Leaves To Control Uric Acid: ದೇಹದಲ್ಲಿ ಪ್ಯೂರಿನ್ ಎಂಬ ಪ್ರಮುಖ ರಾಸಾಯನಿಕವನ್ನು ವಿಭಜಿನೆಗೊಂಡಾಗ ಯೂರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಇದು ಸಾಮಾನ್ಯವಾಗಿ ರಕ್ತದಲ್ಲಿ ಕರಗಿ ಮೂತ್ರಪಿಂಡಗಳ ಮೂಲಕ ಹಾದುಹೋಗಿ ಮೂತ್ರದ ರೂಪದಲ್ಲಿ ಹೊರಬರುತಡೆ. ಆದರೆ, ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಗೌಟ್ ಸಂಭವಿಸಬಹುದು. ಅಷ್ಟೇ ಅಲ್ಲದೆ, ಕಿಡ್ನಿ ಸ್ಟೋನ್ ಸಮಸ್ಯೆಗೂ ಕಾರಣವಾಗಬಹುದು. ಹಾಗಾಗಿ ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾಗದಂತೆ ನಿಗಾವಹಿಸುವುದು ಮುಖ್ಯ. 


COMMERCIAL BREAK
SCROLL TO CONTINUE READING

ಆಯುರ್ವೇದದ (Ayurveda) ಕೆಲವು ಎಲೆಗಳನ್ನು ಬಳಸುವುದರಿಂದ ಯೂರಿಕ್ ಆಸಿಡ್ ಸಮಸ್ಯೆಯನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು ಎನ್ನಲಾಗುತ್ತದೆ. ಹೌದು, ಔಷಧೀಯ ಗುಣಗಳಲ್ಲಿ ಹೇರಳವಾಗಿರುವ ಈ ಎಲೆಗಳನ್ನು ನಿಯಮಿತವಾಗಿ ಬಳಸುತ್ತಾ ಬಂದರೆ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಸುಲಭವಾಗಿ ನಿಯಂತ್ರಿಸಬಹುದು ಎನ್ನಲಾಗುತ್ತದೆ. ಅಂತಹ ಎಲೆಬಾಳು ಯಾವುವೆಂದರೆ... 


ನಿಯಮಿತವಾಗಿ ಈ ಆಯುರ್ವೇದ ಎಲೆಗಳನ್ನು ಬಳಸಿದರೆ ದೇಹದಲ್ಲಿ ಎಂದೂ ಹೆಚ್ಚಾಗಲ್ಲ ಯೂರಿಕ್ ಆಸಿಡ್: 
ತುಳಸಿ: 

ಹಿಂದೂ ಧರ್ಮದಲ್ಲಿ ಪೂಜನೀಯ ಸಸ್ಯದ ಸ್ಥಾನಮಾನ ಹೊಂದಿರುವ ತುಳಸಿ ಎಲೆಯಲ್ಲಿ ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಕಂಡು ಬರುತ್ತದೆ. ಈ ಎಲೆಯನ್ನು ಜಗಿದು ತಿನ್ನುವುದರಿಂದ ದೇಹವು ನಿರ್ವಿಷಗೊಂಡು ಯೂರಿಕ್ ಆಸಿಡ್ ಕಂಟ್ರೋಲ್ (Uric Acid Control) ನಲ್ಲಿರುವಂತೆ ನಿಗಾವಹಿಸಲು ಸಾಧ್ಯವಾಗುತ್ತದೆ. 


ಇದನ್ನೂ ಓದಿ- ದಾಳಿಂಬೆಯನ್ನು ಇದರ ಜೊತೆ ಅರೆದು ಸೇವಿಸಿದರೆ ಬ್ಲಡ್ ಶುಗರ್ ನಾರ್ಮಲ್ ಆಗುವುದು ಗ್ಯಾರಂಟಿ !


ಬೇವಿನ ಎಲೆಗಳು: 
ಆಯುರ್ವೇದದ ಗಣಿ ಎಂತಲೇ ಕರೆಯಲಾಗುವ ಬೇವಿನ ಎಲೆಗಳಲ್ಲಿ (Neem Leaves) ಕಂಡು ಬರುವ ನಿರ್ವಿಶೀಕರಣ ಗುಣಲಕ್ಷಣಗಳು ರಕ್ತ ಶುದ್ಧೀಕರಣಕ್ಕೆ ಹೆಸರುವಾಸಿ ಆಗಿದೆ. ಅಷ್ಟೇ ಅಲ್ಲದೆ, ಇದರಲ್ಲಿರುವ  ಉತ್ಕರ್ಷಣ ನಿರೋಧಕ ಅಂಶವು ದೇಹದಲ್ಲಿ ಹೆಚ್ಚುವರಿ ಯೂರಿಕ್ ಆಸಿಡ್ ಸಂಗ್ರಹಣೆಯನ್ನು ತಡೆಯುತ್ತದೆ. 


ಕೊತ್ತಂಬರಿ ಸೊಪ್ಪು: 
ಭಾರತೀಯ ಪಾಕ ವಿಧಾನಗಳಲ್ಲಿ ಆಹಾರದ ರುಚಿಯನ್ನು ಹೆಚ್ಚಿಸಲು ಹೆಚ್ಚಾಗಿ ಬಳಸಲ್ಪಡುವ ಕೊತ್ತಂಬರಿ ಸೊಪ್ಪು ಆರೋಗ್ಯದ ಗಣಿಯೂ ಹೌದು. ವಾಸ್ತವವಾಗಿ, ಕೊತ್ತಂಬರಿ ಸೊಪ್ಪಿನಲ್ಲಿರುವ ಅಂಶಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ದೇಹದಿಂದ ಯೂರಿಕ್ ಆಮ್ಲವನ್ನು ಹೊರಹಾಕಲು ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ. 


ಇದನ್ನೂ ಓದಿ- Diabetes Diet: ದಿನ ಬೆಳಿಗ್ಗೆ ಈ ತಿಂಡಿಗಳನ್ನು ತಿಂದರೆ ಹೆಚ್ಚಾಗಲ್ಲ ಡಯಾಬಿಟಿಸ್


ತ್ರಿಫಲ: 
ತ್ರಿಫಲ ಹೆಸರೇ ಸೂಚಿಸುವಂತೆ ಇದು ಬಿಭಿತಕಿ, ಅಮಲಕಿ ಮತ್ತು ಹರಿತಕಿ ಎಂಬ ಮೂರು ಹಣ್ಣುಗಳ ಸಂಯೋಜನೆ. ನಿಯಮಿತವಾಗಿ ತ್ರಿಫಲ ಚೂರ್ಣ, ತ್ರಿಫಲ ಪುಡಿ ಬೆರೆಸಿದ ನೀರನ್ನು ಕುಡಿಯುತ್ತಾ ಬಂದರೆ ಇದು ಹೆಚ್ಚಿನ ಗೌಟ್‌ಗೆ ಸಂಬಂಧಿಸಿದ ಉರಿಯೂತವನ್ನು ಕಡಿಮೆ ಮಾಡಿ ದೇಹದಲ್ಲಿ ಯೂರಿಕ್ ಆಮ್ಲವನ್ನು ನಿಯಂತ್ರಿಸುತ್ತದೆ ಏಡು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.