ಬೆಂಗಳೂರು : Beetroot Benefits In Summer : ಬೇಸಿಗೆ ಕಾಲ (Summer) ಪ್ರಾರಂಭವಾಗಿದೆ. ಬಿಸಿಲ ಧಗೆ ಏರುತ್ತಲೇ ಇದೆ. ಬೇಸಿಗೆಯಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು (Health Problem) ಎದುರಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ ಡಿ ಹೈಡ್ರೇಶನ್. ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗದಂತೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಬೇಕಾದರೆ ಬೀಟ್ರೂಟ್ ಸಹಕಾರಿ. ಬೇಸಿಗೆಯಲ್ಲಿ ಬೀಟ್ರೂಟ್ (Beetroot) ಸೇವಿಸುವುದರಿಂದ ಸ್ಕಿನ್ ಡ್ಯಾಮೇಜ್ ಅನ್ನು ಸರಿಪಡಿಸುತ್ತದೆ. ಅಲ್ಲದೆ, ದೇಹದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಇದು ಸುಧಾರಿಸುತ್ತದೆ. 


COMMERCIAL BREAK
SCROLL TO CONTINUE READING

ರಕ್ತಹೀನತೆ- ರಕ್ತಹೀನತೆಯಿಂದ (anemia) ಬಳಲುತ್ತಿರುವವರಿಗೆ ಬೀಟ್ರೂಟ್ ವರದಾನವಾಗಿ ಪರಿಣಮಿಸಲಿದೆ. ಬೀಟ್ರೂಟ್  (Beetroot) ಜೊತೆಗೆ ಅದರ ಎಲೆ ಕೂಡಾ ರಕ್ತಹೀನತೆಗೆ ರಾಮಬಾಣ. 


ಇದನ್ನೂ ಓದಿ : Fenugreek Seed Water: ನಿತ್ಯ ಖಾಲಿ ಹೊಟ್ಟೆಯಲ್ಲಿ ಮೆಂತ್ಯದ ನೀರು ಸೇವಿಸಿ, ಈ ರೋಗಗಳಿಂದ ದೂರವಿರಿ  


ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ : ಬೀಟ್ರೂಟ್ ಕ್ಯಾನ್ಸರ್ (Cancer) ಅಪಾಯವನ್ನು ಕಡಿಮೆ ಮಾಡುತ್ತದೆ. ಬೀಟ್ರೂಟ್ ಕ್ಯಾನ್ಸರ್ ಗೆ  ಕಾರಣವಾಗುವ ಕೋಶಗಳನ್ನು ನಾಶಪಡಿಸುತ್ತದೆ. ಬೀಟ್ರೂಟ್ ತಿನ್ನುವುದರಿಂದ ಪ್ಫ್ರೋಸ್ಟೇಟ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಅಪಾಯವೂ ಕಡಿಮೆಯಾಗುತ್ತದೆ. 


ಚರ್ಮದ ಆರೋಗ್ಯಕ್ಕೆ ಸಹಕಾರಿ : ಬೀಟ್‌ರೂಟ್‌ನಲ್ಲಿರುವ ಅಂಟಿ ಆಕ್ಸಿಡೆಂಟ್  ಚರ್ಮವನ್ನು (Skin) ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಚರ್ಮದ ಸುಕ್ಕುಗಳನ್ನು (wrinkles) ತೆಗೆದು ಹಾಕಲು ಸಹ ಸಹಾಯ ಮಾಡುತ್ತದೆ. 


ಇದನ್ನೂ ಓದಿ :  ಪುರುಷರು ಪ್ರತಿ ದಿನ ಬೆಳಿಗ್ಗೆ ಮೊಟ್ಟೆ ಸೇವಿಸಿದರೆ ಸಿಗಲಿದೆ ಇಷ್ಟೊಂದು ಪ್ರಯೋಜನ


ಮೂಳೆಗಳನ್ನು ಸದೃಢವಾಗಿಸುತ್ತದೆ :  ಬೀಟ್‌ರೂಟ್‌ನಲ್ಲಿ ಕ್ಯಾಲ್ಸಿಯಂ (Calcium) ಪ್ರಮಾಣ ಹೇರಳವಾಗಿರುತ್ತದೆ. ಮೂಳೆಗಳು ಸದೃಢಗೊಳ್ಳಲು  ಕ್ಯಾಲ್ಸಿಯಂ ಅಗತ್ಯ. ಈ ಹಿನ್ನೆಲೆಯಲ್ಲಿ ಬೀಟ್‌ರೂಟ್‌ ಸೇವಿಸಿದರೆ ಮೂಳೆಗಳು ಮತ್ತು ಹಲ್ಲುಗಳು ಬಲಗೊಳ್ಳುತ್ತವೆ.


ದಟ್ಟವಾದ ಕೂದಲಿಗೆ : ಬೀಟ್‌ರೂಟ್‌ನಲ್ಲಿ ಫಾಸ್ಫೋರಸ್  ಪ್ರಮಾಣವು ಅಧಿಕವಾಗಿರುತ್ತದೆ. ದಟ್ಟವಾದ ಕೂದಲು (Hair) ಬೆಳೆಯಲು ಇದು ಸಹಕಾರಿಯಾಗುತ್ತದೆ. ಹಾಗಾಗಿ ದಟ್ಟವಾದ ಕೂದಲು  ಹೊಂದಬೇಕಾದರೆ  ಬೀಟ್ರೂಟ್ ತಿನ್ನಿ. 


ಇದನ್ನೂ ಓದಿ :  Pumpkin- ಕುಂಬಳಕಾಯಿಯನ್ನು ಈ ರೀತಿ ಬಳಸಿ ಸುಂದರ ತ್ವಚೆ, ಕೂದಲು ನಿಮ್ಮದಾಗಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.