ಉಳಿದ ಸಮಯಕ್ಕಿಂತ ಚಳಿಗಾಲದಲ್ಲಿ ಸೌಂದರ್ಯ ಸಮಸ್ಯೆ ಹೆಚ್ಚಾಗಿಯೇ ಕಂಡು ಬರುತ್ತದೆ. ತ್ವಚೆ ಒಡೆಯುವುದು, ಪಾದಗಳಲ್ಲಿ ಬಿರುಕು, ತುಟಿ ಒಣಗಿ ಬಿರುಕು ಕಂಡು ಬರುವುದು, ಕೂದಲು ಒಣಗುವುದು ಈ ರೀತಿಯ ನಾನಾ ಸಮಸ್ಯೆಗಳು ಕಂಡು ಬರುತ್ತದೆ. 


COMMERCIAL BREAK
SCROLL TO CONTINUE READING

ಇಂತಹ ಸಮಸ್ಯೆಗಳನ್ನು ತಡೆಯಲು ಚಳಿಗಾಲ ಪ್ರಾರಂಭವಾಗುತ್ತಿರುವಾಗಲೇ ಎಚ್ಚರಿಕೆ ವಹಿಸುವುದು ಒಳ್ಳೆಯದು. ಚಳಿಗಾಲದಲ್ಲಿ ನಿಮ್ಮ ಸೌಂದರ್ಯ ಕಾಪಾಡುವಲ್ಲಿ ಈ ಟಿಪ್ಸ್ಗಳು ಸಹಕಾರಿಯಾಗಲಿವೆ. 


1. ಮುಖದ ಕಾಂತಿಗೆ ದೇಹದಲ್ಲಿ ನೀರಿನಂಶ ಹೆಚ್ಚಾಗಿ ಇರಬೇಕಾಗುತ್ತದೆ. ಅದಕ್ಕಾಗಿ ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಬೇಕಾಗುತ್ತದೆ.


2. ಕೆಫಿನ್ ಅಂಶವಿರುವ ತಿನಿಸುಗಳನ್ನು ಮತ್ತು ಮದ್ಯವನ್ನು ತೆಗೆದುಕೊಳ್ಳದಿದ್ದರೆ ಒಳ್ಳೆಯದು.


3. ಚಳಿಗಾಲದಲ್ಲಿ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರನ್ನು ಬಳಸಬೇಕು. ಚಳಿ ಎಂಬ ಕಾರಣದಿಂದ  ಅತಿ ಹೆಚ್ಚು ಬಿಸಿಯಾದ ನೀರು ಬಳಸುವುದು ಚರ್ಮಕ್ಕೆ ಒಳ್ಳೆಯದಲ್ಲ.


4. ಆದಷ್ಟು ಮೈಗೆ ಮಾಶ್ಚರೈಸಿಂಗ್ ಸೋಪು ಬಳಸುವುದು ಒಳ್ಳೆಯದು. 


5 .ಚಳಿಗಾಲದಲ್ಲಿ ವಾರಕ್ಕೊಮ್ಮೆ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡಿ ಸ್ನಾನ ಮಾಡುವುದರಿಂದ ದೇಹದ ಕಾಂತಿ ಹೆಚ್ಚುತ್ತದೆ. 


6. ಚಳಿಗಾಲದಲ್ಲಿ ತುಟಿ ಒಣಗುವುದು ಸಾಮಾನ್ಯ. ಆದ್ದರಿಂದ ತುಟಿಗೆ ತುಪ್ಪ ಆಥವಾ ಹಾಲಿನ ಕೆನೆಯನ್ನು ಹಚ್ಚುವುದರಿಂದ ತುಟಿ ಒಡೆಯುವುದಿಲ್ಲ.


7. ಚಳಿಗಾಲದಲ್ಲಿ ತ್ವಚೆ ಒಡೆಯುವುದರಿಂದ ಹೊರಗಡೆ ಹೋಗುವಾಗ ಮಾಯಿಶ್ಚರೈಸರ್ ಹಚ್ಚಿ. 


8. ಪ್ರತಿನಿತ್ಯ ಸ್ನಾನ ಮಾಡುವ ಮುಂಚೆ 2 ಚಮಚ ಸಕ್ಕರೆಗೆ 2 ಚಮಚ ಎಣ್ಣೆ ಹಾಕಿ ಮಿಶ್ರಣ ಮಾಡಿ ಮೈ ಸ್ಕ್ರಬ್ ಮಾಡಿ. ಇದು ನಿರ್ಜಿವ ತ್ವಚೆಯನ್ನು ಹೋಗಲಾಡಿಸಿ, ತ್ವಚೆಯ ಹೊಳಪು ಹೆಚ್ಚಿಸುತ್ತದೆ. 


9. ಚಳಿಗಾಲದಲ್ಲಿ ಕೂದಲು ಕವಲೊಡೆದು ಉದುರಲಾರಂಭಿಸುತ್ತದೆ. ಈ ಸಮಯದಲ್ಲಿ ಎಣ್ಣೆಯನ್ನು ಹಾಗೇ ತಲೆಗೆ ಹಚ್ಚುವುದಕ್ಕಿಂತ ಬಿಸಿ ಮಾಡಿ ಹಚ್ಚಿದರೆ ಒಳ್ಳೆಯದು.


10. ಬೆಚ್ಚನೆಯ ಬಟ್ಟೆಗಳನ್ನು ಧರಿಸಿ.