ನವದೆಹಲಿ: Ayurveda Tips - ತ್ವಚೆಯ ಆರೈಕೆಗೆ ನಮ್ಮ ರೂಟಿನ್ ತುಂಬಾ ವ್ಯವಸ್ಥಿತವಾಗಿರಬೇಕು. ಏಕೆಂದರೆ ನಾವು ತಿನ್ನುವ ಆಹಾರ ಕೂಡ ನಮ್ಮಲ್ಲಿ ತ್ವಚೆಯ ಸಮಸ್ಯೆ ಅಥವಾ ಅಲರ್ಜಿಗೆ ಕಾರಣವಾಗುತ್ತದೆ.  ಆಯುರ್ವೇದದ ಪ್ರಕಾರ ಕೆಲ ಆಹಾರ ಪದಾರ್ಥಗಳಲ್ಲೂ ಒಟ್ಟಿಗೆ ಸೇವಿಸಬಾರದು ಎನ್ನಲಾಗಿದೆ. ಉದಾಹರಣೆಗೆ ನಾನ್ವೆಜ್ ಊಟದ ಜೊತೆಗೆ ಹಾಲಿನಿಂದ ತಯಾರಿಸಲಾಗಿರುವ ಯಾವುದೇ ಪದಾರ್ಥಗಳನ್ನು ಸೇವಿಸಬಾರದು. ಹಾಗಾದರೆ ಬನ್ನಿ ಯಾವ ಯಾವ ಆಹಾರಗಳನ್ನು ಒಟ್ಟಿಗೆ ಸೇವಿಸಬಾರದು ಎಂಬುದನ್ನು ತಿಳಿಯೋಣ, 


COMMERCIAL BREAK
SCROLL TO CONTINUE READING

ಹಾಲಿನ ಜೊತೆಗೆ ಈ ವಸ್ತುಗಳನ್ನು ಸೇವಿಸುವುದು ಹಾನಿಕಾರಕ (Food According To Ayurveda)
ಉದ್ದಿನಬೇಳೆ, ಪನೀರ್, ತತ್ತಿ ಹಾಗೂ ಮಾಂಸ. -
ಉದ್ದಿನ ಬೇಳೆ ಸೇವನೆಯ ಬಳಿಕ ಹಾಲು ಸೇವನೆ ಮಾಡಬಾರದು. ಹಸಿರು ತರಕಾರಿ ಹಾಗೂ ಮೂಲಂಗಿ ಸೇವನೆಯ ಬಳಿಕವೂ ಕೂಡ ಹಾಲಿನ ಸೇವನ ಮಾಡಬಾರದು. ತತ್ತಿ, ಮಾಂಸಹಾಗೂ ಪನೀರ್ ತಿಂದ ಬಳಿಕ ಕೂಡ ಹಾಲಿನ ಸೇವನೆಯಿಂದ ದೂರವಿರಿ. ಇವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಡೈಜೆಶನ್ ಪ್ರಾಬ್ಲಮ್ ಕಾಡುವ ಸಾಧ್ಯತೆ ಇದೆ.


ಮೊಸರಿನ ಜೊತೆಗೆ ಈ ಪದಾರ್ಥಗಳನ್ನೂ ಸೇವಿಸಬೇಕು (Ayurveda Rules For Eating)
ಹುಳಿ ಹಣ್ಣು -
ಮೊಸರಿನ ಜೊತೆಗೆ ವಿಶೇಷವಾಗಿ ಹುಳಿ ಹಣ್ಣು ಸೇವಿಸಬೇಡಿ. ಏಕೆಂದರೆ ಮೊಸರು ಮತ್ತು ಹುಳಿ ಹಣ್ಣುಗಳಲ್ಲಿ ಬೇರೆ ಬೇರೆ ಎಂಜೈಮ್ ಗಳಿರುತ್ತವೆ. ಎರಡೂ ಒಟ್ಟಿಗೆ ಪಚನವಾಗುವುದಿಲ್ಲ. ಹೀಗಾಗಿ ಇವೆರಡನ್ನು ಒಟ್ಟಿಗೆ ಸೇವಿಸುವ ಸಲಹೆ ನೀಡಲಾಗುವುದಿಲ್ಲ.


ಮೀನು- ಮೊಸರು ಅತ್ಯಂತ ತಂಪಾದ ಪದಾರ್ಥ. ಹೀಗಾಗಿ ಅದನ್ನು ಉಷ್ಣ ಗುಣಧರ್ಮ ಹೊಂದಿದ ಪದಾರ್ಥಗಳ ಜೊತೆಗೆ ಸೇವಿಸಬಾರದು. ಮೀನು ಬಿಸಿಗುಣಧರ್ಮ ಹೊಂದಿರುವ ಪದಾರ್ಥವಾದ ಕಾರಣ ಮೀನು ಹಾಗೂ ಮೊಸರು ಒಟ್ಟಿಗೆ ಸೇವಿಸಬಾರದು.


ಇದನ್ನೂ ಓದಿ-ಕೊರೊನಾ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿಯಾಗಿದೆ ಭಾರತೀಯ ಈ ಮನೆ ಮದ್ದು ಎಂದ ಬ್ರಿಟನ್ ಸಂಶೋಧಕರು


ಜೇನಿನ ಜೊತೆಗೆ ಏನನ್ನು ಸೇವಿಸಬಾರದು (Ayurveda Right Diet)
ಜೇನುತುಪ್ಪವನ್ನು ಎಂದಿಗೂ ಬಿಸಿ ಮಾಡಿ ಸೇವಿಸಬಾರದು. ಜ್ವರ ಹೆಚ್ಚಾಗುತ್ತಿದ್ದರೂ ಕೂಡ ಜೇನುತುಪ್ಪ ಸೇವಿಸಬಾರದು. ಇದರಿಂದ ಶರೀರದಲ್ಲಿ ಪಿತ್ತ ಹೆಚ್ಚಾಗುತ್ತದೆ. ಜೇನು ಹಾಗೂ ಬೆಣ್ಣೆ ಒಟ್ಟಿಗೆ ಸೇವಿಸಬಾರದು. ಇದಲ್ಲದೆ ತುಪ್ಪ ಹಾಗೂ ಜೇನುತುಪ್ಪ ಒಟ್ಟಿಗೆ ತಿನ್ನಬಾರದು. ಅಷ್ಟೇ ಅಲ್ಲ ಜೇನು ಹಾಗೂ ತುಪ್ಪವನ್ನು ಒಟ್ಟಿಗೆ ನೀರಿನಲ್ಲಿ ಬೆರೆಸಿ ಕೂಡ ಸೇವಿಸಬಾರದು. ಇದು ಕೂಡ ಆರೋಗ್ಯಕ್ಕೆ ಹಾನಿಕಾರಕ. 


ಇದನ್ನೂ ಓದಿ-ಕೊರೋನಾ ವೈರಸ್ ನಿಯಂತ್ರಣಕ್ಕೆ ರಾಮಬಾಣವಾದಿತೇ ಆಯುರ್ವೇದ ? ಇಲ್ಲಿದೆ ಪೂರ್ಣ ಮಾಹಿತಿ


ಈ ಪದಾರ್ಥಗಳನ್ನು ಕೂಡ ಒಟ್ಟಿಗೆ ಸೇವಿಸಬಾರದು (What To Eat According To Ayurveda)
- ತಂಪು ನೀರಿನ ಜೊತೆಗೆ ತುಪ್ಪ, ಎಣ್ಣೆ, ಟರಬೂಜ, ಸೀಬೆಹಣ್ಣು, ಜಾಮೂನ್ ಹಣ್ಣು ಹಾಗೂ ಶೇಂಗಾ ಒಟ್ಟಿಗೆ ಸೇವಿಸಬಾರದು.


- ಪಾಯಸದ ಜೊತೆಗೆ ಸತ್ತು, ಮದ್ಯ, ಹುಳಿ ಹಾಗೂ ಕಹಿ ಪದಾರ್ಥಗಳ ಸೇವನೆ ಮಾಡಬಾರದು.


- ಅನ್ನದ ಜೊತೆಗೆ ಆಪಲ್ ಸಿಡರ್ ವಿನೆಗರ್ ಸೇವಿಸಬಾರದು.


ಇದನ್ನೂ ಓದಿ- Coronavirus Second Wave: ಪುನಃ ಗತಿ ಪಡೆದುಕೊಂಡ ಕೊರೊನಾ, ಈ ಐದು ವಿಧಾನ ಅನುಸರಿಸಿ ವೈರಸ್ ನಿಂದ ಪಾರಾಗಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.