Bad combination with tea : ಕೆಲವರಿಗೆ ನಿದ್ದೆ ಓಡಿಸಬೇಕೆಂದರೆ ಚಹಾ ಬೇಕು. ಇನ್ನು ಕೆಲವರಿಗೆ ಕೆಲಸ ಮಾಡುವ ಮೂಡ್ ಇಲ್ಲ ಎಂದಾದರೆ ಚಹಾ ಬೇಕು. ಹೀಗೆ  ನಾನಾ ಕಾರಣಗಳನ್ನು ಇಟ್ಟು ಕೊಂಡೆ  ಚಹಾ ಕುಡಿಯುತ್ತೇವೆ.  ಹೀಗೆ ಚಹಾ ಕುಡಿಯುವಾಗ ಬರೀ ಚಹಾ ಕುಡಿಯುವ ಬದಲು ಜೊತೆಯಲ್ಲಿ ಏನನ್ನಾದರೂ ತಿನ್ನುವ ಅಭ್ಯಾಸವೂ ಇರುತ್ತದೆ. ಆದರೆ ಚಹಾದ ಜೊತೆ ಎಲ್ಲಾ ವಸ್ತುಗಳನ್ನು ಸೇವಿಸುವಂತಿಲ್ಲ. ಕೆಲವೊಂದು ವಸ್ತುಗಳನ್ನು ಚಹಾದ ಜೊತೆ ತಿಂದರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. 


COMMERCIAL BREAK
SCROLL TO CONTINUE READING

ಲೆಮನ್ ಟೀ :
ಕೆಲವರು ತೂಕ ಇಳಿಸಿಕೊಳ್ಳಲು ಲೆಮನ್ ಟೀ ಕುಡಿಯುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಹೆಚ್ಚಿನ ಜನರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲೆಮನ್ ಟೀ ಕುಡಿಯುವ ಅಭ್ಯಾಸ ಇರುತ್ತದೆ. ಚಹಾದೊಂದಿಗೆ ನಿಂಬೆ ರಸವನ್ನು ಬೆರೆಸಿದರೆ ಚಹಾವನ್ನು ಆಮ್ಲೀಯಗೊಳಿಸುತ್ತದೆ. ಇದರಿಂದ ಹೊಟ್ಟೆ ಉಬ್ಬುವ  ಅಪಾಯ ಎದುರಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ನಿಂಬೆ ಚಹಾವನ್ನು ಸೇವಿಸಿದರೆ,  ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್‌ನಂತಹ ಸಮಸ್ಯೆಗಳು ಉಂಟಾಗಬಹುದು.  


ಇದನ್ನೂ ಓದಿ : Cholesterol ಹೆಚ್ಚಾಗುವುದು ಎಚ್ಚರಿಕೆಯ ಕರೆಗಂಟೆ, ಈ 6 ಸಂಗತಿಗಳ ಬಗ್ಗೆ ಎಚ್ಚರಿಕೆವಹಿಸಿ


ಕಡಲೆ ಹಿಟ್ಟಿನಿಂದ  ಮಾಡಿದ ಆಹಾರ : 
ಹೆಚ್ಚಿನ ಜನರು ಚಹಾದೊಂದಿಗೆ ಪಕೋಡಾ, ಚೌ ಚೌ ತಿನ್ನಲು ಇಷ್ಟಪಡುತ್ತಾರೆ. ಚಹಾದೊಂದಿಗೆ ಸೇವಿಸುವ ಉಪಹಾರವು ಹೆಚ್ಚಾಗಿ  ಕಡಲೆ ಹಿಟ್ಟಿನಿಂದ ಮಾಡಲ್ಪಟ್ಟಿರುತ್ತದೆ.  ಕಡಲೆ ಹಿಟ್ಟಿನಿಂದ ಮಾಡಿದ ವಸ್ತುಗಳು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಚಹಾದೊಂದಿಗೆ ಈ ಆಹಾರಗಳನ್ನು ಸೇವಿಸುವುದರಿಂದ ಆಹಾರದಿಂದ ಪಡೆಯಬಹುದಾದ ಪೋಷಕಾಂಶಗಳ ಪ್ರಮಾಣ ಕಡಿಮೆಯಾಗುತ್ತದೆ. ಏಕೆಂದರೆ ಇದು ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.


 ಐರನ್ ಅಂಶವಿರುವ ಪದಾರ್ಥ : 
 ಐರನ್ ನಲ್ಲಿ ಸಮೃದ್ಧವಾಗಿರುವ ಆಹಾರವನ್ನು ಚಹಾದೊಂದಿಗೆ ತಿನ್ನಬಾರದು ಎಂದು ಗಮನಿಸಬೇಕಾದ ಅಂಶವಾಗಿದೆ. ಅದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಚಹಾದಲ್ಲಿ ಆಕ್ಸಲೇಟ್ ಮತ್ತು ಟ್ಯಾನಿನ್ ಎಂಬ ಅಂಶ ಇರುತ್ತದೆ. ಇವೆರಡೂ ಆಹಾರದಲ್ಲಿರುವ ಐರನ್ ಅಂಶವನ್ನು ಹೀರಿಕೊಳ್ಳಲು ಅಡ್ಡಿಪಡಿಸುತ್ತದೆ. ಹಸಿರು ಎಲೆಗಳ ತರಕಾರಿಗಳು, ಮಸೂರ, ಧಾನ್ಯಗಳು ಮತ್ತು ಬೀಜಗಳಂತಹ ಆಹಾರಗಳನ್ನು ಚಹಾದೊಂದಿಗೆ ಸೇವಿಸಬಾರದು. 


ಇದನ್ನೂ ಓದಿ : Diabetes: ಮಧುಮೇಹ ಕಾಯಿಲೆಗೆ ನಿಮ್ಮ ಅಡುಗೆಮನೆಯ ಈ ಮಸಾಲೆ ರಾಮಬಾಣ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.