ನವದೆಹಲಿ: ಕೊರೊನಾ ವೈರಸ್ (Coronavirus) ಪ್ರಕೋಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.  ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಇದುವರೆಗೆ ಯಾವುದೇ ಪರಿಣಾಮಕಾರಿ ಔಷಧಿ ಬಿಡುಗಡೆಯಾಗಿಲ್ಲ.  ಕರೋನಾ ಲಸಿಕೆ (Corona Vaccine Trial) ದಲ್ಲಿ ವಿಶ್ವಾದ್ಯಂತ ಪ್ರಯೋಗಗಳು ನಡೆಯುತ್ತಿವೆ. ಮುಂದಿನ ವರ್ಷದ ಜನವರಿಯೊಳಗೆ ಯಾವುದೇ ಲಸಿಕೆ ಮಾರುಕಟ್ಟೆಗೆ ಬರುವುದಿಲ್ಲ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಏತನ್ಮಧ್ಯೆ, ಭಾರತದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ ಟಿಬಿ ರಕ್ಷಣೆ ಪಡೆಯಲು ಬಳಸಲಾಗುವ ಬಿಸಿಜಿ ಲಸಿಕೆ ಸಹ ಜನರನ್ನು ಕರೋನಾದಿಂದ ರಕ್ಷಿಸಲಿದೆ ಎನ್ನಲಾಗಿದೆ. ಕರೋನವೈರಸ್ ತಡೆಗಟ್ಟುವಲ್ಲಿ ಬಿಸಿಜಿ ಲಸಿಕೆ ಸಹ ಪರಿಣಾಮಕಾರಿ ಎಂದು ಸಾಬೀತಾಗಿದೆ. ಇಂಡಿಯನ್ ಜರ್ನಲ್ ಆಫ್ ಅಪ್ಲೈಡ್ ರಿಸರ್ಚ್‌ನಲ್ಲಿ ಒಂದು ಸಂಶೋಧನೆಯನ್ನು ಪ್ರಕಟಿಸಲಾಗಿದ್ದು, ಈ ಸಂಶೋಧನೆಯಿಂದ ಈ ಅಂಶ ಬಹಿರಂಗಗೊಂಡಿದೆ.


ಇದನ್ನು ಓದಿ-ಭಾರತದಲ್ಲಿ ತಯಾರಾಯಿತು covid-19 ಲಸಿಕೆ: ಫೆಬ್ರವರಿಯಲ್ಲಿ ಲಭ್ಯ!


ನೋಯೇಡಾ ಸೆಕ್ಟರ್ 39ರಲ್ಲಿರುವ ಕೊವಿಡ್ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕೆ ಡಾ.ರೇಣು ಅಗ್ರವಾಲ್ ಸಂಶೋಧನೆಯೊಂದನ್ನು ನಡೆಸಿದ್ದು, ಇದರಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಅವರು ನಡೆಸಿರುವ ಸಂಶೋಧನೆಯ ಪ್ರಕಾರ ಬಿಸಿಜಿ ವ್ಯಾಕ್ಸಿನ್ ಶರೀರದ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ
.


ಈ ಕುರಿತು ಹೇಳಿಕೆ ನೀಡಿರುವ ಡಾ. ರೇಣು ಅಗರವಾಲ್, ಈ ಸಂಶೋಧನೆಯ ಸ್ಟೇಜ್ 1 ರ ವೇಳೆ ಏಪ್ರಿಲ್ 1 ರಂದು ನೋಯ್ಡಾ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 30 ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಗೆ ಬಿಸಿಜಿ ಲಸಿಕೆ ನೀಡಲಾಗಿತ್ತು ಇವರಲ್ಲಿ ಇದುವರೆಗೆ ಯಾರೂ ಕೂಡ ಕೊರೊನಾ ಪರೀಕ್ಷೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ.


ಈ ಸಂಶೋಧನೆಯ ಒಂದು ಕಂಟ್ರೋಲ್ ಗ್ರೂಪ್ ನಲ್ಲಿ ಒಟ್ಟು 50 ಜನರನ್ನು ಇರಿಸಲಾಗಿತ್ತು ಮತ್ತು ಅವರಿಗೆ ಬಿಸಿಜಿ ವ್ಯಾಕ್ಸಿನ್ ನೀಡಲಾಗಿರಲಿಲ್ಲ. ಈ 50 ಜನರಲ್ಲಿ ಒಟ್ಟು 16 ಜನರು ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.


ಈ ಸಂಶೋಧನೆಯ ಸ್ಟೇಜ್ 2ರಲ್ಲಿ ನೋಯಡಾದ ಕೊವಿಡ್ ಆಸ್ಪತ್ರೆಯಲ್ಲಿ 50 ಮೆಡಿಕಲ್ ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿಗಳಿಗೆ ಆಗಸ್ಟ್ 24 ರಂದು ಬಿಸಿಜಿ ವ್ಯಾಕ್ಸಿನ್ ನೀಡಲಾಗಿದ್ದು, ಅವರು ಕೊವಿಡ್ ರೋಗಿಗಳ ಚಿಕಿತ್ಸೆಯಲ್ಲಿ ನಿರತರಾಗಿದ್ದರು. ಇವರಲ್ಲಿಯೂ ಕೂಡ ಯಾರಿಗೂ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿಲ್ಲ. ಇನ್ನೊಂದೆಡೆ 80 ಜನರ ಕಂಟ್ರೋಲ್ ಗ್ರೂಪ್ ನ 20 ಜನರು ಕೊವಿಡ್ ಸೋಂಕಿಗೆ ಗುರಿಯಾಗಿದ್ದಾರೆ.


ಆಸ್ಪತ್ರೆಯ ಒಟ್ಟು 210 ಜನರ ಪೈಕಿ 80 ಸಿಬ್ಬಂದಿಗಳಿಗೆ ಬಿಸಿಜಿ ಲಸಿಕೆ ನೀಡಲಾಗಿದೆ. ಆದರೆ, ಲಸಿಕೆ ನೀಡಲಾಗದ ಸಿಬ್ಬಂಧಿಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಲಸಿಕೆ ನೀಡಲಾಗಿರುವವರಲ್ಲಿ ಇರುವರೆಗೆ ಸೋಂಕು ಪತ್ತೆಯಾಗಿಲ್ಲ ಎನ್ನಲಾಗಿದೆ. ಈ ಎಲ್ಲ ಸಿಬ್ಬಂದಿಗಳಿಗೆ ಪ್ರತಿ 15 ದಿನಗಳಿಗೊಮ್ಮೆ RT-PCR ಪರೀಕ್ಷೆ ನಡೆಸಲಾಗಿದೆ ಎಂದು ಡಾ. ರೇಣು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ತಾವು ಸ್ವತಃ ಕೂಡ ಈ ಲಸಿಕೆಯನ್ನು ತಮ್ಮ ಮೇಲೆ ಪ್ರಯೋಗಿಸಿದ್ದು, ಇದುವರೆಗೆ ತಾವು ಕೊರೊನಾ ಸೋಂಕಿಗೆ ಗುರಿಯಾಗಿಲ್ಲ ಎಂದು ಹೇಳಿದ್ದಾರೆ.