ಮಯೆಲಾಯ್ಡ್ ಲುಕೇಮಿಯಾ ಚಿಕಿತ್ಸೆಯ ಸೂಕ್ತವಾದ ನಿರ್ವಹಣೆ ಹೀಗೆ ಮಾಡಿ.!
Myeloid Leukemia : ವಿಶ್ವ ದೀರ್ಘಾವಧಿ ಮಯೆಲಾಯ್ಡ್ ಲುಕೇಮಿಯಾ ದಿನದಂದು ಚಿಕಿತ್ಸೆಯ ಸೂಕ್ತವಾದ ನಿರ್ವಹಣೆ ಮತ್ತು ಅನುಸರಣೆಯನ್ನು ಒತ್ತಿಹೇಳಿದ ತಜ್ಞರು.
Myeloid Leukemia: ಸೆಪ್ಟೆಂಬರ್ 22, 2022ರಂದು ಜಗತ್ತು ವಿಶ್ವ ದೀರ್ಘಾವಧಿ ಮಯೆಲಾಯ್ಡ್ ಲುಕೇಮಿಯಾ ದಿನ ಪಾಲಿಸುತ್ತಿರುವಂತಹ ಸಂದರ್ಭದಲ್ಲಿ, ಮುಂಚೂಣಿ ವೈದ್ಯಕೀಯ ತಜ್ಞರುಗಳು, ತತ್ಸಂಬಂಧಿತವಾಗಿ ಅಪರೂಪದ ಬೋನ್ ಮ್ಯಾರೋ ಮತ್ತು ರಕ್ತದ ಕ್ಯಾನ್ಸರ್ ನ ಒಂದು ವಿಧವಾದ ಈ ಸ್ಥಿತಿಯ ಕುರಿತು ಅರಿವು ಸೃಷ್ಟಿಸುವ ಅಗತ್ಯವನ್ನು ಒತ್ತಿಹೇಳುತ್ತಿದ್ದಾರೆ. ದೀರ್ಘಾವಧಿ ಮಯೆಲಾಯ್ಡ್ ಲುಕೇಮಿಯ(ಸಿಎಮ್‍ಎಲ್), ಪ್ರತಿ 100,000 ರೋಗಿಗಳ ಪೈಕಿ 0.4ರಿಂದ 3.9 ಸಂದರ್ಭ ಪ್ರಕರಣಗಳಿಗೆ ಕಾರಣವಾಗಿ, ವಯಸ್ಸಾಗುತ್ತಿದ್ದಂತೆ ವೃದ್ಧಿಸುತ್ತದೆ ಮತ್ತು ಬಹುತೇಕ ಹೆಚ್ಚಾಗಿ ಪುರುಷರಲ್ಲೇ ಏರ್ಪಡುತ್ತದೆ. ಇದೊಂದು ದೀರ್ಘಾವಧಿ ಕಾಯಿಲೆಯಾಗಿದ್ದು ರೋಗಿಗಳು ಜೀವನಪರ್ಯಂತ ಚಿಕಿತ್ಸೆ ತೆಗೆದುಕೊಳ್ಳಬೇಕಾಗಿರುವುದರಿಂದ, ಇದರ ಸೂಕ್ತವಾದ ನಿರ್ವಹಣೆ ಮತ್ತು ಚಿಕಿತ್ಸೆಯ ಅನುಸರಣೆಯನ್ನು ತಜ್ಞರು ಒತ್ತಿ ಹೇಳುತ್ತಾರೆ.
ಇದನ್ನೂ ಓದಿ : Benefits Of Taking Facial Steam : ನೀವು 'ಫೇಶಿಯಲ್ ಸ್ಟೀಮ್' ಮಾಡಿಕೊಳ್ಳುವಾಗ ಮಾಡದಿರಿ ಈ ತಪ್ಪುಗಳನ್ನು!
ಸಿಎಮ್‍ಎಲ್, ಕ್ರೋಮೋಸೋಮ್‍ಗಳು ತಕ್ಷಣ ಪರಿವರ್ತನೆಗೊಳ್ಳುವುದರಿಂದ ಏರ್ಪಡುತ್ತದೆ ಮತ್ತು ರೋಗಗ್ರಸ್ತ ಬಿಳಿರಕ್ತಕಣಗಳು ಅಪಾರ ಸಂಖ್ಯೆಯಲ್ಲಿ ಶೇಖರಗೊಂಡು ಆರೋಗ್ಯವಂತ ಕೆಂಪುರಕ್ತಕಣಗಳನ್ನು ಅಡ್ಡಗಟ್ಟಿ ಬೋನ್ ಮ್ಯಾರೋ(ಅಸ್ತಿಮಜ್ಜೆ)ವನ್ನು ಹಾಳುಗೆಡವುತ್ತದೆ.
ಬೆಂಗಳೂರಿನ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯ ವೈದ್ಯಕೀಯ ಕ್ಯಾನ್ಸರ್ ರೋಗತಜ್ಞರಾದ ಡಾ. ಸುರೇಶ್ ಬಾಬು, “ಸಿಎಮ್‍ಎಲ್‍ನಲ್ಲಿ ನಾವು ತೂಕನಷ್ಟ, ಮೂಳೆಗಳ ನೋವು, ಮತ್ತು ವಿಪರೀತ ಬೆವರುವಿಕೆಯನ್ನು ಗಮನಿಸುತ್ತಿರಬೇಕು. ಈಗ ಹೊರಬಂದಿರುವ ಹಲವಾರು ವಿನೂತನ ಚಿಕಿತ್ಸೆಗಳು, ಟಿಕೆಐ(TKIs)ಗಳ ಅನೇಕ ರೂಪ ಮತ್ತು ಆವೃತ್ತಿಗಳಾಗಿವೆ. ಟಿಕೆಐ ಆರಂಭಿಸಿದ ಮೇಲೆ, ಪರಿಸ್ಥಿತಿ ಸುಧಾರಿಸುವ ತನಕ ಪ್ರತಿ 3 ತಿಂಗಳಿಗೊಮ್ಮೆ ಮತ್ತು ತದನಂತರ ರೋಗವು ಉಲ್ಬಣಗೊಳ್ಳುತ್ತಿದ್ದಂತೆ, 3-6 ತಿಂಗಳುಗಳಿಗೊಮ್ಮೆ ಚಿಕಿತ್ಸೆಯನ್ನು ಪುನರಾವರ್ತಿಸುತ್ತಿರಬೇಕು. ಟಿಕೆಐಗಳ ಅನುಸರಣೆಯನ್ನು ಸುಧಾರಿಸಲು ರೋಗಿಗೆ ನೆರವಾಗುವುದರಿಂದ, ನಿಯಮಿತ ಪರೀಕ್ಷೆ ಮತ್ತು ಚಿಕಿತ್ಸೆಯ ಅನುಸರಣೆ ಬಹಳ ಮುಖ್ಯ. ಒಂದೊಮ್ಮೆ ಟಿಕೆಐ ಚಿಕಿತ್ಸೆಯ ಪ್ರಥಮ ಮಾರ್ಗವು ಪರಿಣಾಮಕಾರಿಯಾಗಿಲ್ಲ ಎಂಬುದನ್ನು ನಾವು ಗಮನಿಸಿದರೆ, ನಾವು ಟಿಕೆಐಗಳ ಎರಡನೇ ಮಾರ್ಗವನ್ನು ಆರಂಭಿಸುತ್ತೇವೆ.” ಎಂದು ಹೇಳಿದರು.
ಪರಿಸ್ಥಿತಿಯ ನಿಯಮಿತ ಮೇಲುಸ್ತುವಾರಿಯೂ ಅಷ್ಟೇ ಮುಖ್ಯ. ಸೂಕ್ತವಾದ ಡೋಸ್ ಶಿಫಾರಸು ಮಾಡಲು ವೈದ್ಯರಿಗೆ ಅದು ನೆರವಾಗುವುದರಿಂದ, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ರಕ್ತದಲ್ಲಿ BCR-ABL ಪ್ರೋಟೀನ್‍ನ ಪ್ರಮಾಣವನ್ನು ಪ್ರಾಥಮಿಕವಾಗಿ ಪರೀಕ್ಷಿಸಲು ಮೇಲುಸ್ತುವಾರಿಯನ್ನು ರಕ್ತ ಪರೀಕ್ಷೆಯ ಮೂಲಕ ಕೈಗೊಳ್ಳಲಾಗುತ್ತದೆ. ಹೈದರಾಬಾದಿನ ನಿಜಾಮ್ಸ್ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‍ನ ವೈದ್ಯಕೀಯ ಕ್ಯಾನ್ಸರ್ ರೋಗತಜ್ಞರ್ದ ಡಾ. ಸದಾಶಿವುಡು ಅವರು ಹೇಳುವಂತೆ, “ಅಪರಿಸ್ಥಿತಿಯು ಬಹಳ ಗಂಭೀರವಾಗುವವರೆಗೆ ಸಿಎಮ್‍ಎಲ್ ರೋಗಿಗಳು ಪರಿಸ್ಥಿತಿಯ ಯಾವುದೇ ಚಿಹ್ನೆ ಅಥವಾ ರೋಗಲಕ್ಷಣಗಳನ್ನು ಪ್ರದರ್ಶಿಸುವುದಿಲ್ಲ. ಆದರೆ, ಸಿಎಮ್‍ಎಲ್‍ಅನ್ನು ರಕ್ತಪರೀಕ್ಷೆಯ ಮೂಲಕ ಪತ್ತೆ ಹಚ್ಚಬಹುದು. ರಕ್ತಪರೀಕ್ಷೆಯು ಅಸಹಜ ಬಿಳಿರಕ್ತ ಕಣಗಳ ಸಂಖ್ಯೆಯನ್ನು ತೋರಿಸಿದರೆ, ಅದು ರೋಗದ ಸೂಚನೆಯಾಗಿರಬಹುದು. ಇದರ ಅನುಸರಣೆಯಲ್ಲಿ ದೈಹಿಕ ತಪಾಸಣೆ ಮತ್ತು ಬೋನ್ ಮ್ಯಾರೋ ಪರೀಕ್ಷೆ ಕೈಗೊಳ್ಳಲಾಗುತ್ತದೆ. ಸಿಎಮ್‍ಎಲ್‍ನ ರೋಗಲಕ್ಷಣಗಳು ಸಾಮಾನ್ಯವಾಗಿ ನಿಧಾನವಾಗಿ ಗೋಚರಿಸುತ್ತವೆ ಮತ್ತು ಅತಿಸಣ್ಣ ಶೇಕಡಾವಾರು ಜನರಲ್ಲಿ ಮಾತ್ರ ಇದು ಇನ್ನೂ ಗಂಭೀರವಾದ ರೋಗಲಕ್ಷಣಗಳೊಂದಿಗೆ, ತೀವ್ರಸ್ವರೂಪದ ಲುಕೇಮಿಯಾದ ಗಂಭೀರ ರೂಪವಾಗಿ ಪರಿವರ್ತಿತಗೊಳ್ಳುತ್ತದೆ. ಸಿಎಮ್‍ಎಲ್ ಪ್ರಾಣಾಂತಿಕ ರೋಗವಲ್ಲ ಮತ್ತು ಆಧುನಿಕ ವಿನೂತನ ಚಿಕಿತ್ಸಾ ಆಯ್ಕೆಗಳ ಮೂಲಕ ರೋಗಿಗಳು ಸಾಮಾನ್ಯ ಜೀವಿತಾವಧಿಯವರೆಗೆ ಬದುಕಿದ್ದಾರೆ ಎಂಬುದನ್ನು ರೋಗಿಗಳು ಗಮನದಲ್ಲಿಟ್ಟುಕೊಳ್ಳಬೇಕು.”
ಇದನ್ನೂ ಓದಿ : ಸುಲಭವಾಗಿ ಗಾಯ, ವಿಪರೀತ ರಕ್ತಸ್ರಾವ.! ಇದು ಈ ಗಂಭೀರ ಕಾಯಿಲೆಯ ಲಕ್ಷಣವಿರಬಹುದು
ಸಿಎಮ್‍ಎಲ್‍ಗೆ, ನಿಯಮಿತ ಮೇಲುಸ್ತುವಾರಿ ಮತ್ತು ಚಿಕಿತ್ಸೆಯ ಅನುಸರಣೆ ಬಹಳ ಮುಖ್ಯ. ಸತತವಾದ ಚಿಕಿತ್ಸೆಯ ಮೂಲಕ ಸಿಎಮ್‍ಎಲ್‍ಅನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು. ಚಿಕಿತ್ಸೆಯ ಅನುಸರಣೆಯ ಕೊರತೆಯು ಪರಿಸ್ಥಿತಿಯು ಗಂಭೀರವಾಗುವುದಕ್ಕೆ ಕಾರಣವಾಗಬಹುದು. ಆದ್ದರಿಂದ, ರೋಗಿಗಳು ತಮ್ಮ ಆರೋಗ್ಯಶುಶ್ರೂಷಾ ವೃತ್ತಿಪರರು ಶಿಫಾರಸು ಮಾಡಿರುವಂತೆಯೇ ಔಷಧಗಳನ್ನು ಮುಂದುವರಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಟೈರೋಸಿನ್ ಕೈನೇಸ್ ಇನ್ಹಿಭಿಟರ್ಸ್(ಏಇಕೆಐಗಳು), ಸಿಎಮ್‍ಎಲ್ ಇರುವ ಬಹುತೇಕ ಮಂದಿಗೆಆರಂಭಿಕ ಚಿಕಿತ್ಸಾ ಆಯ್ಕೆಯಾಗಿದ್ದು ಈ ಚಿಕಿತ್ಸೆಯೊಂದಿಗೆ ಮೂರನೇ ಎರಡು ಭಾಗ ರೋಗಿಗಳು ರೋಗದ ಮೇಲೆ ದೀರ್ಘಾವಧಿ ನಿಯಂತ್ರಣ ಹೊಂದುತ್ತಾರೆ. ಸಿಎಮ್‍ಎಲ್, ಸ್ಟೆಮ್ ಸೆಲ್‍ಗಳ ವಂಶವಾಹಿ ಪರಿವರ್ತನೆಯಿಂದ ಏರ್ಪಡುತ್ತದೆಯಾದರೂ ಇದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕಾಯಿಲೆ ವಂಶಪಾರಂಪರ್ಯವಲ್ಲ ಮತ್ತು ಮುಂದಿನ ಪೀಳಿಗೆಗಳಿಗೆ ವರ್ಗವಾಗುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.