Food Combination with Mango : ಬಿಸಿಲ ಬೇಗೆ ಯಾರಿಗೂ ಇಷ್ಟವಾಗುವುದಿಲ್ಲ.ಆದರೆ ಮಾವು ಪ್ರಿಯರು ಮಾತ್ರ ಬೇಸಿಗೆಗಾಗಿ ಕಾಯುತ್ತಿರುತ್ತಾರೆ.ಮಾವಿನ ಹಣ್ಣು ತಿನ್ನುವ ಆನಂದ ಬೇಸಿಗೆಯಲ್ಲಿಯೇ ಸಿಗುವುದು. ಮಾವಿನಲ್ಲಿ ಸಾವಿರಾರು ವಿಧದ ತಳಿಗಳಿವೆ.ರಸಭರಿತವಾದ ಮತ್ತು ಸಿಹಿಯಾದ ಮಾವಿನಹಣ್ಣು ಬಾಯಿಯಲ್ಲಿ ಇಟ್ಟರೆ ಹಾಗೆಯೇ ಕರಗುತ್ತದೆ.ಮಾವಿನ ಹಣ್ಣಿನ ಸೀಸನ್‌ನಲ್ಲಿ ದಿನವೂ ಮಾವು ತಿನ್ನಬೇಕು ಎಂದೆನಿಸುತ್ತದೆ.ಮಾವಿನ ಹಣ್ಣಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳಿರುತ್ತವೆ. ಆದರೂ ಅದನ್ನು ತಿನ್ನುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.ಇಲ್ಲವಾದಲ್ಲಿ ಅದು ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಮಾವಿನ ಹಣ್ಣಿನೊಂದಿಗೆ ಕೆಲವು ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು.ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.


COMMERCIAL BREAK
SCROLL TO CONTINUE READING

ಈ ಆಹಾರಗಳನ್ನು ಮಾವಿನ ಹಣ್ಣಿನೊಂದಿಗೆ ಎಂದಿಗೂ ಸೇವಿಸಬಾರದು :  
ಮೊಸರು : 

ಮೊಸರನ್ನು ಮಾವಿನ ಹಣ್ಣಿನ ಜೊತೆ ತಿನ್ನಬಾರದು.ಮಾವಿನಹಣ್ಣು ತಿಂದ ತಕ್ಷಣ ಮೊಸರು ತಿಂದರೂ ಹಾನಿಯಾಗುತ್ತದೆ.ಮಾವು ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದರಿಂದ ಹೊಟ್ಟೆಯಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತದೆ.  ಇದು ಹೊಟ್ಟೆ ನೋವಿನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.


ಇದನ್ನೂ ಓದಿ : ಮಾವಿನ ಹಣ್ಣನ್ನು ಹೀಗೆ ತಿಂದರೆ ಒಂದೇ ವಾರದಲ್ಲಿ 5 ಕೆಜಿಯಷ್ಟು ತೂಕ ಇಳಿಸಿಕೊಳ್ಳಬಹುದು! ಸೀಸನ್ ಮುಗಿಯೋದ್ರಲ್ಲಿ ಸ್ಲಿಮ್ ಆಗಿ


ತಂಪು ಪಾನೀಯ : 
ರಾತ್ರಿಯ ಊಟದಲ್ಲಿ ಮಾವು ತಿಂದಿದ್ದರೆ ನಂತರ ತಂಪು ಪಾನೀಯಗಳನ್ನು ಕುಡಿಯಬಾರದು. ಮಾವು ಮತ್ತು ತಂಪು ಪಾನೀಯವನ್ನು ಒಟ್ಟಿಗೆ ಸೇವಿಸುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರೊಂದಿಗೆ ಶೀತ ಬಾಧಿಸುವ ಅಪಾಯವೂ ಕಾಡುತ್ತದೆ.


ಮಸಾಲೆ ಭರಿತ ಆಹಾರ : 
ಜನರು ಸಾಮಾನ್ಯವಾಗಿ ರಾತ್ರಿಯ ಊಟ ಅಥವಾ ಊಟದಲ್ಲಿ ಮಾವಿನಹಣ್ಣು ತಿನ್ನಲು ಇಷ್ಟಪಡುತ್ತಾರೆ.ನಿಮಗೂ ಇದು ಇಷ್ಟ ಎಂದಾಗಿದ್ದರೆ ನೀವು ಒಂದು ವಿಚಾರವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.ಮಾವಿನ ಹಣ್ಣು ತಿಂದ ತಕ್ಷಣ ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು.ಈ ರೀತಿ ಮಾಡುವುದರಿಂದ ಅಸಿಡಿಟಿ, ಎದೆಯುರಿ, ಮಲಬದ್ಧತೆ,ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳು ಎದುರಾಗುತ್ತವೆ.


ಹಾಗಲಕಾಯಿ : 
ಹಾಗಲಕಾಯಿಯನ್ನು ಮಾವಿನ ಹಣ್ಣಿನೊಂದಿಗೆ ಸೇವಿಸಬಾರದು. ಹಾಗಲಕಾಯಿಯನ್ನು ಮಾವಿನಹಣ್ಣಿನೊಂದಿಗೆ ತಿನ್ನುವುದರಿಂದ ಅದು ವಿಷವಾಗುತ್ತದೆ ಎಂದು ಹೇಳುತ್ತಾರೆ.ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.


ಇದನ್ನೂ ಓದಿ : ಕಲ್ಲಂಗಡಿ ಬೀಜ ಹೀಗೆ ಸೇವಿಸಿದರೆ ಕೂಡಲೇ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್.. ಬಿಸಾಡುವ ಮುನ್ನ ಬಳಸುವ ವಿಧಾನ ತಿಳಿಯಿರಿ!


ಹಸಿರು ಮೆಣಸಿನಕಾಯಿ : 
ಹಸಿರು ಮೆಣಸಿನಕಾಯಿಯನ್ನು ಕೂಡಾ ಮಾವಿನಕಾಯಿಯೊಂದಿಗೆ ಅಥವಾ ಮಾವಿನ ಹಣ್ಣು ತಿಂದ ತಕ್ಷಣ ತಿನ್ನಬಾರದು.ಇದು ಹೊಟ್ಟೆಯಲ್ಲಿ ಕಿರಿಕಿರಿಯನ್ನು ಉಂಟುಮಾಡಬಹುದು.


ನೀರು ಕುಡಿಯಬೇಡಿ : 
ಮಾವಿನ ಹಣ್ಣನ್ನಷ್ಟೇ ಅಲ್ಲ ಯಾವುದೇ ಹಣ್ಣು ತಿಂದ ತಕ್ಷಣ ನೀರು ಕುಡಿಯಬಾರದು.ಹಣ್ಣು ತಿಂದ ತಕ್ಷಣ ನೀರು ಕುಡಿದರೆ ಹೊಟ್ಟೆ ಉಬ್ಬುವುದು, ಅಜೀರ್ಣ ಮುಂತಾದ ಸಮಸ್ಯೆ ಕಾಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.