ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ಎರಡು ಹನಿ ತುಪ್ಪ ಹಚ್ಚಿದರೆ ಈ ಮೂರು ಸಮಸ್ಯೆಯಿಂದ ಮುಕ್ತಿ
Ghee in Navel Benefits: ತುಪ್ಪವನ್ನು ಹೊಕ್ಕಳಿಗೆ ಹಚ್ಚುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರ ಮೂಲಕ, ಚರ್ಮ ಮತ್ತು ದೇಹದ ಅನೇಕ ಭಾಗಗಳು ಪ್ರಯೋಜನಗಳನ್ನು ಪಡೆಯುತ್ತವೆ.
Ghee in Navel Benefits : ಶುದ್ಧ ತುಪ್ಪವನ್ನು ಚಪಾತಿ, ದೋಸೆಗೆ ಹಚ್ಚಿ ತಿನ್ನುವುದು. ಬಿಸಿ ಅನ್ನದ ಜೊತೆ ತಿನ್ನುವುದು, ಅಲ್ಲದೆ ಸಾಂಬಾರ್ ರಸಂಗೆ ಸೇರಿಸುವುದರಿಂದ ದೇಹಕ್ಕೆ ಸಿಗುವ ಅನೇಕ ಪ್ರಯೋಜನಗಳ ಬಗ್ಗೆಸಾಮಾನ್ಯವಾಗಿ ಅನೇಕರಿಗೆ ತಿಳಿದಿರುತ್ತದೆ. ಮೂಳೆಗಳ ಆರೋಗ್ಯಕ್ಕೆ ತುಪ್ಪ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ತುಪ್ಪವನ್ನು ಸೇವಿಸುವುದು ಮಾತ್ರವಲ್ಲದೆ ದೇಹದ ಕೆಲವು ಭಾಗಗಳಿಗೆ ಹಚ್ಚುವುದರಿಂದ ಕೂಡಾ ಇದರ ಆರೋಗ್ಯ ಲಾಭಗಳನ್ನು ಪಡೆಯಬಹುದು. ಆಯುರ್ವೇದದ ಪ್ರಕಾರ ತುಪ್ಪವನ್ನು ಮೂಗಿಗೆ ಅಥವಾ ತಲೆಗೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳು ಲಭಿಸುತ್ತವೇ. ಹಾಗೆಯೇ ಹೊಟ್ಟೆಯ ಮಧ್ಯ ಭಾಗ ಅಂದರೆ ಹೊಕ್ಕುಳಿಗೆ ತುಪ್ಪವನ್ನು ಹಚ್ಚುವುದರಿಂದ ಆಗುವ ಲಾಭಗಳ ಬಗ್ಗೆ ನಿಮಗೆ ತಿಳಿದಿದೆಯೇ? .
ಹೊಕ್ಕುಳಿಗೆ ತುಪ್ಪವನ್ನು ಹಚ್ಚುವುದರಿಂದ ಆಗುವ ಲಾಭ :
ಚರ್ಮ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿ :
ದೇಹದ ಇತರ ಭಾಗಗಳನ್ನು ಆರೋಗ್ಯಕರವಾಗಿಡಲು ತುಪ್ಪ ಪ್ರಯೋಜನಕಾರಿಯಾಗಿದೆ. ಪ್ರತಿದಿನ ರಾತ್ರಿ ಎರಡು ಹನಿ ತುಪ್ಪವನ್ನು ಹೊಕ್ಕಳಿಗೆ ಹಚ್ಚಿದರೆ ಹೊಟ್ಟೆನೋವು, ಮಲಬದ್ಧತೆ ಮೊದಲಾದ ಹಲವು ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಇದನ್ನೂ ಓದಿ : Lemongrass Tea ಯ ಈ ಪ್ರಯೋಜನಗಳು ನಿಮಗೆ ತಿಳಿದಿಲ್ಲದಿರಬಹುದು! ಇಲ್ಲದಿದ್ದರೆ ಇಷ್ಟೊತ್ತಿಗೆ ಈ ಟೀಯ ರುಚಿ ನೋಡಿರುತ್ತೀರಿ
ಮೊಣಕಾಲು ನೋವಿನಿಂದ ಪರಿಹಾರ :
ಪ್ರತಿ ರಾತ್ರಿ ಮಲಗುವ ಮುನ್ನ ತುಪ್ಪವನ್ನು ಹಚ್ಚಿ ಹೊಕ್ಕುಳನ್ನು ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಮೊಣಕಾಲು ನೋವಿಗೆ ಶೀಘ್ರವೇ ಪರಿಹಾರ ಸಿಗುತ್ತದೆ. ಇನ್ನು ನಿಮ್ಮ ಮೊಣಕಾಲುಗಳ ಮೇಲೆ ಉಗುರು ಬೆಚ್ಚಗಿನ ತುಪ್ಪವನ್ನು ಕೂಡಾ ಹಚ್ಚಿ ಮಸಾಜ್ ಮಾಡಬಹುದು.
ಚರ್ಮದ ಶುಷ್ಕತೆ ದೂರವಾಗುತ್ತದೆ :
ಚಳಿಗಾಲದಲ್ಲಿ, ಒಣ ತ್ವಚೆಯ ಸಮಸ್ಯೆಯಿಂದ ಜನರು ತೊಂದರೆಗೊಳಗಾಗುತ್ತಾರೆ. ತುಪ್ಪ ಈ ಸಮಸ್ಯೆಗೆ ಪರಿಹಾರ ನೀಡುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಎರಡು ಹನಿ ತುಪ್ಪವನ್ನು ಹೊಕ್ಕಳಿಗೆ ಹಾಕಿದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಇದನ್ನೂ ಓದಿ :ಫಸ್ಟ್ ಟೈಮ್ ಸೆಕ್ಸ್ ಮಾಡಿದ್ರೆ ಮಹಿಳೆಯರ ದೇಹದಲ್ಲಿ ಈ ದೊಡ್ಡ ಬದಲಾವಣೆ ಆಗುತ್ತೆ..! ಏನದು ಗೊತ್ತೆ..?
ತುಟಿಗಳನ್ನು ಮೃದುವಾಗಿಸುತ್ತದೆ :
ತುಟಿಗಳನ್ನು ಮೃದುಗೊಳಿಸಲು ಹೊಕ್ಕುಳಿಗೆ ತುಪ್ಪವನ್ನು ಹಚ್ಚಬಹುದು. ಪ್ರತಿದಿನ ಹೊಕ್ಕುಳಿಗೆ ತುಪ್ಪವನ್ನು ಹಚ್ಚುವುದರಿಂದ ತುಟಿಗಳು ಮೊದಲಿಗಿಂತ ಮೃದುವಾಗುತ್ತದೆ. ಮಾತ್ರವಲ್ಲ ಗುಲಾಬಿ ಬಣ್ಣವನ್ನು ಪಡೆದುಕೊಳ್ಳುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.