ಬೆಂಗಳೂರು : Best way to control blood sugar : ಚಳಿಗಾಲದಂತೆಯೇ ಬೇಸಿಗೆ ಕಾಲದಲ್ಲಿಯೂ ಮಧುಮೇಹದಿಂದ ಬಳಲುತ್ತಿರುವವರಿಗೆ ಕಷ್ಟಕರವಾಗಿರುತ್ತದೆ.ತಾಪಮಾನ ಬದಲಾದಂತೆ ರಕ್ತದಲ್ಲಿನ ಸಕ್ಕರೆ ಮಟ್ಟವೂ ಏರುಪೇರಾಗುತ್ತದೆ.ಮಧುಮೇಹದಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುವುದರಿಂದ, ದೇಹದ ಆಂತರಿಕ ಅಂಗಗಳಿಗೆ ಹಾನಿಯಾಗುವ ಅಪಾಯವೂ ಹೆಚ್ಚಾಗುತ್ತದೆ.ಇದು ಮೂತ್ರಪಿಂಡಗಳು, ಯಕೃತ್ತು, ಕಣ್ಣುಗಳು ಮತ್ತು ನರಮಂಡಲದಂತಹ ಪ್ರಮುಖ ಅಂಗಗಳಿಗೆ ಹಾನಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. 


COMMERCIAL BREAK
SCROLL TO CONTINUE READING

ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಕೆಲವು ಪರಿಹಾರಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.  ಮಧುಮೇಹವು ಜೀವನದುದ್ದಕ್ಕೂ ಗುಣಪಡಿಸಲಾಗದ ಕಾಯಿಲೆಯಾಗಿದೆ. ಆರೋಗ್ಯಕರ ಜೀವನಶೈಲಿ ಮತ್ತು ಸರಿಯಾದ ಆಹಾರ ಪದ್ಧತಿಯ ಸಹಾಯದಿಂದ ಇದನ್ನು ಉತ್ತಮವಾಗಿ ನಿರ್ವಹಿಸಬಹುದು.ಹಾಗೆಯೇ ಈ ಮರದ ತೊಗಟೆಯನ್ನು ಬಳಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸುಲಭವಾಗಿ ನಿಯಂತ್ರಿಸಬಹುದು.


ಇದನ್ನೂ ಓದಿ : Uric Acid: ಮೊಸರಿನಲ್ಲಿ ಈ ಹಣ್ಣು ಬೆರೆಸಿ ತಿನ್ನಿ.. ಗಂಟುಗಳಲ್ಲಿ ಅಂಟಿ ಕುಳಿತ ಯೂರಿಕ್ ಆಸಿಡ್‌ ಕರಗಿ ದೇಹದಿಂದ ಹೊರಹೋಗುವುದು! ಕೀಲು ನೋವು ಸಹ ತೊಲಗುವುದು


ಹಣ್ಣಿನ ಮರದ ತೊಗಟೆ : 
ಸ್ಟಾರ್ ಫ್ರುಟ್  ಹೆಸರನ್ನು ಎಲ್ಲರೂ ಕೇಳಿರುತ್ತಾರೆ. ತಿನ್ನುವುದಕ್ಕೆ ಹುಲಿ ಸಿಹಿ ಮಿಶ್ರಿತ ಈ ಹಣ್ಣನ್ನು  ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಇದನ್ನು ಧಾರೆ ಹುಳಿ, ಕರಂಬಳ ಹಣ್ಣು, ಕರಬಲ,ಕರಿಮಾದಲ,ಕಮರದ್ರಾಕ್ಷಿ, ನಕ್ಷತ್ರ ಹುಳಿ ಎಂದೆಲ್ಲಾ ಕರೆಯಯುತ್ತಾರೆ. ಈ ಮರದ ತೊಗಟೆಯನ್ನು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಗಿಡಮೂಲಿಕೆಯಾಗಿ ಬಳಸಲಾಗುತ್ತದೆ.ಇದನ್ನು ಅರ್ಜುನ ತೊಗಟೆ ಎಂದು ಕೂಡಾ ಕರೆಯುತ್ತಾರೆ.


ಅರ್ಜುನ ತೊಗಟೆಯ ಪ್ರಯೋಜನ : 
 ಇದು ಆಂಟಿಆಕ್ಸಿಡೆಂಟ್‌ಗಳು ಮತ್ತು ಉರಿಯೂತ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಈ ಎಲ್ಲಾ ಅಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ವೈರಸ್‌ಗಳು, ಸೋಂಕುಗಳು ಮತ್ತು ಕಾಲೋಚಿತ ಕಾಯಿಲೆಗಳಿಂದ ಸುರಕ್ಷಿತವಾಗಿರಿಸಲು ಸಹಾಯ  ಮಾಡುತ್ತವೆ. ಇನ್ನು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಲಕ್ಷಣಗಳಿಂದಲೂ ಪರಿಹಾರವನ್ನು ಪಡೆಯಲು ಈ ತೊಗಟೆಯ ಸೇವನೆಯು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ,ಇನ್ಸುಲಿನ್ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ.


ಇದನ್ನೂ ಓದಿ:curd side effects: ಮೊಸರು ತಿಂದರೆ ಒಳ್ಳೆಯದು ಆದರೆ... ಇವುಗಳ ಜೊತೆ ತಿನ್ನಬೇಡಿ.!


ಮಧುಮೇಹದಲ್ಲಿ ಅರ್ಜುನ್ ತೊಗಟೆಯನ್ನು ಸೇವಿಸುವ ವಿಧಾನಗಳು : 
ಒಂದು ಕಪ್ ನೀರನ್ನು ಕುದಿಸಿ. ನಂತರ ಅದಕ್ಕೆ ಸ್ವಲ್ಪ ಅರ್ಜುನ ತೊಗಟೆ ಪುಡಿಯನ್ನು ಸೇರಿಸಿ .
ಈ ಮಿಶ್ರಣವನ್ನು 10 ನಿಮಿಷ ಬೇಯಿಸಲು ಬಿಡಿ.
ನಂತರ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.