Monsoon Diet : ಮಳೆಗಾಲ ಆರಂಭಗೊಂಡಿದೆ.ಎಡೆಬಿಡದೆ ಮಳೆ ಸುರಿಯುತ್ತಿದೆ. ಮಳೆಗಾಲ ಅನೇಕ ರೋಗಗಳನ್ನು ಕೂಡಾ ತನ್ನೊಂದಿಗೆ ಹೊತ್ತು ತರುತ್ತದೆ.ಈ ಋತುವಿನಲ್ಲಿ, ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ.ಇದರಿಂದಾಗಿ ಸೋಂಕು ಮತ್ತು ರೋಗಗಳ ಅಪಾಯವೂ ಹೆಚ್ಚಾಗಿರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.ಆರೋಗ್ಯ ತಜ್ಞರ ಪ್ರಕಾರ,ಮಳೆಗಾಲದ ದಿನಗಳಲ್ಲಿ ಕೆಲವು ತರಕಾರಿಗಳನ್ನು ತಿನ್ನಬಾರದು.ಈ  ಸಮಯದಲ್ಲಿ ಲಭ್ಯವಿರುವ ತರಕಾರಿಗಳಲ್ಲಿ ಅನೇಕ ರೀತಿಯ ಬ್ಯಾಕ್ಟೀರಿಯಾಗಳು ಮತ್ತು ಕೀಟಗಳು ಬೆಳೆಯುತ್ತವೆ.ಇದು ಆಹಾರದಲ್ಲಿ ವಿಷವನ್ನು ಉಂಟುಮಾಡುತ್ತದೆ.


COMMERCIAL BREAK
SCROLL TO CONTINUE READING

ಹಸಿರು ಎಲೆಗಳ ತರಕಾರಿಗಳು : 
ಮಳೆಗಾಲದಲ್ಲಿ ಪಾಲಕ್, ಎಲೆಕೋಸು ಮತ್ತು ಸಲಾಡ್ ಮುಂತಾದ ಹಸಿರು ಎಲೆಗಳ ತರಕಾರಿಗಳನ್ನು ಸೇವಿಸುವುದನ್ನು ತಪ್ಪಿಸಬೇಕು.ಈ ತರಕಾರಿಗಳು ಹೆಚ್ಚಿನ ಪ್ರಮಾಣದ ತೇವಾಂಶವನ್ನು ಹೊಂದಿರುತ್ತವೆ. ಇದರಿಂದಾಗಿ ಅವುಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಕೀಟಗಳು ಹುಟ್ಟಿಕೊಳ್ಳುವ ಸಾಧ್ಯತೆಯಿದೆ.  ಈ ತರಕಾರಿಗಳನ್ನು ಸೇವಿಸುವುದರಿಂದ ಹೊಟ್ಟೆಯ ಸೋಂಕು ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.


ಇದನ್ನೂ ಓದಿ : ಮಧುಮೇಹ, ತೂಕ ನಷ್ಟ ಎರಡಕ್ಕೂ ಇದೊಂದೇ ಮದ್ದು, ಇಲ್ಲಿದೆ ಇದನ್ನು ಬಳಸುವ ಸರಿಯಾದ ವಿಧಾನ


ಹೂಕೋಸು : 
ತರಕಾರಿಗಳಾದ ಹೂಕೋಸು, ಎಲೆಕೋಸು ಮತ್ತು ಕೋಸುಗಡ್ಡೆಗಳನ್ನು ಮಳೆಗಾಲದಲ್ಲಿ ಸೇವಿಸಬಾರದು.ವಾಸ್ತವವಾಗಿ,ಮಳೆಗಾಲದಲ್ಲಿ,ಈ ತರಕಾರಿಗಳಲ್ಲಿ ಸಣ್ಣ ಬಿಳಿ ಕೀಟಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.  ಅವುಗಳನ್ನು ತೆಗೆದುಹಾಕುವುದು ಕೂಡಾ ಬಹಳ ಕಷ್ಟ.


ಅಣಬೆ : 
ಅಣಬೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.ಆದರೆ ಮಳೆಗಾಲದಲ್ಲಿ ಇದನ್ನು ತಿನ್ನಬಾರದು.ಮಳೆಗಾಲದಲ್ಲಿ ಅಣಬೆಯನ್ನು ತಿನ್ನುವುದರಿಂದ ಸೋಂಕಿನ ಅಪಾಯ ಹೆಚ್ಚಾಗುತ್ತದೆ.ಇದು ಹೊಟ್ಟೆ ನೋವು, ವಾಂತಿ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.  


ಬದನೆ ಕಾಯಿ : 
ಮಳೆಗಾಲದಲ್ಲಿ ಬದನೆಕಾಯಿಯನ್ನು ಸೇವಿಸಬಾರದು. ಮಳೆಗಾಲದಲ್ಲಿ ಹೆಚ್ಚಿನ ಆರ್ದ್ರತೆ ಮತ್ತು ತೇವಾಂಶದ ಕಾರಣದಿಂದಾಗಿ,ಬದನೆಯಲ್ಲಿ ಕೀಟಗಳು ಹೆಚ್ಚಾಗಿ ಸೇರಿಕೊಳ್ಳುತ್ತವೆ. ಹಾಗಾಗಿ ಈ ಬದನೆಗಳು ಅನೇಕ ರೀತಿಯ ರೋಗಗಳನ್ನು ಉಂಟು ಮಾಡುವ ಅಪಾಯವೂ ಇರುತ್ತದೆ. 


ಇದನ್ನೂ ಓದಿ : ಹರಳಿನಂತೆ ಕೀಲುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಅನ್ನು ಕರಗಿಸುವುದು ಈ ಎಲೆ ! ಸ್ಟೋನ್ ಅನ್ನು ಕೂಡಾ ಕಿಡ್ನಿಯಿಂದ ಹೊರ ತಳ್ಳುವುದು !


ಬೇರು ತರಕಾರಿಗಳು : 
ಬೇರು ತರಕಾರಿಗಳಾದ ಕ್ಯಾರೆಟ್,ಮೂಲಂಗಿ ಮತ್ತು  ಕೋಸುಗಡ್ಡೆಯನ್ನು ಮಳೆಗಾಲದಲ್ಲಿ ಸೇವಿಸಬಾರದು.ತೇವಾಂಶದ ಕಾರಣದಿಂದಾಗಿ, ಈ ತರಕಾರಿಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಬೆಳೆಯುವ ಸಾಧ್ಯತೆಯಿದೆ.


ಒಂದು ವೇಳೆ ಮಳೆಗಾಲದಲ್ಲಿ ಈ ತರಕಾರಿಗಳನ್ನು ತಿನ್ನಲೇ ಬೇಕು ಎನ್ನುವ ಸ್ಥಿತಿ ಬಂದಾಗ ಅವುಗಳನ್ನು ಚೆನ್ನಾಗಿ ತೊಳೆದ ನಂತರವೇ ಅವುಗಳನ್ನು ತಿನ್ನಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.