ಬೆಂಗಳೂರು : ಭಾರತದ ಪ್ರತಿಯೊಂದು ಅಡುಗೆಮನೆಯಲ್ಲಿಯೂ ಇಂಗು ಕಂಡುಬರುತ್ತದೆ. ಇಂಗು ಬಳಸುವ ಮೂಲಕ ಅಡುಗೆಯ ರುಚಿ ಹೆಚ್ಚುವುದಲ್ಲದೆ, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇಂಗು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದು ನಮ್ಮ ದೇಹದ ಹಲವಾರು ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ಸಹಕಾರಿಯಾಗಿದೆ.  


COMMERCIAL BREAK
SCROLL TO CONTINUE READING

ಇಂಗು ತಿನ್ನುವುದರಿಂದ ಈ ಸಮಸ್ಯೆಗಳು ಪರಿಹಾರವಾಗುತ್ತದೆ : 
ಇಂಗನ್ನು ಆರೋಗ್ಯದ ನಿಧಿ ಎಂದೇ ಕರೆಯಲಾಗುತ್ತದೆ. ಇದರಲ್ಲಿರುವ ಔಷಧೀಯ ಗುಣಗಳಿಂದ ಅನೇಕ ರೋಗಗಳಿಂದ ಮುಕ್ತಿ ಪಡೆಯುವುದು ಸಾಧ್ಯವಾಗುತ್ತದೆ. 


ಇದನ್ನೂ ಓದಿ : Health Care Tips: ಈ ಮೊಳಕೆ ಕಾಳು ಸೇವನೆಯಿಂದ ಆರೋಗ್ಯಕ್ಕೆ ಹಲವು ಲಾಭಗಳಾಗುತ್ತವೆ


1. ಅಜೀರ್ಣ : 
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂಗು ಔಷಧಿಯಾಗಿ ಕೆಲಸ ಮಾಡುತ್ತದೆ. ಅಜೀರ್ಣದ ಸಂದರ್ಭದಲ್ಲಿ, ಒಂದು ಲೋಟ ಉಗುರುಬೆಚ್ಚನೆಯ ನೀರನ್ನು ತೆಗೆದುಕೊಂಡು ಅದರಲ್ಲಿ ಇಂಗನ್ನು  ಬೆರೆಸಿ ಕುಡಿಯಿರಿ. ಇನ್ನೊಂದು ವಿಧಾನವೆಂದರೆ ಇಂಗನ್ನು ರುಬ್ಬಿ ಪೇಸ್ಟ್ ಮಾಡಿಕೊಂಡು ಅದನ್ನು ಹೊಕ್ಕುಳ ಸುತ್ತಲೂ  ಹಚ್ಚಬೇಕು. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. 


2. ತಲೆನೋವು :
ತಲೆನೋವು ಕಾಣಿಸಿಕೊಂಡಾಗ ಪೈನ್ ಕಿಲ್ಲರ್ ತೆಗೆದುಕೊಳ್ಳುತ್ತೇವೆ.  ಆದರೆ ಅದು ಅಪಾಯಕಾರಿ ವಿಧಾನವಾಗಿದೆ. ತಲೆನೋವು ನಿವಾರಣೆಗೆ ನೈಸರ್ಗಿಕ ಪರಿಹಾರ ಎಂದರೆ ಇಂಗು. ಇಂಗನ್ನು ಪೇಸ್ಟ್ ಮಾಡಿಕೊಂಡು ಹಣೆಗೆ ಹಚ್ಚಿದರೆ ಕೆಲವೇ ನಿಮಿಷಗಳಲ್ಲಿ ಪರಿಹಾರ ಸಿಗುತ್ತದೆ.


ಇದನ್ನೂ ಓದಿ : Aloe Vera : ಕೂದಲು ಮತ್ತು ತ್ವಚೆಗೆ ವರದಾನ ಅಲೋವೆರಾ : ಇಲ್ಲಿದೆ ಇದರ ಪ್ರಯೋಜನಗಳು 


3. ಹೊಟ್ಟೆ ಉಬ್ಬುವುದು :
ಅನೇಕ ಜನರಿಗೆ ಅಸಿಡಿಟಿ, ಹೊಟ್ಟೆ ಉಬ್ಬುವ ಸಮಸ್ಯೆ ಕಾಡುತ್ತಾ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಾಸಿವೆ ಎಣ್ಣೆಯೊಂದಿಗೆ ಇಂಗಿನ ಪುಡಿಯನ್ನು ಬೆರೆಸಿ ಹೊಕ್ಕುಳ ಸುತ್ತಲೂ ಉಜ್ಜಿಕೊಳ್ಳಿ. ಹೀಗೆ ಮಾಡುವುದರಿಂದ ಬೇಗನೇ  ಪರಿಹಾರ ಸಿಗುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.