ಪೈಲ್ಸ್ ಸಮಸ್ಯೆಯನ್ನು ಮೂಲದಿಂದ ನಿವಾರಿಸಲು ಮನೆಮದ್ದು
Piles Treatment: ಪೈಲ್ಸ್ ಸಮಸ್ಯೆಯನ್ನು ಮೂಲದಿಂದ ನಿವಾರಿಸಲು ನಮ್ಮ ಮನೆಯಲ್ಲಿಯೇ ಇರುವ ಹಲವು ವಸ್ತುಗಳು ಪ್ರಯೋಜನಕಾರಿ ಆಗಿವೆ. ಈ ವಸ್ತುಗಳನ್ನು ಬಳಸುವುದರಿಂದ ಪೈಲ್ಸ್ ಸಮಸ್ಯೆಯನ್ನು ಪರಿಣಾಮಕಾರಿ ಆಗಿ ನಿಯಂತ್ರಿಸಬಹುದು. ಅಂತಹ ವಸ್ತುಗಳ ಬಗ್ಗೆ ತಿಳಿಯೋಣ...
ಪೈಲ್ಸ್ ಚಿಕಿತ್ಸೆ: ಸಾಮಾನ್ಯ ಭಾಷೆಯಲ್ಲಿ ಮೂಲವ್ಯಾದಿ ಎಂದು ಕರೆಯಲಾಗುವ ಪೈಲ್ಸ್ ಸಮಸ್ಯೆಯ ಬಗ್ಗೆ ಜನರು ಹೇಳಲು ಸಹ ಹಿಂಜರಿಯುತ್ತಾರೆ. ಕೆಲವು ಬಾರಿ ಇದು ಅಸಾಧಾರಣ ನೋವಿಗೆ ಕಾರಣವಾಗುತ್ತದೆ. ಮೂಲವ್ಯಾದಿ ಸಮಸ್ಯೆ ನಿವಾರಣೆಗೆ ಆಯುರ್ವೇದದಲ್ಲಿ ಹಲವು ಪರಿಹಾರಗಳನ್ನು ಸೂಚಿಸಲಾಗಿದೆ. ಈ ಮನೆಮದ್ದುಗಳು ಊತ, ನೋವನ್ನು ನಿವಾರಿಸುವುದು ಮಾತ್ರವಲ್ಲದೆ, ಇದರಿಂದ ಶಾಶ್ವತ ಪರಿಹಾರವನ್ನು ನೀಡಬಲ್ಲವು ಎಂದು ಹೇಳಲಾಗುತ್ತದೆ. ವಿದುಗಳಲ್ಲಿ ಬಾಳೆಹಣ್ಣು, ಕರ್ಪೂರ, ಹಾಲು, ನಿಂಬೆ, ಲವಂಗ ಸೇರಿದಂತೆ ಹಲವು ವಸ್ತುಗಳಿದ್ದು, ಇದನ್ನು ಬಳಸಿದರೆ ಪೈಲ್ಸ್ ಸಮಸ್ಯೆಯಿಂದ ತ್ವರಿತ ಪರಿಹಾರ ಸಿಗುತ್ತದೆ. ಅವುಗಳನ್ನು ಹೇಗೆ ಬಳಸುವುದು ಎಂದು ತಿಳಿಯೋಣ...
ಪೈಲ್ಸ್ ಸಮಸ್ಯೆ ನಿವಾರಣೆಗೆ ತಣ್ಣನೆ ಹಾಲು:
ಪೈಲ್ಸ್ ಸಮಸ್ಯೆಯನ್ನು ಹೋಗಲಾಡಿಸಲು ತಣ್ಣನೆಯ ಹಾಲು ಬಹಳ ಪರಿಣಾಮಕಾರಿ ಮಾರ್ಗವಾಗಿದೆ. ಇದಕ್ಕಾಗಿ, ಬೆಳಿಗ್ಗೆ ಎದ್ದು ಫ್ರಿಜ್‌ನಿಂದ ತೆಗೆದ ಒಂದು ಕಪ್ ಹಾಲಿಗೆ ನಿಂಬೆ ರಸವನ್ನು ಸೇರಿಸಿ ತಕ್ಷಣ ಕುಡಿಯಿರಿ. ನೆನಪಿಡಿ, ಹಾಲಿಗೆ ನಿಂಬೆ ರಸವನ್ನು ಬೆರೆಸಿದ ಬಳಿಕ ಸ್ವಲ್ಪವೂ ತಡಮಾಡಬಾರದು, ತಡ ಮಾಡಿದರೆ ಹಾಲು ಒಡಿಯಬಹುದು. ನಿಯಮಿತವಾಗಿ ಈ ಪರಿಹಾರ ಕೈಗೊಳ್ಳುವುದರಿಂದ ಮೂಲವ್ಯಾದಿ ಸಮಸ್ಯೆಯಿಂದ ಪರಿಹಾರ ಲಭ್ಯವಾಗಲಿದೆ.
ಇದನ್ನೂ ಓದಿ- ನೀವು ಬಳಸುವ ಟೀ ಸೊಪ್ಪು ಅಸಲಿಯೋ? ನಕಲಿಯೋ? ನೀರಿನಿಂದ ಈ ರೀತಿ ಪತ್ತೆ ಹಚ್ಚಿ
ಬಾಳೆಹಣ್ಣು:
ಪೈಲ್ಸ್ ಸಮಸ್ಯೆಗೆ ಬಾಳೆಹಣ್ಣು ಸಹ ಪರಿಣಾಮಕಾರಿ ಆಗಿದೆ. ಇದಕ್ಕಾಗಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತೆಗೆದುಕೊಳ್ಳಿ. ತಿನ್ನುವ ಮೊದಲು, ಬಾಳೆಹಣ್ಣಿನ ಮಧ್ಯದಲ್ಲಿ ಬಟಾಣಿ ಕಾಳಿಗೆ ಸಮನಾದ ಕರ್ಪೂರವನ್ನು ಹಾಕಿ. ಅರ್ಧ ಗಂಟೆಯ ನಂತರ ಖಾಲಿ ಹೊಟ್ಟೆಯಲ್ಲಿ ತಿನ್ನಿರಿ. ಇದರ ನಂತರ ಒಂದು ಗಂಟೆ ನೀರು ತೆಗೆದುಕೊಳ್ಳಬೇಡಿ. ಹೀಗೆ ಒಂದು ತಿಂಗಳ ಕಾಲ ನಿರಂತರವಾಗಿ ಮಾಡುವುದರಿಂದ ಪೈಲ್ಸ್ ಮೂಲದಿಂದ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಲವಂಗದ ಎಣ್ಣೆ:
ಲವಂಗದ ಸಾರಭೂತ ತೈಲದ ಬಳಕೆ ಕೂಡ ಪೈಲ್ಸ್ ಸಮಸ್ಯೆಯಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಬಳಕೆಯಿಂದ ಪೈಲ್ಸ್ ಅನ್ನು ಮೂಲದಿಂದ ತೆಗೆದುಹಾಕಬಹುದು. ಸಮಸ್ಯೆಯನ್ನು ತೊಡೆದುಹಾಕಲು, ನೀವು ಪೀಡಿತ ಪ್ರದೇಶದ ಮೇಲೆ ಲವಂಗ ಎಣ್ಣೆಯ ಕೆಲವು ಹನಿಗಳನ್ನು ಅನ್ವಯಿಸಬಹುದು. ಹೀಗೆ ಮಾಡುವುದರಿಂದ ಪೈಲ್ಸ್ ನೋವಿನಿಂದ ತ್ವರಿತ ಪರಿಹಾರ ದೊರೆಯುತ್ತದೆ.
ಇದನ್ನೂ ಓದಿ- ಮಂಕಿಪಾಕ್ಸ್ ರೋಗಲಕ್ಷಣಗಳ ಬಗ್ಗೆ ಇರಲಿ ಎಚ್ಚರ
ಪುದೀನಾ ಎಣ್ಣೆ:
ಮೂಲವ್ಯಾದಿ ಸಮಸ್ಯೆಗೆ ಸರ್ವರೋಗ ನಿವಾರಕ ಪುದೀನಾ ಎಣ್ಣೆ ಸಹ ಪ್ರಯೋಜನಕಾರಿ ಆಗಿದೆ. ಇದರ ಬಳಕೆಯಿಂದ ಪೈಲ್ಸ್ ಸಮಸ್ಯೆಯನ್ನು ಹೋಗಲಾಡಿಸಬಹುದು. ಇದಕ್ಕಾಗಿ ಈ ಎಣ್ಣೆಯ ಕೆಲವು ಹನಿಗಳನ್ನು ಪೀಡಿತ ಪ್ರದೇಶದ ಮೇಲೆ ಅನ್ವಯಿಸಬೇಕು. ಹೀಗೆ ಮಾಡುವುದರಿಂದ ಪೈಲ್ಸ್ ಊತವೂ ಕಡಿಮೆಯಾಗುತ್ತದೆ. ಇದರ ಬಳಕೆಯಿಂದ ಪೈಲ್ಸ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.