ಹಾಲಿನೊಂದಿಗೆ ಎಂದಿಗೂ ಈ ವಸ್ತುಗಳನ್ನು ಸೇವಿಸಲೇ ಬಾರದು, ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ
ದೀರ್ಘಕಾಲದವರೆಗೆ ಈ ರೀತಿ ತಪ್ಪು ಆಹಾರ ಸಂಯೋಜನೆಯನ್ನು ಸೇವಿಸುವುದನ್ನು ಮುಂದುವರಿಸಿದರೆ, ದೀರ್ಘಕಾಲದ ಜೀರ್ಣಕಾರಿ ಸಮಸ್ಯೆಗಳು ಮತ್ತು ಉಸಿರಾಟ ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ನವದೆಹಲಿ : ಸಾಮಾನ್ಯವಾಗಿ ಪೋಷಣೆ ಮತ್ತು ರುಚಿಯ ದೃಷ್ಟಿಯಿಂದ ಎರಡು ಅಥವಾ ಹೆಚ್ಚಿನ ಆಹಾರಗಳನ್ನು (Food Combination) ಒಟ್ಟಿಗೆ ಸೇವಿಸುತ್ತೇವೆ. ಆದರೆ ಕೆಲವೊಂದು ಆಹಾರಗಳನ್ನು ಒಟ್ಟಿಗೆ ಸೇವಿಸಲೇ ಬಾರದು. ಆ ಆಹಾರಗಳನ್ನು ಜೊತೆಯಲ್ಲಿ ತಿನ್ನುವುದರಿಂದ ದೇಹ ಆರೋಗ್ಯಕ್ಕೆ ಅನುಕೂಲವಾಗುವ ಬದಲು ಅನಾನುಕೂಲವೇ ಜಾಸ್ತಿಯಾಗಬಹುದು (Bad food combination). ಈ ಆಹಾರಗಳನ್ನು ಒಟ್ಟಿಗೆ ತಿನ್ನುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಟ್ಟ ಆಹಾರ ಸಂಯೋಜನೆಯಿಂದ ಹೊಟ್ಟೆ ನೋವು, ಹೊಟ್ಟೆ ಉಬ್ಬುವುದು, ಆಯಾಸ, ಗ್ಯಾಸ್, ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು.
ದೀರ್ಘಕಾಲದವರೆಗೆ ಈ ರೀತಿ ತಪ್ಪು ಆಹಾರ ಸಂಯೋಜನೆಯನ್ನು (food combination) ಸೇವಿಸುವುದನ್ನು ಮುಂದುವರಿಸಿದರೆ, ದೀರ್ಘಕಾಲದ ಜೀರ್ಣಕಾರಿ ಸಮಸ್ಯೆಗಳು ಮತ್ತು ಉಸಿರಾಟ ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ಎಲ್ಲರೂ ಯಾವಾಗ ಏನು ತಿನ್ನಬೇಕು ಎನ್ನುವುದರ ಬಗ್ಗೆ ಚಿಂತೆ ಮಾಡುತ್ತಾರೆ. ಆದರೆ ನಮ್ಮಲ್ಲಿ ಹೆಚ್ಚಿನವರು ಕಡೆಗಣಿಸುವ ಒಂದು ದೊಡ್ಡ ಅಂಶವೆಂದರೆ ಸರಿಯಾದ ಆಹಾರ ಜೋಡಣೆ, ಅಂದರೆ ಫುಡ್ ಕಾಂಬಿನೆಶನ್.
ಇದನ್ನೂ ಓದಿ : Better Sleep Diet : ಈ ಐದು ವಸ್ತುಗಳನ್ನು ಸೇವಿಸಿ ನೋಡಿ , ಗಾಢ ನಿದ್ದೆಗೆ ಕೊರತೆಯಿರುವುದಿಲ್ಲ
ಅನೇಕ ಜನರು ತಮ್ಮ ನೆಚ್ಚಿನ ಕುಕೀಸ್, ಹಣ್ಣುಗಳೊಂದಿಗೆ (Fruits) ಹಾಲನ್ನು ಸೇವಿಸುತ್ತಾರೆ. ಆದರೆ ನಾವು ಆಯುರ್ವೇದದ (Ayurveda) ಪ್ರಕಾರ, ತಪ್ಪು ಸಂಯೋಜನೆಯೊಂದಿಗೆ ಹಾಲು ಸೇವಿಸಿದರೆ ಆರೋಗ್ಯಕ್ಕೆ ಅಪಾಯಕಾರಿ ಪರಿಣಮಿಸಬಹುದು.
ಹಾಗಿದ್ದರೆ ಯಾವ ಆಹಾರಗಳನ್ನು ಹಾಲಿನೊಂದಿಗೆ ಸೇವಿಸಬಾರದು ?
ಅನೇಕ ಜನರು ಹಾಲು (Milk) ಮತ್ತು ಬಾಳೆಹಣ್ಣನ್ನು (Banana) ಒಟ್ಟಿಗೆ ತಿನ್ನುತ್ತಾರೆ. ಹಾಲು ಮತ್ತು ಬಾಳೆಹಣ್ಣು ತಿಂದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವ ಕಲ್ಪನೆಯೂ ಬಹಳಷ್ಟು ಜನರಿಗೆ ಇದೆ. ಆದರೆ ಆಯುರ್ವೇದದ ಪ್ರಕಾರ ಹಾಲು ಮತ್ತು ಬಾಳೆಹಣ್ಣನ್ನು ಜೊತೆಯಾಗಿ ಸೇವಿಸುವುದು ನಿಷಿದ್ಧ. ಇವುಗಳನ್ನು ಒಟ್ಟಿಗೆ ಸೇವಿಸುವುದರಿಂದ, ಜೀರ್ಣಕಾರಿ ಸಮಸ್ಯೆಗಳು (Digestion Problem) ಕಾಣಿಸಿಕೊಳ್ಳಬಹುದು. ಜೀರ್ಣಕ್ರಿಯೆ ದುರ್ಬಲವಾದಾಗ ಎಲ್ಲಾ ರೋಗಗಳಿಗೆ ಕಾರಣವಾಗಿರುವ ಜೀವಾಣುಗಳ ರಚನೆಗೆ ಕಾರಣವಾಗುತ್ತದೆ. ಹಾಲು ಖಂಡಿತವಾಗಿಯೂ ಒಂದು ಪೌಷ್ಟಿಕಾಂಶವಿರುವ ಆಹಾರ. ಆದರೆ , ಇದರೊಂದಿಗೆ ತಪ್ಪಾದ ಕಾಂಬಿನೆಶನ್ ಇದ್ದಾಗ ಅದು ದೇಹಕ್ಕೆ ಅನುಕೂಲವಾಗುವ ಬದಲು, ಅನಾನುಕೂಲವೇ ಹೆಚ್ಚಾಗಬಹುದು.
ಇದನ್ನೂ ಓದಿ : ಚಹಾವನ್ನು ಪದೇ ಪದೇ ಬಿಸಿ ಮಾಡಿ ಕುಡಿಯುವುದರಿಂದ ಎದುರಾಗುವ ಸಮಸ್ಯೆಗಳು ತಿಳಿದಿದೆಯಾ ? ನಿಮಗೂ ಈ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ
ಮೊದಲೇ ಹೇಳಿದಂತೆ ಕೆಲ ಪದಾರ್ಥಗಳೊಂದಿಗೆ ಬೆರೆಸದೇ ಇರುವವರೆಗೆ ಹಾಲು ತುಂಬಾ ಪೌಷ್ಟಿಕವಾಗಿರುತ್ತದೆ. ನೀವು ಹಾಲಿನೊಂದಿಗೆ ತಿನ್ನಲೇಬಾರದಾದ ಆಹಾರಗಳು ಯಾವುವು ಎನ್ನುವುದನ್ನು ಕೆಳಗೆ ನೀಡಲಾಗಿದೆ.
ಬಾಳೆಹಣ್ಣು
- ಚೆರ್ರಿ
- ಯಾವುದೇ ಹುಳಿ ಹಣ್ಣು (ಕಿತ್ತಳೆ, ನಿಂಬೆ, ನಿಂಬೆ, ದ್ರಾಕ್ಷಿಹಣ್ಣು, ಹುಣಸೆಹಣ್ಣು, ಆಮ್ಲಾ, ಹಸಿರು ಸೇಬು, ಪ್ಲಮ್, ಸ್ಟಾರ್ ಹಣ್ಣು, ಅನಾನಸ್, ಇತ್ಯಾದಿ)
- ಯೀಸ್ಟ್‌ನಿಂದ ತಯಾರಿಸಿದ ವಸ್ತುಗಳು
- ಮೊಟ್ಟೆ, ಮಾಂಸ ಮತ್ತು ಮೀನು
- ಮೊಸರು (Curd)
- ದ್ವಿದಳ ಧಾನ್ಯಗಳು
- ಮೂಲಂಗಿ
ಆರೋಗ್ಯಕ್ಕೆ ಒಳ್ಳೆಯದು ಎಂದು ಆಹಾರ ಸೇವಿಸುವಾಗ ಯಾವ ಆಹಾರವನ್ನು ಯಾವಾಗ ಸೇವಿಸಬೇಕು? ಯಾವ ಆಹಾರವನ್ನು ಯಾವುದರ ಜೊತೆ ಸೇವಿಸಬೇಕು, ಎಷ್ಟು ಸೇವಿಸಬೇಕು ಎನ್ನುವುದನ್ನು ತಿಳಿದಿರುವುದು ಕೂಡಾ ಮುಖ್ಯವಾಗಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.