Bad Combination With Lemon : ನಿಂಬೆ ಹುಳಿಯಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.ಇದನ್ನು ಬಹುತೇಕ ಆಹಾರಗಳಲ್ಲಿ ಬಳಸಲಾಗುತ್ತದೆ.ನಿಂಬೆ ರುಚಿಯ ಜೊತೆಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.ನಿಂಬೆ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  


COMMERCIAL BREAK
SCROLL TO CONTINUE READING

ಆದರೆ,ಕೆಲವು ವಸ್ತುಗಳೊಂದಿಗೆ ನಿಂಬೆ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ.ನಿಂಬೆಹಣ್ಣಿನ ಜೊತೆ ಕೆಲವು ಆಹಾರಗಳನ್ನು ಸೇವಿಸಬಾರದು.ಈ ಪದಾರ್ಥಗಳೊಂದಿಗೆ ನಿಂಬೆ ಸೇವಿಸಿದರೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಕೆಡಿಸುತ್ತದೆ.ಈ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. 


ಇದನ್ನೂ ಓದಿ : Cinnamon Water: ಮೆದುಳಿನಿಂದ ಹೃದಯದವರೆಗೂ ತುಂಬಾ ಲಾಭದಾಯಕ ಈ ಆಯುರ್ವೇದ ಪಾನೀಯ


ಹಾಲು :
ನಿಂಬೆಯ ಆಮ್ಲೀಯ ಗುಣವು ಹಾಲಿನಲ್ಲಿರುವ ಪ್ರೋಟೀನ್‌ಗಳನ್ನು ಮೊಸರಿನಂತೆ ಹೆಪ್ಪುಗಟ್ಟಿಸುತ್ತದೆ.ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.ಅಲ್ಲದೆ,ಗ್ಯಾಸ್,ಅತಿಸಾರಕ್ಕೆ ಕಾರಣವಾಗಬಹುದು. 


ಮೀನು :
ನಿಂಬೆ ರಸವು ಮೀನಿನಲ್ಲಿರುವ ಪ್ರೋಟೀನ್ ಗಳನ್ನೂ ಗಟ್ಟಿಗೊಳಿಸುತ್ತದೆ, ಹಾಗಾಗಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.ಇದಲ್ಲದೆ,ಇದು ಮೀನಿನ ನೈಸರ್ಗಿಕ ರುಚಿಯ ಮೇಲೆ ಪರಿಣಾಮ ಬೀರುತ್ತದೆ. 


ಮೊಟ್ಟೆ :
ಮೊಟ್ಟೆಗಳಲ್ಲಿಯೂ ಪ್ರೋಟೀನ್ ಇರುತ್ತದೆ.ಇದು ನಿಂಬೆಯೊಂದಿಗೆ ಸಂಪರ್ಕಕ್ಕೆ ಬಂದಾಗ ಅದು ಗಟ್ಟಿಯಾಗುತ್ತದೆ.ಇದರಿಂದ ಜೀರ್ಣಕ್ರಿಯೆಯ ಸಮಸ್ಯೆ ಉಂಟಾಗುವುದು ಮಾತ್ರವಲ್ಲ,ಮೊಟ್ಟೆಯಿಂದ ದೇಹಕ್ಕೆ ಒದಗಬಹುದಾದ ಪೌಷ್ಟಿಕಾಂಶ ದೇಹಕ್ಕೆ ಸಿಗುವುದಿಲ್ಲ. 


ಇದನ್ನೂ ಓದಿ : Fatty Liver: ಫ್ಯಾಟಿ ಲಿವರ್ ಎಂದರೇನು? ಕಾರಣಗಳು, ಲಕ್ಷಣಗಳು & ಚಿಕಿತ್ಸೆ


ಮೊಸರು :
ಮೊಸರಿನೊಂದಿಗೆ ನಿಂಬೆ ಸೇವನೆಯು ಹೊಟ್ಟೆಗೆ ಹಾನಿಕಾರಕವಾಗಿದೆ.ನಿಂಬೆಯ ಆಸಿಡ್ ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.