White Hair Natural Remedy : ನಿಮ್ಮ ಕೂದಲಿಗೆ ಬಣ್ಣ ಹಚ್ಚುವ ವಿಷಯ ಬಂದಾಗಲೆಲ್ಲ ಟ್ರೆಂಡ್‌ನಲ್ಲಿರುವ ಬಣ್ಣವನ್ನು ಖರೀದಿಸಿ ತರುತ್ತೀರಿ. ಆದರೆ ಇದು ನಿಮ್ಮ ಕೂದಲಿನ ಆರೋಗ್ಯವನ್ನು ಹಾಳು ಮಾಡುತ್ತದೆ.ಇದರ ಬದಲಿಗೆ ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿಕೊಂಡು ಬಿಳಿ ಕ್ಲುದಲಿಘೆ ಶಾಶ್ವತ ಕಪ್ಪು ಬಣ್ಣ ನೀಡಬಹುದು.ಇದನ್ನು ಬಳಸುವ ಮೂಲಕ ಬಿಳಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುವುದಲ್ಲದೆ, ಆರೋಗ್ಯಕರವಾಗಿಯೂ ಉಳಿಯುತ್ತದೆ.ಇದು ನಿಮ್ಮ ಕೂದಲಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ.


COMMERCIAL BREAK
SCROLL TO CONTINUE READING

ಬಿಳಿ ಕೂದಲನ್ನು ಕಪ್ಪು ಮಾಡಲು ಬೇಕಾಗುವ ಸಾಮಗ್ರಿಗಳು : 
ಕೂದಲಿಗೆ ದುಬಾರಿ ಬಣ್ಣಗಳನ್ನು ಬಳಸಿ  ಬೇಸತ್ತಿದ್ದರೆ  ನೀವು ಈ ಮನೆಮದ್ದನ್ನು ಅಳವಡಿಸಿಕೊಳ್ಳಬಹುದು.
 ಇದಕ್ಕೆ ಬೇಕಾಗುವ ಸಾಮಗ್ರಿಗಳು : 
100 ಗ್ರಾಂ ಗೋರಂಟಿ ಪುಡಿ
1 ನಿಂಬೆ 
1 ಚಮಚ ಕಾಫಿ ಪುಡಿ
ಅನುಕೂಲಕ್ಕೆ ತಕ್ಕಂತೆ ನೀರು


ಇದನ್ನೂ ಓದಿ :ನಿತ್ಯ ಒಂದು ಲೋಟ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಂಜೆಯೊಳಗೆ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್ !


ತಯಾರಿಸುವ ವಿಧಾನ : 
1.ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಗೋರಂಟಿ ಪುಡಿ ಮತ್ತು ಕಾಫಿ ಪುಡಿಯನ್ನು ಸೇರಿಸಿ.ಈಗ ಅಗತ್ಯಕ್ಕೆ ಅನುಸಾರವಾಗಿ ನೀರು ಬೆರೆಸಿ ದಪ್ಪವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ.ಈ ಪೇಸ್ಟ್ ಮೊಸರಿನಷ್ಟು ದಪ್ಪವಾಗಿರಬೇಕು. 


2.ಈಗ ಈ ಮಿಶ್ರಣಕ್ಕೆ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.


3.  ಹೀಗೆ ಸಿದ್ಧಪಡಿಸಿದ ಮಿಶ್ರಣವನ್ನು ಕೆಲವು ಗಂಟೆಗಳ ಕಾಲ ಹಾಗೆಯೇ ಮುಚ್ಚಿಡಿ.ಈ ರೀತಿ ಮಾಡುವುದರಿಂದ ಗೋರಂಟಿ ಪುಡಿಯಿಂದ ನೈಸರ್ಗಿಕ ಬಣ್ಣವನ್ನು ಬಿಡುತ್ತದೆ. 


4. ಈಗ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ. ಸುಮಾರು 2-3 ಗಂಟೆಗಳ ಕಾಲ ಈ ಪೇಸ್ಟ್ ಅನ್ನು ಕೂದಲಿನಲ್ಲಿ ಇಟ್ಟು ನಂತರ ಕೂದಲನ್ನು ತೊಳೆಯಿರಿ. ಆದರೆ, ಕೂದಲಿಗೆ ಈ ಪೇಸ್ಟ್ ಅನ್ನು ಹಚ್ಚುವ ಮೊದಲು ಕೂದಲನ್ನು ಚೆನ್ನಾಗಿ ತೊಳೆದಿರಬೇಕು ಎನ್ನುವುದು ನೆನಪಿರಲಿ. 


ಇದನ್ನೂ ಓದಿ :ನಿಮ್ಮ ನಾಲಗೆ ಹೀಗಾಗುತ್ತಿದ್ದರೆ ಲಿವರ್ ಆರೋಗ್ಯ ಕೆಡುತ್ತಿದೆ ಎಂದರ್ಥ! ಕೂಡಲೇ ಚೆಕ್ ಮಾಡಿಕೊಳ್ಳಿ


5. ಕೂದಲಿಗೆ ಈ ಪೇಸ್ಟ್ ಅನ್ನು ಸರಿಯಾಗಿ ಹಚ್ಚಲು ಉತ್ತಮ ಮಾರ್ಗವೆಂದರೆ ಕೂದಲನ್ನು ಎರಡು ಭಾಗಗಳಾಗಿ ವಿಂಗಡಿಸಿ ಹಚ್ಚುವುದು. ಹೀಗೆ ಮಾಡುವುದರಿಂದ ಕೂದಲಿನ ಬೇರುಗಳ ಇದು ಸರಿಯಾಗಿ ಅನ್ವಯವಾಗುತ್ತದೆ.  ಕೂದಲು ಚೆನ್ನಾಗಿ ಬಣ್ಣವನ್ನು ಪಡೆಯುತ್ತದೆ. 


6. ಇನ್ನು ಈ ಮಿಶ್ರಣ ಹಚ್ಚಿದ ನಂತರ ಮೊದಲ ಬಾರಿಗೆ ಕೂದಲು ತೊಳೆಯುವಾಗ ಶಾಂಪೂ ಹಚ್ಚಬೇಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.