Health Tipes:ಬೀಟ್ರೂಟ್ಗಳನ್ನು ಸಾಮಾನ್ಯವಾಗಿ  ಹೆಚ್ಚು ಪೌಷ್ಟಿಕವಾಗಿದೆ ಮತ್ತು ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಸಸ್ಯ ಸಂಯುಕ್ತಗಳಿಂದ ಹಾಗೂಅದರಲ್ಲಿ  ಹಲವು ಔಷಧೀಯ ಗುಣಗಳನ್ನು ಹೊಂದಿವೆ ಸಂಶೋಧನೆಯಲ್ಲಿ ಬೀಟ್ರೂಟ್ಗಳನ್ನು ಸೇವಿಸುವುದರಿಂದ  ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಲಾಗಿದೆ.ಇದರಲ್ಲಿ ಫಾಲಟೆ, ವಿಟಮಿನ್ ಸಿ, ಬೀಟೈನ್, ಮ್ಯಾಂಗನೀಸ್, ಪೊಟಾಶಿಯಂ, ಕಬ್ಬಿನಾಂಶ, ಕ್ಯಾಲ್ಸಿಯಂ, ತಾಮ್ರ ಮತ್ತು ವಿಟಮಿನ್ ಬಿ6  ಹೊಂದಿದೆ. 

 ರಕ್ತದೊತ್ತಡವನ್ನು ಕಡಿಮೆ: 
ಈ ತರಕಾರಿಯಲ್ಲಿ ನೈಟ್ರೇಟ್‌ಗಳ ಹೆಚ್ಚಿನ ಸಾಂದ್ರತೆಯ ಕಾರಣದಿಂದಾಗಿ ರಕ್ತದೊತ್ತಡ-ಕಡಿಮೆಗೊಳಿಸುವಲ್ಲಿ ಸಹಕಾರಿಯಾಗುತ್ತದೆ. ಕೆಲವು ಅಧ್ಯಯನಗಳು ಬೀಟ್ರೂಟ್ ರಸವು ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡದ ಮಟ್ಟವನ್ನು  ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.


COMMERCIAL BREAK
SCROLL TO CONTINUE READING

 ಇದನ್ನೂ ಓದಿ:ಒಣದ್ರಾಕ್ಷಿ ಮಹಿಳೆಯರ ಆರೋಗ್ಯಕ್ಕೆ ವರದಾನ; ಪ್ರಯೋಜನ ತಿಳಿದರೆ ಅಚ್ಚರಿ ಪಡುತ್ತೀರಿ!


ಆಮ್ಲಜನಕ ಹೆಚ್ಚಳ 
 ಬೀಟ್ಗೆಡ್ಡೆಗಳನ್ನು ವಾರದಲ್ಲಿ ಎರಡು ಬಾರಿ ಸೇವಿಸುವುದರಿಂದ ಆಮ್ಲಜನಕದ ಬಳಕೆ ಮತ್ತು ಸಹಿಷ್ಣುತೆಯನ್ನು ಸುಧಾರಿಸುವ ಮೂಲಕ ಅಥ್ಲೆಟಿಕ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.


ಉರಿಯೂತ ಸಮಸ್ಯೆ
ಬೀಟ್‌ರೂಟ್‌ನಲ್ಲಿ ಬೀಟೈನ್‌ ಎಂಬ ಪೌಷ್ಟಿಕಾಂಶ  , ಜೀವಕೋಶಗಳು, ಪ್ರೋಟೀನ್‌ಗಳು ಮತ್ತು ಕಿಣ್ವಗಳನ್ನು ರಕ್ಷಿಸುತ್ತದೆ. ಅಲ್ಲದೆ, ಉರಿಯೂತ ಸಮಸ್ಯೆ ವಿರುದ್ಧ ಹೋರಾಡಿ  ಆಂತರಿಕ ಅಂಗಗಳನ್ನು ರಕ್ಷಿಸುತ್ತದೆ. 


 ಗರ್ಭಿಣಿಯರಿಗೆ ಸಹಕಾರಿ 
 ಗರ್ಭಿಣಿಯರು ಹೆಚ್ಚು  ಹೆಚ್ಚು  ಬೀಟ್ ರೂಟ್ ಜೂಸ್‌ ಸೇವಿಸುವುದರಿಂದ ಮಗುವಿನ ಬೆಳವಣಿಗೆ ಸಹಕಾರಿಯಾಗುತ್ತದೆ. ಹಾಗೂ ನಿಶಕ್ತಿಯನ್ನು ದೂರಗೊಳಿಸುತ್ತದೆ. 


ರಕ್ತ ಸಂಚಾರ ಸುಧಾರಣೆ 
ಬೀಟ್ ರೂಟ್ ನಲ್ಲಿ ನೈಸರ್ಗಿಕ ರಾಸಾಯನಿಕವಾಗಿರುವಂತಹ ನೈಟ್ರೇಟ್ ಇದೆ. ಇದು ಪ್ರತಿಕ್ರಿಯೆಗೆ ಒಳಗಾದ ಬಳಿಕ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುವುದು ಮತ್ತು ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. .


ಇದನ್ನೂ ಓದಿ:Health Tips: ಈ 5 ತರಕಾರಿಗಳು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತವೆ


ನಿಶಕ್ತಿ ದೂರಗೊಳಿಸುವುದು
ಪ್ರತಿನಿತ್ಯವೂ ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ದೇಹದ ಆಯಾಸವನ್ನು ದೂರ ಗೊಳಿಸುತ್ತದೆ.ಮತ್ತು ಇತರ ದೈಹಿಕ ಚಟುವಟಿಕೆ ವೇಳೆ ಆಮ್ಲಜನಕದ ಉಪಯೋಗವನ್ನು ತಗ್ಗಿಸುವ ಪರಿಣಾಮವಾಗಿ ದಣಿವು ಕಡಿಮೆ ಆಗುವುದು. ಪ್ರತಿನಿತ್ಯವೂ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದು ದೈನಂದಿನ ಕಾರ್ಯಕ್ಕೆ ಶಕ್ತಿ ನೀಡುವುದು ಮತ್ತು ದೀರ್ಘಕಾಲ ದೈಹಿಕ ಚಟುವಟಿಕೆಯನ್ನು ದಣಿವಿಲ್ಲದೆ ಮಾಡಬಹುದಾಗಿದೆ.


ಕಾಂತಿಯುತ ಚರ್ಮಕ್ಕೆ ಸಹಕಾರಿ 
ಬೀಟ್ ರೂಟ್ ಜ್ಯೂಸ್ ನ್ನು ನಿತ್ಯವೂ ಕುಡಿದರೆ ಅದರಿಂದ ವಯಸ್ಸಾಗುವ ಲಕ್ಷಣಗಳನ್ನು ತಡೆಯಬಹುದಾಗಿದೆ. ಬೀಟ್ ರೂಟ್ ನಲ್ಲಿ ಇರುವಂತಹ ಫಾಲಟೆ ಅಂಶವು ಈ ಕಾರ್ಯಕ್ಕೆ ಕಾರಣವಾಗಿದೆ. ಇದು ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನರ್ಶ್ಚೇತನ ನೀಡುವುದು. ನಿಯಮಿತವಾಗಿ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ಆರೋಗ್ಯಕಾರಿ ಮತ್ತು ಕಾಂತಿಯುತ ಚರ್ಮ ಪಡೆಯಬಹುದು.


ಕ್ಯಾನ್ಸರ್ ಅಪಾಯ ತಗ್ಗಿಸುವುದು
ಇದರಲ್ಲಿ ಇರುವಂತಹ ವಿಟಮಿನ್ ಸಿ ಮತ್ತು ಬೆಟಾಲೈನ್ಸ್ ಅಂಶವು ಕ್ಯಾನ್ಸರ್ ಕಾರಕವಾಗಿರುವಂತಹ ಫ್ರೀ ರ್ಯಾಡಿಕಲ್ ನ್ನು ದೇಹದಿಂದ ಹೊರಗೆ ಹಾಕಲು ನೆರವಾಗುವುದು. 


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.