Banana Stem Benefits : ಬಾಳೆಹಣ್ಣು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಆದರೆ ಬಾಳೆ ದಿಂಡಿನ ಹಲವಾರು ಆರೋಗ್ಯ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಬಾಳೆ ದಿಂಡನ್ನು ಆಯುರ್ವೇದದಲ್ಲಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಇದು ವಿಟಮಿನ್ ಸಿ ಮತ್ತು ವಿಟಮಿನ್ ಬಿ 6 ಜೊತೆಗೆ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಈ ಪೋಷಕಾಂಶಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿ.


COMMERCIAL BREAK
SCROLL TO CONTINUE READING

ಆಯುರ್ವೇದದಲ್ಲಿ ಬಾಳೆ ದಿಂಡನ್ನು ತೀವ್ರ ಜ್ವರ, ಅಜೀರ್ಣ, ಮಲಬದ್ಧತೆ ಮುಂತಾದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಬಾಳೆ ದಿಂಡು ರುಚಿಯಲ್ಲಿ ಸಿಹಿಯಾಗಿರುತ್ತದೆ. ಪ್ರಕೃತಿಯಲ್ಲಿ ತಂಪಾಗಿರುತ್ತದೆ. 


ಇದನ್ನೂ ಓದಿ: 24 ಗಂಟೆಗಳಿಗಿಂತ ಹೆಚ್ಚು ಕಾಲ ಜ್ವರವು ಮುಂದುವರಿದರೆ ಜಾಗರೂಕರಾಗಿರಿ..!


ಬಾಳೆ ದಿಂಡು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಬಾಳೆ ದಿಂಡು ತಿನ್ನುವುದು ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್‌ನಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.ಜ್ವರವನ್ನೂ ಕಡಿಮೆ ಮಾಡುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. 


ಮೂತ್ರಪಿಂಡವನ್ನು ಶುದ್ಧೀಕರಿಸುವಲ್ಲಿ ಬಾಳೆ ದಿಂಡು ತುಂಬಾ ಪ್ರಯೋಜನಕಾರಿಯಾಗಿದೆ. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ತಮ್ಮ ಆಹಾರದ ಭಾಗವಾಗಿ ತೆಗೆದುಕೊಳ್ಳುವುದರಿಂದ ಪ್ರಯೋಜನ ಪಡೆಯಬಹುದು. 


ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದರೆ ಬಾಳೆ ದಿಂಡು ಪ್ರಯೋಜನಕಾರಿ. ತುರಿಕೆ ಮತ್ತು ಮೊಡವೆಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಬಾಳೆ ದಿಂಡು ತಿನ್ನಬಹುದು. ದೇಹದಿಂದ ತ್ಯಾಜ್ಯವನ್ನು ಹೊರಹಾಕಲು ಇದು ತುಂಬಾ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ: ಮಲಗುವ ಮುನ್ನ 1 ಲೋಟ ಹಾಲು ಕುಡಿಯುವುದರಿಂದ ಸಿಗುತ್ತೆ ಈ ಪ್ರಯೋಜನ, ಎರಡೇ ವಾರದಲ್ಲಿ ಕಾಣುತ್ತೆ ಬದಲಾವಣೆ


ಬಾಳೆ ದಿಂಡು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ. ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ. ಅಧಿಕ ತೂಕ ಇರುವವರು ಬಾಳೆ ದಿಂಡಿನಿಂದ ತಯಾರಿಸಿದ ಜ್ಯೂಸ್ ಕುಡಿದರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಒಳ್ಳೆಯದು. 


ಬಾಳೆ ದಿಂಡನ್ನು ಹೇಗೆ ಬಳಸುವುದು?


ಬಾಳೆ ದಿಂಡನ್ನು ಕತ್ತರಿಸಿ ಮಿಕ್ಸಿಯಲ್ಲಿ ರುಬ್ಬಿ ರಸವನ್ನು ತೆಗೆದು ಕುಡಿಯಬಹುದು. ಅಥವಾ ಸಲಾಡ್ ಆಗಿ ಇತರ ತರಕಾರಿಗಳೊಂದಿಗೆ ಬೆರೆಸಿ ತಿನ್ನಬಹುದು.  


ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದನ್ನು ಆಧರಿಸಿದೆ. ಅಲರ್ಜಿಯಿಂದ ಬಳಲುತ್ತಿರುವವರು, ಗರ್ಭಿಣಿ ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಇದನ್ನು ಸೇವಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.