Pre-diabetes Symptoms : ಮಧುಮೇಹ ಎನ್ನುವುದು  ಸಾಮಾನ್ಯ ಕಾಯಿಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಧುಮೇಹಕ್ಕೂ ಮುಂಚಿನ ಹಂತವನ್ನು ಪ್ರಿ-ಡಯಾಬಿಟಿಸ್ ಎಂದು ಕರೆಯಲಾಗುತ್ತದೆ.  ಪ್ರಿ-ಡಯಾಬಿಟಿಸ್‌ನ ಲಕ್ಷಣಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಿದರೆ, ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. 


COMMERCIAL BREAK
SCROLL TO CONTINUE READING

ಪ್ರೀ-ಡಯಾಬಿಟಿಸ್  ಎಂದರೆ ಏನು ? :
ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಸಾಮಾನ್ಯ ಮಟ್ಟದಿಂದ ಹೆಚ್ಚಾದಾಗ ಅದು ಮಧುಮೇಹದ ಮಟ್ಟವನ್ನು ತಲುಪುತ್ತದೆ. ಸಕ್ಕರೆಯ ಮಟ್ಟವು ಪ್ರೀ-ಡಯಾಬಿಟಿಸ್ ಹಂತವನ್ನು ತಲುಪಿದಾಗ, ದೇಹದಲ್ಲಿ ಕೆಲವೊಂದು ಸಾಮಾನ್ಯ ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳು ಸಾಮಾನ್ಯವಾಗಿರುವುದರಿಂದ ಯಾರೂ ಕೂಡಾ  ಈ ಬದಲಾವಣೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.   
ಇದನ್ನೂ ಓದಿ : Weight Loss Tips: ಈ ಪುಟ್ಟ ತರಕಾರಿಯಿಂದ ಕೇವಲ 15 ದಿನಗಳಲ್ಲಿ ಕರಗುತ್ತದೆ ಬೊಜ್ಜು!


ಪ್ರೀ-ಡಯಾಬಿಟಿಸ್‌ನ ಲಕ್ಷಣಗಳು : 
ಪ್ರಿ-ಡಯಾಬಿಟಿಸ್‌ನ ಲಕ್ಷಣಗಳು ಸಾಕಷ್ಟು ಸಾಮಾನ್ಯವಾಗಿರುತ್ತದೆ. ಮಧುಮೇಹ ಪೂರ್ವದಲ್ಲಿ, ಅಧಿಕ ರಕ್ತದೊತ್ತಡ, ತಲೆತಿರುಗುವುದು, ವಾಂತಿ, ಬೆವರುವುದು, ಪಾದಗಳು ಮರಗಟ್ಟುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.  ಇದಲ್ಲದೆ, ಮಧುಮೇಹ ಪೂರ್ವ ಹಂತದಲ್ಲಿ, ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ತೂಕವನ್ನು ಕಾಪಾಡಿಕೊಳ್ಳದಿದ್ದರೆ ಅದು ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ, ಹೃದಯಾಘಾತ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು.


ಪ್ರಿ-ಡಯಾಬಿಟಿಸ್‌ನ ಲಕ್ಷಣಗಳನ್ನು ಹೇಗೆ ಕಡಿಮೆ ಮಾಡುವುದು ? :
ಪೂರ್ವ- ಮಧುಮೇಹ ಹಂತದಿಂದ ಮಧುಮೇಹಕ್ಕೆ ತಲುಪುವುದನ್ನು ತಪ್ಪಿಸಬೇಕಾದರೆ, ಪ್ರತಿ ದಿನ ವ್ಯಾಯಾಮ ಮಾಡಬೇಕು. ಇದಲ್ಲದೆ, ಪ್ರತಿದಿನ ಕನಿಷ್ಠ 30 ನಿಮಿಷಗಳ ವಾಕಿಂಗ್ ಮಾಡಬೇಕು. ಹೀಗೆ ಮಾಡುವುದರಿಂದ ದೇಹ ತೂಕವನ್ನು ಕಾಪಾಡಿಕೊಳ್ಳಬಹುದು. ಆಹಾರದಲ್ಲಿ ಕ್ಯಾರೆಟ್, ಎಲೆಕೋಸು, ಲೆಟಿಸ್,  ಬೆರಿ ಹಣ್ಣುಗಳು ಸೇರಿದಂತೆ ಹೆಚ್ಚಿನ ಫೈಬರ್ ಆಹಾರಗಳನ್ನು ಸೇರಿಸಿಕೊಳ್ಳಬೇಕು.


ಇದನ್ನೂ ಓದಿ : ರಕ್ತಹೀನತೆಯಿಂದ ಮಲಬದ್ಧತೆವರೆಗೆ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಅಲೋವೆರಾ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.