Protein Powder Side Effects: ಸದೃಢ ದೇಹ ಪಡೆಯುವ ಉದ್ದೇಶದಿಂದ ಪ್ರತಿದಿನ ಅನೇಕರು ಜಿಮ್‌ ಸೇರಿದಂತೆ ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಇದರ ಜೊತೆ ಜೊತೆಗೆ ಪ್ರೋಟೀನ್​​ ಪೌಡರ್​ ಸಹ ಬಳಸುತ್ತಾರೆ. ಆದರೆ ಈ ಪ್ರೋಟೀನ್‌ ಪೌಡರ್‌ ಬಳಸುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ. ICMR ವರದಿಯಲ್ಲಿ ಬೀಳಿಸುವ ವಿಷಯ ಬಹಿರಂಗವಾಗಿದೆ. ಜಿಮ್‌ ಮತ್ತು ಸ್ಫೋರ್ಟ್‌ಗಳಲ್ಲಿ ತೊಡಗಿಕೊಂಡಿರುವ ಯುವಕ-ಯುವತಿಯರು ಪ್ರೋಟೀನ್ ಹೆಸರಿನಲ್ಲಿ ಸ್ಲೋ ಪಾಯಿಸನ್ ಸೇವಿಸುತ್ತಿದ್ದು, ತಮಗೆ ತಾವೇ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ ಅಂತಾ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಶಾಕಿಂಗ್‌ ಹೇಳಿಕೆ ನೀಡಿದೆ.


COMMERCIAL BREAK
SCROLL TO CONTINUE READING

Protein Powder Side Effects, ICMR


13 ವರ್ಷದ ಬಳಿಕ ICMR ಭಾರತೀಯರ ಫುಡ್ ಡಯಟ್ರಿ ಗೈಡ್‌ಲೈನ್ಸ್ ಬಿಡುಗಡೆ ಮಾಡಿದ್ದು, ಪ್ರೋಟಿನ್ ಪೌಡರ್ ಬಳಕೆದಾರರನ್ನು ಅಚ್ಚರಿ ಮೂಡಿಸುವ ಅಂಶಗಳು ಈ ವರದಿಯಲ್ಲಿವೆ. ಅತಿಯಾದರೆ ಅಮೃತವೂ ವಿಷವೆಂಬಂತೆ ಅತಿಯಾಗಿ ಪ್ರೋಟಿನ್ ಪೌಡರ್ ಸೇವನೆಯಿಂದ ಜೀವಕ್ಕೆ ಅಪಾಯವಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದೆ. ಭಾರತದಲ್ಲಿ ಅತಿಹೆಚ್ಚು ಪ್ರೋಟೀನ್ ಪೌಡರ್‌ಗಳು ಮಾರಟವಾಗುತ್ತಿವೆ. ಇದರಲ್ಲಿ ಸಕ್ಕರೆ, ಸೋಡಿಯಂ, ಪೋಟ್ಯಾಷಿಯಂ ಸೇರಿದಂತೆ ಹಲವು ಕೆಮಿಕಲ್ ಅಂಶಗಳು ಪತ್ತೆಯಾಗಿದ್ದು, ಆರೋಗ್ಯದ ದುಷ್ಪರಿಣಾಮ ಬೀರುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 


ಇದನ್ನೂ ಓದಿ: ಕಿಡ್ನಿಯಲ್ಲಿ ಕಲ್ಲುಗಳಿದ್ದರೆ ಇಂದಿನಿಂದಲೇ ಈ ಪದಾರ್ಥಗಳನ್ನು ಸೇವಿಸಿ, ಶೀಘ್ರದಲ್ಲೇ ಸಮಸ್ಯೆ ನಿವಾರಣೆಯಾಗುತ್ತೆ..!


ಭಾರತೀಯ ಮಾರುಕಟ್ಟೆಯಲ್ಲಿರುವ ಅನೇಕ ಕಂಪನಿಗಳ ಪ್ರೋಟೀನ್ ಪೌಡರ್‌ಗಳಲ್ಲಿ ಜೀವಕ್ಕೆ ಕುತ್ತು ತರುವಂತಹ ಕೆಮಿಕಲ್ ಬಳಕೆ ಮಾಡಲಾಗುತ್ತಿದೆಯಂತೆ. ಹೆಚ್ಚಾಗಿ ಸಕ್ಕರೆ ಅಂಶಗಳು ಪ್ರೋಟಿನ್ ಪೌಡರ್​ಗಳಲ್ಲಿ ಬಳಕೆ ಮಾಡಲಾಗುತ್ತಿದ್ದು, ಇದರಿಂದ ಡಯಾಬಿಟಿಸ್‌ನಂತಹ ಸಮಸ್ಯೆ ಬರುವ ಸಾಧ್ಯತೆಯಿದೆ.


ದೇಹಕ್ಕೆ ಕ್ಯಾಲೋರಿ ಒದಗಿಸುವ ಹಿನ್ನಲೆ ಅದರಲ್ಲಿ ಬಳಸುವ ಒಂದಿಷ್ಟು ಕೆಮಿಕಲ್ ಅಂಶಗಳು ಕಿಡ್ನಿ, ಲಿವರ್ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಅತಿಯಾಗಿ ಪ್ರೋಟೀನ್ ಪೌಡರ್​ ಬಳಸದೆ ದೇಹ ವೃದ್ಧಿಗೆ ನೈಸರ್ಗಿಕ ಆಹಾರವನ್ನೇ ಬಳಸುವಂತೆ ಹಿರಿಯ ಮದುಮೇಹ ತಜ್ಞ ಡಾ.‌ಅನೀಲ್‌ಕುಮಾರ್ ಸಲಹೆ ನೀಡಿದ್ದಾರೆ. ಜಿಮ್​ಗಳಿಗೆ ಬರುವ ಬಹುತೇಕರು ಆನ್​ಲೈನ್‌ನಲ್ಲಿ ಪ್ರೋಟೀನ್​ ಪೌಡರ್‌ಗಳನ್ನು ಖರೀದಿಸುತ್ತಾರೆ. ಲೈಸೆನ್ಸ್ ಇಲ್ಲದಿರುವ ಕಂಪನಿಗಳ ಪ್ರೋಟೀನ್ ಪೌಡರ್‌ಗಳನ್ನು ಯಾವುದೇ ಕಾರಣಕ್ಕೂ ​ಬಳಸಬಾರದು ಅಂತಾ ಎಚ್ಚರಿಕೆ ನೀಡಲಾಗಿದೆ. ನಿಮಗೂ ಪ್ರೋಟೀನ್ ಪೌಡರ್‌ ಸೇವಿಸುವ ರೂಢಿಯಿದ್ದರೆ ಉತ್ತಮ ಆರೋಗ್ಯದ ದೃಷ್ಟಿಯಿಂದ ಇಂದೇ ಅದನ್ನು ನಿಲ್ಲಿಸುವುದು ಸೂಕ್ತವೆಂದು ಸಲಹೆ ನೀಡಲಾಗಿದೆ.


ಇದನ್ನೂ ಓದಿ: ಕಿಡ್ನಿಸ್ಟೋನ್’ಗೆ ಸಂಜೀವಿನಿ ಇದ್ದಂತೆ ಈ ಗಿಡದಲ್ಲಿ ಶೇಖರಣೆಯಾದ ನೀರು! ಸೇವಿಸಿದ ತಕ್ಷಣ ಕಲ್ಲು ಪುಡಿಯಾಗಿ ಮೂತ್ರಕೋಶದಿಂದ ಹೊರಬರುತ್ತೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.