Hair Care Tips: ಪ್ರತಿಯೊಬ್ಬ ಮಹಿಳೆಯರು ತಮಗೆ ಸಮೃದ್ಧವಾದ ಕೇಶರಾಶಿಯನ್ನು ಹೊಂದಬೇಕು ಎಂದು ಆಸೆಪಡುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಿಂದ ಅನೇಕ ರೀತಿಯ ಶ್ಯಾಂಪೂಗಳನ್ನು ತಂದು ಬಳಕೆ ಮಾಡುತ್ತಾರೆ. ಆದರೆ ಇದಕ್ಕೆಲ್ಲಾ ಮನೆಯಂಗಳದಲ್ಲಿಯೇ ಮನೆಮದ್ದು ಇದೆ ಎಂಬುದು ನಿಮಗೆ ತಿಳಿದಿದೆಯೇ? ಇಂದು ಅವುಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Shubh Rajyog 2023 : 700 ವರ್ಷಗಳ ನಂತರ 5 ರಾಜಯೋಗಗಳು, ಈ ನಾಲ್ಕು ರಾಶಿಯವರಿಗೆ ಭಾರಿ ಆರ್ಥಿಕ ಲಾಭ!


ಕೂದಲನ್ನು ನಯವಾಗಿ ಮತ್ತು ಹೊಳೆಯುವಂತೆ ಮಾಡಲು ಅಲೋವೆರಾ ಉತ್ತಮ ಚಿಕಿತ್ಸೆಯಾಗಿ ಪ್ರಭಾವ ಬೀರುತ್ತದೆ. ಇದರಲ್ಲಿರುವ ಅನೇಕ ಉತ್ಕರ್ಷಣ ಗುಣಗಳು ನಿಮ್ಮ ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡಲು ಸಹಾಯ ಮಾಡುತ್ತದೆ.


ಅಲೋವೆರಾದಿಂದ ಕೂದಲಿನ ಚಿಕಿತ್ಸೆ ಹೇಗೆ? ಅದಕ್ಕಾಗಿ ಬೇಕಾಗಿರುವ ವಸ್ತುಗಳು ಯಾವುವು ಎಂದು ತಿಳಿಯೋಣ.


 ಅಲೋವೆರಾ, ತೆಂಗಿನ ಎಣ್ಣೆ 2 ರಿಂದ 4 ಸ್ಪೂನ್, ವಿಟಮಿನ್-ಇ 1 ಕ್ಯಾಪ್ಸುಲ್ ಈ ಮನೆಮದ್ದು ತಯಾರಿಸಲು ಬೇಕಾದ ಪ್ರಮುಖ ವಸ್ತುಗಳು.


ಈ ಮನೆಮದ್ದು ತಯಾರಿಸಲು ಮೊದಲನೆಯದಾಗಿ ಒಂದು ಬೌಲ್ ತೆಗೆದುಕೊಳ್ಳಿ. ನಂತರ ಅದರಲ್ಲಿ ಅಲೋವೆರಾವನ್ನು ಕತ್ತರಿಸಿ ತಿರುಳನ್ನು ಹೊರತೆಗೆಯಿರಿ. ಇದರ ನಂತರ ಸುಮಾರು 2 ರಿಂದ 4 ಟೀ ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ. ಇದೇ ಮಿಶ್ರಣಕ್ಕೆ 1 ವಿಟಮಿನ್-ಇ ಕ್ಯಾಪ್ಸುಲ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.


ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ, ಕೆಲ ಸಮಯದ ಬಳಿಕ ಸಾಮಾನ್ಯ ನೀರಿನಿಂದ ತೊಳೆದು ಸ್ವಚ್ಛಗೊಳಿಸಿ. ಇದು ನಿಮ್ಮ ಕೂದಲನ್ನು ನಯವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಇದೇ ಪ್ರಕ್ರಿಯೆಯನ್ನು ತಿಂಗಳಿಗೆ 2 ರಿಂದ ಮೂರು ಬಾರಿ ಮಾಡಿದರೆ ಕೂದಲು ಮತ್ತಷ್ಟು ಚೆನ್ನಾಗಿ ಬೆಳೆಯಲು ಪ್ರಾರಂಭವಾಗುತ್ತದೆ.


ಇದನ್ನೂ ಓದಿ: Shubh Rajyog 2023 : 700 ವರ್ಷಗಳ ನಂತರ 5 ರಾಜಯೋಗಗಳು, ಈ ನಾಲ್ಕು ರಾಶಿಯವರಿಗೆ ಭಾರಿ ಆರ್ಥಿಕ ಲಾಭ!


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.