Cardiovascular Diseases Risk : ಕಳೆದ ಕೆಲವು ವರ್ಷಗಳಲ್ಲಿ, ಭಾರತ ಸೇರಿದಂತೆ ಇಡೀ ಪ್ರಪಂಚದಲ್ಲಿ ಹೃದ್ರೋಗಗಳ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಇದರ ಹಿಂದಿನ ಪ್ರಮುಖ ಕಾರಣವೆಂದರೆ ಹಾಳಾದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ. ನಮ್ಮ ದೇಶದಲ್ಲಿ ಎಣ್ಣೆ ಪದಾರ್ಥಗಳನ್ನು ತಿನ್ನುವ ಟ್ರೆಂಡ್ ಜಾಸ್ತಿ ಇರುವುದರಿಂದ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚು. ಈ ಹಿನ್ನೆಲೆಯಲ್ಲಿ ಸೇವಿಸುವ ಆಹಾರದ ಬಗ್ಗೆ ಅತ್ಯಂತ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಹೃದಯಕ್ಕೆ ಹಾನಿ ಮಾಡುವ ಆಹಾರಗಳು :
ಆಲೂಗೆಡ್ಡೆ ಚಿಪ್ಸ್ : 
ಮಕ್ಕಳಾಗಿರಲಿ, ಯುವಕರಾಗಿರಲಿ, ಆಲೂಗೆಡ್ಡೆ ಚಿಪ್ಸ್ ಇಷ್ಟ ಪಡದವರು ಯಾರೂ ಇರಲಿಕ್ಕಿಲ್ಲ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಆಲೂಗೆಡ್ಡೆ ಚಿಪ್ಸ್ ನಲ್ಲಿ ಕ್ಯಾಲೋರಿಗಳು, ಸೋಡಿಯಂ ಮತ್ತು ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.  ಇದು ಹೃದಯದ ಆರೋಗ್ಯಕ್ಕೆ ಅಪಾಯಕಾರಿ. 


ಇದನ್ನೂ ಓದಿ :  Diabetes Test: ನಿಖರವಾದ ರಿಸಲ್ಟ್‌ಗಾಗಿ ಶುಗರ್ ಟೆಸ್ಟ್ ಮಾಡಲು ಇದು ಬೆಸ್ಟ್ ಟೈಮ್


ಫಾಸ್ಟ್ ಫುಡ್ : 
ಸಂಜೆಯ ಸಮಯದಲ್ಲಿ ಸಾಮಾನ್ಯವಾಗಿ ಇನ್ಸ್ಟಂಟ್ ಆಹಾರವನ್ನು ತಿನ್ನಲು ಇಷ್ಟಪಡುತ್ತೇವೆ. ಆದರೆ ಈ ಹವ್ಯಾಸವು ಹೃದಯಾಘಾತದ ಅಪಾಯವನ್ನು ಸೃಷ್ಟಿ ಮಾಡುತ್ತದೆ. ದೀರ್ಘಾವಧಿಯಲ್ಲಿ ಇದು ಮಾರಕವಾಗಿ ಪರಿಣಮಿಸಬಹುದು. 


ಟೊಮೇಟೊ ಸಾಸ್ :
ಹೆಚ್ಚಿನವರು ಟೊಮೆಟೊ ಸಾಸ್ ಅನ್ನು ಫಾಸ್ಟ್ ಮತ್ತು ಜಂಕ್ ಫುಡ್‌ಗಳೊಂದಿಗೆ ತಿನ್ನಲು ಇಷ್ಟಪಡುತ್ತಾರೆ. ಟೊಮೆಟೊ ಸಾಸ್ ಜೊತೆ ಸೇರಿಸಿ ಫಾಸ್ಟ್ ಫುಡ್ ತಿಂದರೆ ರುಚಿ  ಹೆಚ್ಚಿಸುತ್ತದೆ. ಆದರೆ ಈ ಸಾಸ್‌ನಲ್ಲಿ ಸೋಡಿಯಂ ಪ್ರಮಾಣವು ಸಾಕಷ್ಟು ಹೆಸಚಿನ ಪ್ರಮಾಣದಲ್ಲಿ ಇರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.  


ಇದನ್ನೂ ಓದಿ :  Jaggery Benefits: ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಬೆಲ್ಲದಲ್ಲಿದೆ ಪರಿಹಾರ


ವೈಟ್ ಬ್ರೆಡ್ :
ಬೆಳಗಿನ ತಿಂಡಿಯಾಗಿರಲಿ ಅಥವಾ ಸಂಜೆಯ ತಿಂಡಿಯಾಗಿರಲಿ,  ವೈಟ್ ಬ್ರೆಡ್ ತಿನ್ನುವುಡು ಆರೋಗ್ಯಕ್ಕೆ ಒಳ್ಳೆಯದಲ್ಲ.  ಇದು ಮಧುಮೇಹ, ಬೊಜ್ಜು ಮತ್ತು ಹೃದಯ ಕಾಯಿಲೆಗಳಿಗೆ ಕಾರಣವಾಗುತ್ತದೆ. 


ರೆಡ್ ಮೀಟ್ :
ನಾನ್ ವೆಜ್ ತಿನ್ನುವವರು  ಮಾಂಸವನ್ನು ಬಹಳವಾಗಿ ಇಷ್ಟಪಡುತ್ತಾರೆ. ಇದು ನಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಕೊರತೆಯನ್ ಣು ನೀಗಿಸುತ್ತದೆ. ಅಗತ್ಯಗಳನ್ನು ಪೂರೈಸುತ್ತದೆ, ಆದರೆ ಮಾಂಸದ ಕೊಬ್ಬಿನ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ, ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ, ಇದು ಬಿಪಿ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.