ಬೆಂಗಳೂರು :  ಟೀ-ಕಾಫಿ ಜೊತೆ ಕುರಕಲು ತಿಂಡಿ ಇದ್ದರೆ ಆಹಾ ಅನ್ನಿಸಿ ಬಿಡುತ್ತದೆ. ಅದರಲ್ಲೂ ಮಳೆ, ಚಳಿ ಸಮಯದಲ್ಲಂತೂ ಟೀ ಕಾಫಿ ಜೊತೆಗೆ ಪಕೋಡಾ, ಬಜ್ಜಿ ಇದ್ದೇ ಇರುತ್ತದೆ. ಟೀ ಕಾಫಿ ಜೊತೆಗೆ ಪಕೋಡಾ, ಬಜ್ಜಿ ಬಹಳ ಒಳ್ಳೆ ಕಾಂಬಿನೇಶನ್ ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ ಆರೋಗ್ಯ ತಜ್ಞರ ಮಾತು ಕೇಳುವುದಾದರೆ, ಇದರಷ್ಟು ಕೆಟ್ಟ ಕಾಂಬಿನೇಶನ್ ಮತ್ತೊಂದಿಲ್ಲ.  ಚಹಾದೊಂದಿಗೆ  ಪಕೋಡಾ, ಬಜ್ಜಿಗಳನ್ನು ಸೇವಿಸುವುದು ತಪ್ಪು. ಇದು ಉದರದ ಸಮಸ್ಯೆಗಳನ್ನು ಹುಟ್ಟಿ ಹಾಕುತ್ತದೆ. 


COMMERCIAL BREAK
SCROLL TO CONTINUE READING

ಚಹಾ ಮತ್ತು ಕರಿದ ತಿಂಡಿಗಳನ್ನು ಒಟ್ಟಿಗೆ ತಿನ್ನುವ ಅನಾನುಕೂಲಗಳು :
ಚಹಾದೊಂದಿಗೆ ಬಜ್ಜಿ, ಪಕೋಡಾ ತಿನ್ನುವುದನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲ. ನೀವು ಕೂಡಾ ಅವುಗಳನ್ನು ಒಟ್ಟಿಗೆ ತಿನ್ನುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ತಜ್ಞರ ಪ್ರಕಾರ, ಕಡಲೆ ಹಿಟ್ಟಿನಿಂದ ಮಾಡಿದ ವಸ್ತುಗಳನ್ನು ಚಹಾದೊಂದಿಗೆ ತಿನ್ನಬಾರದು. ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು  ತಂದೊಡ್ಡುತ್ತದೆ.   ಕಡಲೆ  ಹಿಟ್ಟಿನಿಂದ ತಯಾರಿಸಿದ ವಸ್ತುಗಳನ್ನು ಚಹಾದೊಂದಿಗೆ ತಿನ್ನುವುದರಿಂದ ದೇಹದಲ್ಲಿ ಪೋಷಕಾಂಶಗಳ ಕೊರತೆ  ಎದುರಾಗುವ ಅಪಾಯವಿದೆ. ಅಜೀರ್ಣದ ಸಮಸ್ಯೆಯೂ  ಕಾಡಬಹುದು. 


ಇದನ್ನೂ ಓದಿ : ಚಳಿಗಾಲದಲ್ಲಿ ಮಧುಮೇಹ ರೋಗಿಗಳು ಈ ರೀತಿ ಕಾಳಜಿ ವಹಿಸಿದರೆ ತಪ್ಪುವುದು ಅನಾಹುತ .!


ಚಹಾದೊಂದಿಗೆ ಇವುಗಳನ್ನು ಎಂದಿಗೂ ತಿನ್ನಬೇಡಿ :
ಹಸಿ ತರಕಾರಿಗಳು ಅಥವಾ ಯಾವುದೇ ಹಣ್ಣುಗಳನ್ನು ಚಹಾದೊಂದಿಗೆ ತಿನ್ನಬಾರದು. ಚಹಾದೊಂದಿಗೆ ಕಚ್ಚಾ ತರಕಾರಿಗಳನ್ನು ಸೇವಿಸಿದರೆ, ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇದಲ್ಲದೆ ಮೊಳಕೆ ಕಾಳು  ಮತ್ತು ಸಲಾಡ್ ಅನ್ನು ಬಿಸಿ ಚಹಾದೊಂದಿಗೆ ತಿನ್ನಬಾರದು. ಇದು ಕೂಡಾ ಹಾನಿಕಾರಕವಾಗಿ ಸಾಬೀತಾಗಬಹುದು. 


ಚಹಾ ಕುಡಿದ ತಕ್ಷಣ ಇವುಗಳನ್ನು ತಿನ್ನಬಾರದು : 
ಚಹಾ ಕುಡಿದ ತಕ್ಷಣ ನೀರು ಕುಡಿಯಬಾರದು ಎಂದು ಹಿರಿಯರು ಹೇಳುತ್ತಾರೆ. ಇದು ಸತ್ಯ. ವೈಜ್ಞಾನಿಕವಾಗಿಯೂ ಚಹಾ ಕುಡಿದ ನಂತರ ನೀರು ಕುಡಿಯಬಾರದು. ಇದು  ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಮಾಡುವುದರಿಂದ ಹಲ್ಲುಗಳಿಗೆ ಹಾನಿಯಾಗುವ ಅಪಾಯವೂ ಇದೆ. 


ಇದನ್ನೂ ಓದಿ : Peanuts Benefits: ಗೋಡಂಬಿ-ಬಾದಾಮಿ ತಿಂದಷ್ಟೇ ಪ್ರಯೋಜನ ನೀಡುತ್ತೆ ಕಡಲೆಬೀಜ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.