ಮಾಡುವುದು ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಕೆಲವರು ತೂಕ ಇಳಿಕೆಗಾಗಿ ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಆದರೆ, ಎಷ್ಟೇ ಕಠಿಣ ಪರಿಶ್ರಮದ ಹೊರತಾಗಿಯೂ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಲು ಸಾಧ್ಯವಾಗುವುದೇ ಇಲ್ಲ. ಇನ್ನೂ ಕೆಲವರಿಗೆ ಈ ಬ್ಯುಸಿ ಲೈಫ್‌ನಲ್ಲಿ ವ್ಯಾಯಾಮ ಮಾಡಲೂ ಕೂಡ ಸಮಯವಿರುವುದಿಲ್ಲ. ಆದರೆ, ಬೆಲ್ಲಿ ಫ್ಯಾಟ್ ಕರಗಿಸಲು, ತೂಕ ಇಳಿಸಲು ನಿತ್ಯ ಒಂದು ಚಮತ್ಕಾರಿ ಪಾನೀಯ ಕುಡಿದರೆ ಅಷ್ಟೇ ಸಾಕು ಅಂತಾರೆ ತಜ್ಞರು. 


COMMERCIAL BREAK
SCROLL TO CONTINUE READING

ಅಷ್ಟಕ್ಕೂ ಯಾವುದೀ ಪಾನೀಯ. ಅಂತ ಮ್ಯಾಜಿಕಲ್ ಡ್ರಿಂಕ್ ಕೂಡ ಇದೆಯೇ ಎಂದು ನೀವು ಯೋಚಿಸುತ್ತಿದ್ದರೆ, ಇದಕ್ಕೆ ಉತ್ತರ ಹೌದು. ಭಾರತದ ಪ್ರಸಿದ್ಧ ಪೌಷ್ಟಿಕ ತಜ್ಞರ ಪ್ರಕಾರ, ಸರಿಯಾದ ರೀತಿಯಲ್ಲಿ ನಿಯಮಿತವಾಗಿ  ಆಪಲ್ ಸೈಡರ್ ವಿನೆಗರ್ ಪಾನೀಯ ಕುಡಿಯುವುದರಿಂದ ತ್ವರಿತವಾಗಿ ತೂಕ ಕಳೆದುಕೊಳ್ಳಬಹುದು ಎನ್ನಲಾಗುತ್ತದೆ. ಹಾಗಿದ್ದರೆ,  ಏನಿದು ಆಪಲ್ ಸೈಡರ್ ವಿನೆಗರ್, ಇದನ್ನು ಹೇಗೆ ತಯಾರಿಸಲಾಗುತ್ತದೆ. ಇದು ತೂಕ ಇಳಿಕೆಗೆ ಹೇಗೆ ಸಹಕಾರಿ ಆಗಲಿದೆ, ಅದನ್ನು ಸೇವಿಸುವ ಸರಿಯಾದ ಮಾರ್ಗ ಯಾವುದು ಎಂದು ತಿಳಿಯೋಣ...


ಇದನ್ನೂ ಓದಿ- ಹುಳುಕಡ್ಡಿ ಸಮಸ್ಯೆಗೆ ನೈಸರ್ಗಿಕ ಮನೆಮದ್ದು 


ಏನಿದು  ಆಪಲ್ ಸೈಡರ್ ವಿನೆಗರ್?
ಆಪಲ್ ಸೈಡರ್ ವಿನೆಗರ್ ಆಪಲ್ ಜ್ಯೂಸ್‌ನ ಆಮ್ಲೀಯ ರೂಪವಾಗಿದ್ದು, ಆಪಲ್ ಸೈಡರ್ ವಿನೆಗರ್ ಅನ್ನು ಹುದುಗಿಸುವ ಮೂಲಕ ತಯಾರಿಸಲಾಗುತ್ತದೆ, ಇದು ಸೇಬಿನ ರಸದಿಂದ ಸ್ವಲ್ಪ ಭಿನ್ನವಾಗಿರುತ್ತದೆ. ಇದು ತೂಕ ಇಳಿಕೆ ಮತ್ತು ಬೆಲ್ಲಿ ಫ್ಯಾಟ್ ಕರಗಿಸಲು ತುಂಬಾ ಪ್ರಯೋಜನಕಾರಿ ಪಾನೀಯ ಎಂದು ಗುರುತಿಸಲ್ಪಟ್ಟಿದೆ. 


ಆಪಲ್ ಜ್ಯೂಸ್‌ಗಿಂತ ಕೊಂಚ ಭಿನ್ನವಾಗಿರುವ ಈ ಪಾನೀಯವು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಇದು ಕೊಬ್ಬನ್ನು ಹೆಚ್ಚಿಸದ ಕಡಿಮೆ ಕ್ಯಾಲೋರಿ ಪಾನೀಯವಾಗಿದೆ. ಇದು ನಮ್ಮ ಚಯಾಪಚಯವನ್ನು ಸುಧಾರಿಸುವಲ್ಲಿ ಪರಿಣಾಮಕಾರಿ ಆಗಿದೆ. 


ಇದನ್ನೂ ಓದಿ- ತೂಕ ಇಳಿಕೆ ಜೊತೆಗೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಹುರಿಗಡಲೆ


ಆಪಲ್ ಸೈಡರ್ ವಿನೆಗರ್ ಕುಡಿಯುವ ಸರಿಯಾದ ಮಾರ್ಗ:
ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ 2 ಚಮಚ ಆಪಲ್ ಸೈಡರ್ ವಿನೆಗರ್ ಮಿಕ್ಸ್ ಮಾಡಿ ಕುಡಿಯಬೇಕು. ಆಪಲ್ ಸೈಡರ್ ವಿನೆಗರ್ ಅನ್ನು ನಿತ್ಯ ಬೆಳಿಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ, ನೆನಪಿಡಿ ಈ ಪಾನೀಯವನ್ನು ಡೈರೆಕ್ಟ್ ಆಗಿ ಕುಡಿಯಬೇಕು. ತುಂಬಾ ಹೊತ್ತು ಬಾಯಲ್ಲಿಟ್ಟು ನಿಧಾನವಾಗಿ ಕುಡಿಯುವುದರಿಂದ ಹಲ್ಲಿನ ಹಾನಿ, ಎದೆಯುರಿ, ಗಂಟಲು ನೋವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.