Frizzy Hair Solution: ಈ ಒಂದು ವಸ್ತುವನ್ನು ಕೂದಲಿಗೆ ಹಚ್ಚಿದರೆ ಕೂದಲು ಸೂಪರ್ ಸಿಲ್ಕಿಯಾಗುತ್ತದೆ !
How to make frizzy hair solution:ನಿಸ್ತೇಜ ನಿರ್ಜೀವ ಕೂದಲನ್ನು ಮತ್ತೆ ಫಳ ಫಳನೆ ಹೊಳೆಯುವಂತೆ ಮಾಡುವ ಸುಲಭ ಪರಿಹಾರ ಒಂದಿದೆ. ಈ ಮನೆಮದ್ದು ನಿಮ್ಮ ನಿರ್ಜೀವ ಕೂದಲಿಗೆ ಹೊಸ ಜೀವ ತುಂಬುತ್ತದೆ.
How to make frizzy hair solution : ಉದ್ದ ದಟ್ಟ ನೀಳ ಕೂದಲು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಅದರಲ್ಲೂ ರೇಷ್ಮೆ ಯಂಥಹ ಹೊಳೆಯುವ ಕೂದಲು ಇರಬೇಕು ಎನ್ನುವುದು ಪ್ರತಿಯೊಬ್ಬ ಹೆಣ್ಣು ಮಗಳ ಮನದಾಸೆ. ಆದರೆ ಮಳೆಗಾಲ ಬಂತೆಂದರೆ ಸಾಕು ಕೂದಲು ನಿಸ್ತೇಜಗೊಂಡು ನಿರ್ಜೀವವಾಗಲು ಶುರುವಾಗುತ್ತದೆ. ಅಂಥಹ ನಿಸ್ತೇಜ ನಿರ್ಜೀವ ಕೂದಲನ್ನು ಮತ್ತೆ ಫಳ ಫಳನೆ ಹೊಳೆಯುವಂತೆ ಮಾಡುವ ಸುಲಭ ಪರಿಹಾರ ಒಂದಿದೆ. ಈ ಮನೆಮದ್ದು ನಿಮ್ಮ ನಿರ್ಜೀವ ಕೂದಲಿಗೆ ಹೊಸ ಜೀವ ತುಂಬುತ್ತದೆ.
ಈ ಮನೆ ಮದ್ದು ತಯಾರಿಸಲು ತಗಲುವ ವೆಚ್ಚ ಕಡಿಮೆ :
ಈ ಮನೆಮದ್ದನ್ನು ತಯಾರಿಸಲು ತಗಲುವ ವೆಚ್ಚ ಕೂಡಾ ಬಹಳ ಕಡಿಮೆ. ಇದಕ್ಕಾಗಿ ಮೊಟ್ಟೆ ಮತ್ತು ಆಲಿವ್ ಎಣ್ಣೆ ಇದ್ದರೆ ಸಾಕು. ಮೊಟ್ಟೆ ಮತ್ತು ಆಲಿವ್ ಆಯಿಲ್ ಸಹಾಯದಿಂದ ಈ ದ್ರಾವಣವನ್ನು ತಯಾರಿಸಲಾಗುತ್ತದೆ. ಮೊಟ್ಟೆಯ ಬಿಳಿ ಭಾಗದಲ್ಲಿ ಬಯೋಟಿನ್ ಎಂಬ ಅಂಶವಿದ್ದು, ಇದು ಕೂದಲಿಗೆ ಮಾಯಿಶ್ಚರೈಸರ್ ನಂತೆ ಕೆಲಸ ಮಾಡುತ್ತದೆ. ಹೀಗಾಗಿ ಕೂದಲು ಉದುರುವ ಸಮಸ್ಯೆ ತಡೆಗೆ ಇದು ಬೆಸ್ಟ್ ಮೆಡಿಸಿನ್. ಆಲಿವ್ ಎಣ್ಣೆಯು ಕೂದಲಿನ ಇಲಾಸ್ಟಿಸಿಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಕಾರಣದಿಂದಲೇ ಮೊಟ್ಟೆ ಮತ್ತು ಆಲಿವ್ ಆಯಿಲ್ ಸೇರಿಸಿ ತಯಾರಿಸುವ ಈ ಹೇರ್ ಮಾಸ್ಕ್ ಮೃದುವಾದ ಮತ್ತು ಹೊಳೆಯುವ ಕೂದಲನ್ನು ಪಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Nutmeg : ಜಾಯಿಕಾಯಿಯ ಅದ್ಭುತ ಆರೋಗ್ಯ ಪ್ರಯೋಜನಗಳಿವು..!
ಈ ಹೇರ್ ಮಾಸ್ಕ್ ತಯಾರಿಸಲು ಬೇಕಾಗುವ ಸಾಮಗ್ರಿ :
1.ಮೊಟ್ಟೆ 1
2. ಆಲಿವ್ ಎಣ್ಣೆ 1 ಟೇಬಲ್ ಚಮಚ
ಹೇರ್ ಮಾಸ್ಕ್ ತಯಾರಿಸುವ ವಿಧಾನ :
1. ಫ್ರಿಜ್ಜಿ ಹೇರ್ ಸೊಲ್ಯೂಷನ್ ಮಾಸ್ಕ್ ತಯಾರಿಸಲು ಮೊದಲು 1 ಬೌಲ್ ತೆಗೆದುಕೊಳ್ಳಿ.
2. ನಂತರ ಅದರಲ್ಲಿ 1 ಮೊಟ್ಟೆಯನ್ನು ಒಡೆಯಿರಿ.
3. ಇದರ ನಂತರ ಅದರಲ್ಲಿ ಆಲಿವ್ ಎಣ್ಣೆಯನ್ನು ಹಾಕಿ.
4. ಎರಡೂ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
5. ಹೀಗೆ ತಯಾರಿಸಿದ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ.
ಈ ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚುವುದು ಹೇಗೆ ? :
1.ನಿಮ್ಮ ಕೂದಲಿನ ಬೇರಿನಿಂದ ತುದಿಯವರೆಗೆ ಈ ದ್ರಾವಣವನ್ನು ಹಚ್ಚಬೇಕು.
2. ಹೀಗೆ ಹಚ್ಚಿದ ಮೇಲೆ ಈ ದ್ರಾವಣವನ್ನು ಕೂದಲಿನ ಮೇಲೆ ಕನಿಷ್ಠ 20-25 ನಿಮಿಷಗಳ ಕಾಲ ಬಿಡಿ.
3.ಇದರ ನಂತರ, ಶವರ್ ಕವರ್ನೊಂದಿಗೆ ಕೂದಲನ್ನು ಚೆನ್ನಾಗಿ ಮುಚ್ಚಿ.
4. 25 ನಿಮಿಷಗಳ ನಂತರ ಕೂದಲನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದು ಒಣಗಿಸಿ.
5. ಇದನ್ನೂ ಹಚ್ಚಿದ ನಂತರ ಕೂದಲಿಗೆ ಕಂಡೀಶನರ್ ಹಚ್ಚುವ ಅವಶ್ಯಕತೆ ಇಲ್ಲ.
6. ಉತ್ತಮ ಫಲಿತಾಂಶಗಳಿಗಾಗಿ, ವಾರಕ್ಕೆ ಎರಡು ಬಾರಿ ಈ ಹೇರ್ ಮಾಸ್ಕ್ ಅನ್ನು ಪ್ರಯತ್ನಿಸಿ.
ಇದನ್ನೂ ಓದಿ : Health Tips: ಉತ್ತಮ ಆರೋಗ್ಯ ಪಡೆಯಲು ಈ ಆಹಾರ ಸೇವಿಸಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.