ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಈ ಸಂಕೇತಗಳು ಸರ್ವಿಕಲ್ ಕ್ಯಾನ್ಸರ್ ನ ಲಕ್ಷಣಗಳಾಗಿರಬಹುದು ..!
Cervical Cancer Symptoms:ಗರ್ಭಾಶಯದ ಗರ್ಭಕಂಠವು ಯೋನಿ ಮತ್ತು ಗರ್ಭಾಶಯವನ್ನು ಸಂಪರ್ಕಿಸುವ ಗರ್ಭಾಶಯದ ಕೆಳಗಿನ ಭಾಗವಾಗಿದೆ. ಹ್ಯೂಮನ್ ಪ್ಯಾಪಿಲೋಮ ವೈರಸ್ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಿದೆ.
Cervical Cancer Symptoms : ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ಆರಂಭಿಕ ಹಂತದಲ್ಲಿಯೇ ಅದನ್ನು ಪತ್ತೆ ಮಾಡದಿದ್ದರೆ ಜೀವ ಉಳಿಸುವುದು ತುಂಬಾ ಕಷ್ಟ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ, ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಅದರ ಅಂಕಿಅಂಶಗಳು ವೇಗವಾಗಿ ಹೆಚ್ಚುತ್ತಿವೆ. ಗರ್ಭಾಶಯದ ಗರ್ಭಕಂಠವು ಯೋನಿ ಮತ್ತು ಗರ್ಭಾಶಯವನ್ನು ಸಂಪರ್ಕಿಸುವ ಗರ್ಭಾಶಯದ ಕೆಳಗಿನ ಭಾಗವಾಗಿದೆ. ಹ್ಯೂಮನ್ ಪ್ಯಾಪಿಲೋಮ ವೈರಸ್ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಿದೆ. ಇದನ್ನು ಮೊದಲ ಹಂತದಲ್ಲಿಯೇ ಗುರುತಿಸಿದರೆ, ಜೀವವನ್ನು ಉಳಿಸಬಹುದು.
ಗರ್ಭಕಂಠದ ಕ್ಯಾನ್ಸರ್ ಅನ್ನು ಹೇಗೆ ಗುರುತಿಸುವುದು?
ಗರ್ಭಕಂಠದ ಕ್ಯಾನ್ಸರ್ ಅನ್ನು ಸಾಮಾನ್ಯವಾಗಿ ಮೊದಲ ಹಂತದಲ್ಲಿಯೇ ಕಂಡುಹಿಡಿಯಲಾಗುವುದಿಲ್ಲ. ಅದರ ಚಿಹ್ನೆಗಳು ಅಭಿವೃದ್ಧಿಗೊಳ್ಳಲು ಹಲವು ವರ್ಷಗಳು ತೆಗೆದುಕೊಳ್ಳಬಹುದು. ಆದರೂ ದೇಹ ನೀಡುವ ಕೆಲವು ಎಚ್ಚರಿಕೆ ಸಂಕೇತಗಳನ್ನು ನಿರ್ಲಕ್ಷಿಸದೆ, ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ : ಕೂದಲುದುರುವ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಈ ಐದು ಆಹಾರ
ಗರ್ಭಕಂಠದ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು :
1.ಲೈಂಗಿಕ ಕ್ರಿಯೆಯ ವೇಳೆ ತೀವ್ರ ನೋವು
2.ಮಹಿಳೆಯರ ಖಾಸಗಿ ಭಾಗಗಳಿಂದ ದುರ್ವಾಸನೆ
3. ಲೈಂಗಿಕ ಕ್ರಿಯೆಯ ನಂತರ ರಕ್ತಸ್ರಾವ
4. ಅನಿಯಮಿತ ಋತುಚಕ್ರ ಮತ್ತು ಹಠಾತ್ ರಕ್ತಸ್ರಾವ
5. ಮಲ ವಿಸರ್ಜನೆ ವೇಳೆ ರಕ್ತಸ್ರಾವ
6.ಅತಿಯಾದ ಆಯಾಸ
7. ತೂಕ ನಷ್ಟ
8 . ಆಹಾರ ತಸೇವನೆ ಬೇಡ ಎಂದೆನಿಸುವುದು
9. ಹೊಟ್ಟೆ ನೋವು
10. ಮೂತ್ರ ವಿಸರ್ಜನೆಯಲ್ಲಿ ನೋವು
11. ಅತಿಸಾರ
ರೋಗಲಕ್ಷಣಗಳು ಕಂಡುಬಂದ ತಕ್ಷಣ ಟೆಸ್ಟ್ ಮಾಡಿಸಿಕೊಳ್ಳಿ :
ಸ್ತ್ರೀರೋಗಕ್ಕೆ ಸಂಬಂಧಿಸಿದ ಕೆಲವು ಪರೀಕ್ಷೆಗಳಿದ್ದು, ಇವುಗಳ ಸಹಾಯದಿಂದ ಕ್ಯಾನ್ಸರ್ ಪೂರ್ವ ಹಂತವನ್ನು ಕಂಡುಹಿಡಿಯಬಹುದು. ಹೀಗಾದಾಗ ಗರ್ಭಕಂಠದ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವುದು ಸುಲಭವಾಗುತ್ತದೆ. ಹ್ಯೂಮನ್ ಪ್ಯಾಪಿಲೋಮ ವೈರಸ್ ಆಣ್ವಿಕ ಪರೀಕ್ಷೆಗಳು ಬಹಳ ಪರಿಣಾಮಕಾರಿಯಾಗಿರುತ್ತದೆ. ಎಂಡೋಸರ್ವಿಕಲ್ ಚಿಕಿತ್ಸೆಯು ಒಂದು ತಂತ್ರವಾಗಿದ್ದು, ಇದರಲ್ಲಿ ಜೀವಕೋಶಗಳ ಮಾದರಿಯನ್ನು ತೆಗೆದುಕೊಳ್ಳುವ ಮೂಲಕ ಬಯಾಪ್ಸಿ ಮಾಡಲಾಗುತ್ತದೆ ಮತ್ತು ಈ ಅಪಾಯಕಾರಿ ಮತ್ತು ಮಾರಣಾಂತಿಕ ರೋಗವನ್ನು ಕಂಡುಹಿಡಿಯಲಾಗುತ್ತದೆ.
ಇದನ್ನೂ ಓದಿ : ಹೈ ಕೊಲೆಸ್ಟ್ರಾಲ್ ಜೊತೆಗೆ ಹೈ ಬಿಪಿಯನ್ನೂ ನಿಯಂತ್ರಿಸುತ್ತೆ ಈ ಒಂದು ತರಕಾರಿ
ಗರ್ಭಕಂಠದ ಕ್ಯಾನ್ಸರ್ ಅನ್ನು ತಪ್ಪಿಸಿ :
ಸ್ವಲ್ಪ ಎಚ್ಚರಿಕೆ ವಹಿಸಿದರೆ, ಇತರ ಪ್ರಮುಖ ಕಾಯಿಲೆಗಳಂತೆ, ಗರ್ಭಕಂಠದ ಕ್ಯಾನ್ಸರ್ ಅನ್ನು ತಪ್ಪಿಸಬಹುದು. ಜೊತೆಗೆ ಈ ರೋಗವನ್ನು ಆಣ್ವಿಕ ಪರೀಕ್ಷೆ ಮತ್ತು ಪ್ಯಾಪ್ ಸ್ಮೀಯರ್ ಸ್ಕ್ರೀನಿಂಗ್ ಮೂಲಕ ಮೊದಲೇ ಪತ್ತೆಹಚ್ಚಬಹುದು. ಹೀಗೆ ಈ ರೋಗವನ್ನು ಮೊದಲೇ ಪತ್ತೆ ಹಚ್ಚಿದರೆ ಅನೇಕ ಮಹಿಳೆಯರ ಜೀವಗಳನ್ನು ಉಳಿಸಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.