ಟೊಮ್ಯಾಟೊ ಸೇವನೆಯಿಂದ ಇಷ್ಟೆಲ್ಲಾ ಲಾಭಗಳಿವೆಯಾ..?
Tomato Benefits: ಖನಿಜಗಳು ಮತ್ತು ಜೀವಸತ್ವಗಳು ಇರುವುದರಿಂದ ಮನುಷ್ಯನ ಆರೋಗ್ಯಕ್ಕೆ ತುಂಬಾ ಟೊಮ್ಯಾಟೊ ಪ್ರಯೋಜನಕಾರಿ. ಹಾಗಾದರೆ ಟೊಮೆಟೊ ಸೇವನೆ ಮಾಡುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ಈ ಮುಂದೆ ನೋಡೋಣ...
Tomato Health Benefits : ಸದ್ಯ ಗಲ್ಲಿಯಿಂದ ಹಿಡಿದು ದಿಲ್ಲಿಯವರೆಗೂ ಟೊಮೆಟೊ ಹಣ್ಣಿನ ಬೆಲೆ ಬಗ್ಗೆ ಚರ್ಚೆ ಆಗುತ್ತಿದೆ. ಆದರೆ ಇದನ್ನೆಲ್ಲಾ ಹೊರತುಪಡಿಸಿ ಟೊಮೆಟೊ ಆರೋಗ್ಯದ ಸಮಸ್ಯೆಗಳಿಗೆ ರಾಮಬಾಣ ಎಂಬುದು ನಿಮಗೆ ತಿಳಿದೆದೆಯೇ..? ಹಾಗಾದರೆ ಇಲ್ಲಿ ತಿಳಿದುಕೊಳ್ಳಿ.
ಹೃದಯವನ್ನು ಆರೋಗ್ಯವಾಗಿಡುತ್ತದೆ
ಟೊಮೆಟೊ ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದರ ನಿಯಮಿತ ಸೇವನೆಯು ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದಯಾಘಾತವನ್ನು ತಡೆಯುತ್ತದೆ.
ಕ್ಯಾನ್ಸರ್ ಅಪಾಯದಿಂದ ದೂರವಿಡುತ್ತದೆ
ಟೊಮೆಟೊದಲ್ಲಿ ಲೈಕೋಪೀನ್ ನಂತಹ ಉತ್ಕರ್ಷಣ ನಿರೋಧಕಗಳಿದ್ದು, ಅವು ಕ್ಯಾನ್ಸರ್ ಕೋಶಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಗಂಟಲು, ಬಾಯಿ, ಹೊಟ್ಟೆ, ಸ್ತನ ಮುಂತಾದ ದೇಹದ ಭಾಗದಲ್ಲಿ ಹುಟ್ಟಿಕೊಳ್ಳುವ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ-Fennel Seeds Health Benefits: ರಕ್ತದಲ್ಲಿನ ಸಕ್ಕರೆ ಮಟ್ಟಕ್ಕೆ ಮಧುಮೇಹಿಗಳು ಸೋಂಪುಕಾಳು ಸೇವಿಸಿ
ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ
ಟೊಮ್ಯಾಟೊದಲ್ಲಿರುವ ವಿಟಮಿನ್ ಮತ್ತು ಕ್ಯಾಲ್ಸಿಯಂ ಮೂಳೆ ಅಂಗಾಂಶಗಳನ್ನು ಸರಿಪಡಿಸಲು ಮತ್ತು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ನಿಯಮಿತ ಸೇವನೆಯು ಮಿದುಳಿನ ರಕ್ತಸ್ರಾವವನ್ನು ತಡೆಯುವಲ್ಲಿ ಸಹ ಬಹಳ ಪರಿಣಾಮಕಾರಿಯಾಗಿದೆ.
ಮಧುಮೇಹವಿದ್ದವರಿಗೆ ಅಮೃತವಿದ್ದಂತೆ
ಟೊಮೆಟೊಗಳು ಕ್ರೋಮಿಯಂನ ಉತ್ತಮ ಮೂಲವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಮತ್ತು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಮೂತ್ರದಲ್ಲಿನ ಸಕ್ಕರೆಯ ಶೇಕಡಾವಾರು ಪ್ರಮಾಣವನ್ನು ನಿಯಂತ್ರಿಸುತ್ತದೆ. ಟೈಪ್-2 ಡಯಾಬಿಟಿಸ್ ರೋಗಿಗಳಿಗೆ ನಿಯಮಿತವಾಗಿ ಟೊಮೆಟೊ ಸೇವನೆಯು ಪ್ರಯೋಜನಕಾರಿಯಾಗಿದೆ.
ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ
ಟೊಮೆಟೊ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಕ್ಲೋರಿನ್ ಮತ್ತು ಸಲ್ಫರ್ ನಿಂದಾಗಿ ಲಿವರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಗ್ಯಾಸ್ ಸಮಸ್ಯೆ ದೂರವಾಗುತ್ತದೆ. ಮಧ್ಯಮ ಗಾತ್ರದ ಟೊಮೆಟೊವು ಕೆಲವು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದು ತೂಕವನ್ನು ಕಡಿಮೆಮಾಡಿಕೊಳ್ಳಲು ಸೂಕ್ತವಾಗಿದೆ.
ಇದನ್ನೂ ಓದಿ-ರಕ್ತ ನಾಳಗಳಲ್ಲಿನ ಮೊಂಡು ಜಿಡ್ಡು ಹಲವು ಗಂಭೀರ ಕಾಯಿಲೆಗಳಿಗೆ ಕಾರಣ, ಇಂದೇ ಅದನ್ನು ಈ ವಿಧಾನದಿಂದ ಹೊರಹಾಕಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.