ನವದೆಹಲಿ : ಲಾಕ್ ಡೌನ್ (Lockdown) ಕಾಲದಲ್ಲಿ ಮನೆಯೊಳಗಿದ್ದರೂ, ದಿನಕ್ಕೊಮ್ಮೆಯಾದರೂ ಹೊರಗೆ ಹೋಗಲೇ ಬೇಕಾದ ಸನ್ನಿವೇಶ ಬರಬಹುದು. ಡೆಲಿವರಿ ಹುಡುಗ ನಿಮ್ಮ ಮನೆಗೆ ಬರಬಹುದು. ರೇಷನ್, ಹಾಲು, ಹಣ್ಣು, ತರಕಾರಿ ಮನೆಯೊಳಗೆ ಬಂದೇ ಬರುತ್ತೆ..ಹೀಗಿರುವಾಗ ನೀವು ಎಷ್ಟು ಸೇಫ್ಟಿ ಇಟ್ಟು ಕೊಂಡರೂ ಕಡಿಮೆಯೆ. ಇಂಥ ಸನ್ನಿವೇಶಗಳಲ್ಲಿ ನೀವು ಮಾಡಬೇಕಾಗಿದ್ದು ಏನು..? ಯಾವ ತಪ್ಪುಗಳನ್ನು ಮಾಡಲೇ ಬಾರದು. ಕರೋನಾ (Coronavirus) ಕಾಲದಲ್ಲಿ ನಾವು ಫಾಲೋ ಮಾಡಬೇಕಾದ ನಿಯಮಗಳೇನು.? ಇಲ್ಲಿದೆ ಆ 20 ಪಾಯಿಂಟ್ಸ್


COMMERCIAL BREAK
SCROLL TO CONTINUE READING

ಅಂಗಡಿಯಿಂದ ಸಾಮಾನು ಮನೆಗೆ ತರುವಾಗ ಈ ಮುನ್ನೆಚ್ಚರಿಕೆ ಇರಲಿ:
1. ರಶ್ ಇರುವಾಗ ಸಾಮಾನು ಖರೀದಿಗೆ ಹೋಗಬೇಡಿ
2. ಕ್ಯಾಶ್ ಅಥವಾ ಕಾರ್ಡ್ ಪೇಮೆಂಟ್ (card payment) ಮಾಡಬೇಡಿ, ಆನ್ ಲೈನ್ ಪೇಮೆಂಟ್ ಮಾಡಿ
3. ಖರೀದಿಸುವ ವಸ್ತುವಿನ ಲಿಸ್ಟ್ ಮೊದಲೇ ಮಾಡಿಟ್ಟುಕೊಳ್ಳಿ
4. ಸರಿಯಾದ ರೀತಿಯಲ್ಲಿ ಮಾಸ್ಕ್ (Mask) ಧರಿಸುವುದು ಅನಿವಾರ್ಯ


ಇದನ್ನೂ ಓದಿ : ಕರೋನಾ ಕಾಲದಲ್ಲಿ ದೇಸಿ ತುಪ್ಪ ಯಾಕೆ ತಿನ್ನಬೇಕು.? ಇಲ್ಲಿದೆ ಉತ್ತರ


ಹಣ್ಣು, ತರಕಾರಿ, ಹಾಲು ಮನೆಗೆ ತರುವಾಗ ಮುನ್ನೆಚ್ಚರಿಕೆ ಏನು.?
1. ದಿನಸಿ ವಸ್ತುಗಳನ್ನು ಮನೆಗೆ ತರುವಾಗ ಮನೆಯ ಮುಂಭಾಗದಲ್ಲಿ ಒಂದು ಕೌಂಟರ್ ಅಥವಾ ಟೇಬಲ್ ಇಡಿ. ದಿನಸಿ ಸಾಮಾನುಗಳನ್ನು ಬಹಳ ಹೊತ್ತು ಆ ಟೇಬಲ್ ನಲ್ಲಿಯೇ ಇಡಿ.
2. ಮನೆಯ ಮುಂಭಾಗದಲ್ಲಿ ಜಾಗ  ಇಲ್ಲದೇ ಹೋದರೆ ಸಾಮಾನುಗಳನ್ನು ತಂದು ನೇರ ಬಾಲ್ಕನಿ ಅಥವಾ  ಅತ್ಯಂತ ಕಡಿಮೆ ಬಳಕೆ ಮಾಡುವ ವಾಶ್ ರೂಮಿನಲ್ಲಿಡಿ.
3. ದಿನಸಿ, ಹಣ್ಣು, ತರಕಾರಿ  ಇತ್ಯಾದಿ ನೇರ ಅಡುಗೆ ಮನೆ/ಹಾಲ್/ಬೆಡ್ ರೂಮಿಗೆ ತರುವುದು ತೀರಾ ಅಪಾಯಕಾರಿ
4. ಪ್ಲಾಸ್ಟಿಕ್ ಕವರ್, ಕಂಟೈನರ್ ಇರುವ ಆಹಾರ ವಸ್ತುಗಳನ್ನು ಸಾಬೂನು ಹಾಕಿ ತೊಳೆಯಿರಿ.
5. ಹರಿಯುವ ಟ್ಯಾಪ್ ನೀರಿನಲ್ಲಿ (Tap water) ಹಣ್ಣು, ತರಕಾರಿಯನ್ನು ಚೆನ್ನಾಗಿ ತೊಳೆಯಿರಿ.
6. ಅಲ್ಕೋಹಾಲ್ (Alcohol) ಇರುವ ದ್ರಾವಣ ಬಳಸಿ ಮೊಬೈಲ್ ಕವರನ್ನು ಚೆನ್ನಾಗಿ ಕ್ಲೀನ್ ಮಾಡಿ
7. ಹೊರಗೆ ಹೋಗಿ ಬಂದು ಕೈ, ಕಾಲು ಚೆನ್ನಾಗಿ ತೊಳೆಯಿರಿ. ಸ್ನಾನ ಮಾಡಿದರೆ ಇನ್ನೂ ಉತ್ತಮ
8. ತಕ್ಷಣದಲ್ಲಿ ಬಟ್ಟೆ ಬದಲಾಯಿಸಿ. ಡಿಟರ್ಜಂಟ್ ಹಾಕಿ ಒಗೆಯಿರಿ. ಅದನ್ನು ಇತರ ಬಟ್ಟೆಗಳ ಜೊತೆ ಮಿಕ್ಸ್ ಮಾಡಬೇಡಿ
9. ಮುಖ್ಯವಾಗಿ ಜೀವನಾವಶ್ಯಕ ಸಾಮಾಗ್ರಿಗಳಿಗಾಗಿ ಮಾತ್ರ ಹೊರಗೆ ಹೋಗಿ


ಇದನ್ನೂ ಓದಿ Health Tips: ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ 5 ಮಖಾನಾ ಸೇವಿಸಿ


ಹೋಮ್ ಡೆಲಿವರಿಯಾತ ಸಾಮಾನು ತಂದಾಗ ಹೀಗೆ ಮಾಡಿ :
1. ಡೆಲಿವರಿ ಹುಡುಗ ಮಾಸ್ಕ್, ಡಿಸ್ಟೆನ್ಸ್ ಇತ್ಯಾದಿ ಕೊವಿಡ್ ಪ್ರೋಟೋಕಾಲ್ ಪಾಲನೆ ಮಾಡುತ್ತಿದ್ದಾನೆಯಾ ಗಮನಿಸಿ
2. ಡೆಲಿವರಿ ಹುಡುಗ ಮಾಸ್ಕ್ ಖಂಡಿತವಾಗಿ ಧರಿಸಿರಲೇಬೇಕು, ಇಲ್ಲದಿದ್ದರೆ ಡಿಲಿವರಿ ರಿಟರ್ನ್ ಮಾಡಿ, ಕಂಪನಿಗೆ ಕಂಪ್ಲೆಂಟ್ ಮಾಡಿ
3. ಸಾಮಾನಿನ ಕಾರ್ಡ್ ಬೋರ್ಡ್, ಪ್ಲಾಸ್ಟಿಕ್ ಪ್ಯಾಕೇಜಿಂಗ್ ಮನೆಯ ಹೊರಗಡೆಯೇ ಹರಿದು ಹಾಕಿ.
4. ಮನೆಯ ಹೊರಗೆ ಇಟ್ಟಿರುವ ಕಸದ ಡಬ್ಬಕ್ಕೆ ಈ ಪ್ಯಾಕೇಜಿಂಗ್ ವಸ್ತುಗಳನ್ನು ಹಾಕಿ. ಎಲ್ಲೆಂದರಲ್ಲಿ ಎಸೆಯಬೇಡಿ.
5. ಕೈ ಚೆನ್ನಾಗಿ ತೊಳೆದ (Hand wash) ಮೇಲೆ ವಸ್ತುವನ್ನು ಹೊರಕ್ಕೆ ತೆಗೆದು ಮನೆಯೊಳಕ್ಕೆ ತನ್ನಿರಿ
6. ಮತ್ತೊಮ್ಮೆ ಕೈಯನ್ನು ಚೆನ್ನಾಗಿ ತೊಳೆಯಿರಿ ಅಥವಾ ಸಾನಿಟೈಸ್ (Sanitise) ಮಾಡಿಕೊಳ್ಳಿ
7. ಹೊರಗಡೆಯ ವಸ್ತುಗಳನ್ನು ಮನೆಯಲ್ಲಿ ಒಬ್ಬರೇ ಹ್ಯಾಂಡಲ್ ಮಾಡಿ.


ಇದನ್ನೂ ಓದಿ : Anger Management Therapy: ಸಣ್ಣ-ಪುಟ್ಟ ವಿಷಯಕ್ಕೂ ಕೋಪ ಬರುತ್ತಿದೆಯೇ? ಈ ಟಿಪ್ಸ್ ಅನುಸರಿಸಿ ನೋಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.