ಜಿಮ್ಗೆ ಹೋಗದೆ Belly Fat ಕರಗಿಸಬಹುದು : ಅದಕ್ಕೆ ಇಲ್ಲಿವೆ ಸಿಂಪಲ್ ಟಿಪ್ಸ್
ಈ ನಿರ್ದಿಷ್ಟ ಹಣ್ಣಿನ ಸೇವನೆಯು ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಇತ್ತೀಚೆಗೆ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಅಂದರೆ, ಈಗ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರಿಳಿಸುವ ಅಗತ್ಯವಿಲ್ಲ, ಆದರೂ ನೀವು ವಾರಕ್ಕೆ 5 ದಿನ 30 ನಿಮಿಷ ವಾಕ್ ಮಾಡಿದ್ರೆ ಸಾಕು.
Blackcurrant Fruit for Burning Belly Fat : ಹೊಟ್ಟೆ ಅಥವಾ ದೇಹದ ಇತರ ಭಾಗಗಳಲ್ಲಿ ಸಂಗ್ರಹವಾಗಿರುವ ಕೊಬ್ಬು ನಿಮ್ಮ ದೇಹದ್ಫಾ ಆಕಾರವನ್ನೇ ಬದಲಿಸುತ್ತದೆ. ಅಲ್ಲದೆ, ಇದು ಮಧುಮೇಹ ಅಥವಾ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನೂ ಕಡಿಮೆ ಮಾಡುವುದು ಸುಲಭವಲ್ಲ, ಇದಕ್ಕಾಗಿ ಹಲವಾರು ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸಬೇಕಾಗುತ್ತದೆ.
ಸಂಶೋಧನೆ ಮೂಲಕ ಮಾಹಿತಿ ಬಹಿರಂಗ
ಈ ನಿರ್ದಿಷ್ಟ ಹಣ್ಣಿನ ಸೇವನೆಯು ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಇತ್ತೀಚೆಗೆ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಅಂದರೆ, ಈಗ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರಿಳಿಸುವ ಅಗತ್ಯವಿಲ್ಲ, ಆದರೂ ನೀವು ವಾರಕ್ಕೆ 5 ದಿನ 30 ನಿಮಿಷ ವಾಕ್ ಮಾಡಿದ್ರೆ ಸಾಕು.
ಇದನ್ನೂ ಓದಿ : Mens Health Tips : ಪುರುಷರೆ ನಿಮ್ಮ ಆರೋಗ್ಯಕ್ಕೆ ಸೇವಿಸಬೇಕು ಈ ತರಕಾರಿ ಬೀಜಗಳನ್ನು!
ಇಂಗ್ಲೆಂಡಿನ ಚಿಚೆಸ್ಟರ್ ವಿಶ್ವವಿದ್ಯಾನಿಲಯ(University of Chichester)ದ ವಿಜ್ಞಾನಿಗಳು ಹೊಟ್ಟೆಯ ಕೊಬ್ಬಿಗೆ ಸಂಬಂಧಿಸಿದ ಈ ಸಂಶೋಧನೆಯನ್ನು ಮಾಡಿದೆ, ಇದರಲ್ಲಿ ಮಹಿಳೆಯರು ಪ್ರತಿದಿನ ಅರ್ಧ ಗಂಟೆ ವೇಗವಾಗಿ ವಾಕ್ ಮಾಡುವವರು ಭಾಗವಹಿಸಿದ್ದರು. ಅವರಿಗೆ 600 ಮಿಗ್ರಾಂ ನ್ಯೂಜಿಲೆಂಡ್ ಕಪ್ಪು ನೇರಳೆ ಜ್ಯೂಸ್ (CurraNZ) ನೀಡಲಾಯಿತು. ಇದು ಹೆಚ್ಚಿನ ಆಂಥೋಸಯಾನಿನ್ ಮಟ್ಟವನ್ನು ಹೊಂದಿರುವ ಸೂಪರ್‌ಫುಡ್ ಎಂದು ಪರಿಗಣಿಸಲಾಗಿದೆ, ಇದು ಹಣ್ಣುಗಳು ಮತ್ತು ತರಕಾರಿಗಳಿಗೆ ಅವುಗಳ ಬಣ್ಣವನ್ನು ನೀಡುವ ಪಾಲಿಫಿನಾಲ್‌ಗಳ ಉಪವರ್ಗವಾಗಿದೆ.
ಕಪ್ಪು ನೇರಳೆ ಏಕೆ ಪ್ರಯೋಜನಕಾರಿ?
ಕಪ್ಪು ನೇರಳೆನಲ್ಲಿರುವ ಆಂಥೋಸಯಾನಿನ್ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಜ್ಞಾನಿಗಳ ಪ್ರಕಾರ, ಈ ಪೂರಕದ ಮೂಲಕ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವಲ್ಲಿ 25 ಪ್ರತಿಶತದಷ್ಟು ಯಶಸ್ಸನ್ನು ಸಾಧಿಸಲಾಗಿದೆ. ಅದೇ ಚಟುವಟಿಕೆಗಳ ನಂತರವೂ, ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಕೊಬ್ಬು ಕಡಿತದ ಪ್ರಮಾಣವು ಎರಡು ಪಟ್ಟು ಹೆಚ್ಚು ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.
ಕಪ್ಪು ನೇರಳೆ ಅನ್ನು ಒಣಗಿದ ಮತ್ತು ಬೀಜವಿಲ್ಲದ ಕಪ್ಪು ನೇರಳೆಯಿಂದ ತಯಾರಿಸಲಾಗುತ್ತದೆ, ಇದನ್ನು ಕಪ್ಪು ಕೊರಿಂತ್ ಎಂದು ಕರೆಯಲಾಗುತ್ತದೆ. ಇದರ ರುಚಿ ಸಿಹಿ ಮತ್ತು ಮಸಾಲೆ ಎರಡೂ ಆಗಿರಬಹುದು. ಈ ಹಣ್ಣಿನ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳೂ ದೂರವಾಗುತ್ತವೆ.
ಇದನ್ನೂ ಓದಿ : Pomegranate For Diabetes : ಮಧುಮೇಹಿಗಳು 'ದಾಳಿಂಬೆ ಹಣ್ಣು' ತಿನ್ನುವುದರಿಂದ ಏನಾಗುತ್ತೆ? ಇಲ್ಲಿದೆ ನೋಡಿ
ಚಿಚೆಸ್ಟರ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮಾರ್ಕ್ ವಿಲಿಯಮ್ಸ್, 'ನಾವು ಇದನ್ನು ಗಂಭೀರವಾಗಿ ಪರಿಗಣಿಸಬಹುದು, ಕಪ್ಪು ನೇರಳೆ ಅನ್ನು ಕಟ್ಟುನಿಟ್ಟಾದ ಆಹಾರ ಮತ್ತು ವ್ಯಾಯಾಮದೊಂದಿಗೆ ಸೇವಿಸಿದರೆ, ತೂಕ ನಿರ್ವಹಣೆಯ ವಿಷಯದಲ್ಲಿ ಇದು ಅತ್ಯುತ್ತಮ ಪೂರಕವಾಗಿದೆ ಎಂದು ಸಾಬೀತುಪಡಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.