ಈ ನಾಲ್ಕು ಆರೋಗ್ಯ ಸಮಸ್ಯೆಗಳನ್ನು ಬೇರಿನಿಂದಲೇ ನಿರ್ನಾಮ ಮಾಡುತ್ತದೆ ಬೀಟ್ ರೂಟ್!ಈ ಸಮಯದಲ್ಲಿ ಹೀಗೆ ಸೇವಿಸಿ
Beetroot Benefits : ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಬೀಟ್ ರೂಟ್ ಸೇವಿಸಿದರೆ ಕೆಲವು ರೋಗಗಳನ್ನು ಬುದದಿಂದಲೇ ನಿರ್ನಾಮ ಮಾಡಬಹುದು.
ಬೆಂಗಳೂರು : ಬೀಟ್ರೂಟ್ ನೆಲದಡಿಯಲ್ಲಿ ಬೆಳೆಯುವ ತರಕಾರಿಯಾಗಿದೆ.ಅಂದರೆ ಇದು ಗಡ್ಡೆ ತರಕಾರಿ.ಇದನ್ನು ಪಲ್ಯ, ಸಾಂಬಾರ್, ಸಲಾಡ್ ರೂಪದಲ್ಲಿ ಬಳಸಲಾಗುತ್ತದೆ.ಆದರೂ ಇದರ ಜ್ಯೂಸ್ ಅನೇಕರಿಗೆ ಇಷ್ಟವಾಗುತ್ತದೆ. ಇದು ಪೋಷಕಾಂಶಗಳ ಆಗರವಾಗಿದೆ.ಅಲ್ಲದೆ ಇದರಲ್ಲಿರುವ ಕಬ್ಬಿಣದ ಅಂಶ ಕೂಡಾ ಅಧಿಕವಾಗಿದೆ.ಇದರಲ್ಲಿ ಆಹಾರದ ಫೈಬರ್,ನೈಸರ್ಗಿಕ ಸಕ್ಕರೆ,ಮೆಗ್ನೀಸಿಯಮ್, ಸೋಡಿಯಂ ಕೂಡಾ ಅಧಿಕವಾಗಿದೆ.ಪೊಟ್ಯಾಸಿಯಮ್ ಕೂಡಾ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ.ಇದು ನಮ್ಮ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ.ಬೀಟ್ರೂಟ್ ಅನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ,ಅದರ ಪರಿಣಾಮವು ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.
ಖಾಲಿ ಹೊಟ್ಟೆಯಲ್ಲಿ ಬೀಟ್ರೂಟ್ ತಿನ್ನುವ ಪ್ರಯೋಜನಗಳು :
1.ಮೂತ್ರದ ತೊಂದರೆಗಳು :
ಭಾರತದಲ್ಲಿ ಅನೇಕ ಜನರು ಮೂತ್ರದ ಸೋಂಕಿನ ಸಮಸ್ಯೆಯನ್ನು ಎದುರಿಸುತ್ತಾರೆ. ಇದು ಮುಕ್ತವಾಗಿ ಮೂತ್ರ ವಿಸರ್ಜಿಸಲು ಅಸಮರ್ಥತೆ, ಮೂತ್ರದಲ್ಲಿ ಸುಡುವ ಸಂವೇದನೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.ಇದನ್ನು ತಪ್ಪಿಸಲು,ಬೆಳಿಗ್ಗೆ ಬೀಟ್ರೂಟ್ ಜ್ಯೂಸ್ ಕುಡಿಯಬೇಕು.ಇದು ಸಾಕಷ್ಟು ಪರಿಹಾರವನ್ನು ನೀಡುತ್ತದೆ.
ಇದನ್ನೂ ಓದಿ : Basil seeds benefits: ಕಾಮಕಸ್ತೂರಿ ಬೀಜಗಳ ಸೇವನೆಯಿಂದ ಇಷ್ಟೊಂದು ಆರೋಗ್ಯ ಲಾಭಗಳಿವೆ
2.ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ :
ನಮ್ಮ ದೇಹ 70 ಶೇ.ದಷ್ಟು ನೀರಿನಿಂದ ಕೂಡಿದೆ.ಹಾಗಾಗಿ ನಮ್ಮ ದೇಹದಲ್ಲಿ ನೀರಿನ ಅಂಶ ಕೊರತೆಯಾಗಬಾರದು.ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೆ ಎಂದಾದರೆ ಖಾಲಿ ಹೊಟ್ಟೆಯಲ್ಲಿ ಬೀಟ್ ರೂಟ್ ತಿನ್ನಿ.
3.ತೂಕ ಇಳಿಕೆಗೆ ಸಹಕಾರಿ :
ಹೆಚ್ಚುತ್ತಿರುವ ತೂಕ, ಹೊಟ್ಟೆ ಮತ್ತು ಸೊಂಟದ ಕೊಬ್ಬಿನಿಂದ ತೊಂದರೆಗೊಳಗಾದವರು ಬೆಳಿಗ್ಗೆ ಬೀಟ್‌ರೂಟ್ ಅನ್ನು ತಿನ್ನಬೇಕು.ಏಕೆಂದರೆ ಇದರಲ್ಲಿ ಸಾಕಷ್ಟು ಫೈಬರ್ ಅಂಶವಿದೆ.ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಇದನ್ನೂ ಓದಿ : ಈ ಹಣ್ಣು ತಿಂದರೆ ಸಾಕು ಬ್ಲಡ್ ಶುಗರ್‌ನ್ನ ಕ್ಷಣಾರ್ಧದಲ್ಲಿ ಕಂಟ್ರೋಲ್ ಗೆ ಬರುತ್ತೆ!
4.ಪೋಷಕಾಂಶಗಳ ಹೀರಿಕೊಳ್ಳುವಿಕೆ :
ಬೀಟ್ರೂಟ್ ಸ್ವತಃ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಹೆಚ್ಚಿನ ಆರೋಗ್ಯ ತಜ್ಞರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಲು ಶಿಫಾರಸು ಮಾಡುತ್ತಾರೆ.ಏಕೆಂದರೆ ಹಾಗೆ ಮಾಡುವುದರಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆ ಹೆಚ್ಚಾಗುತ್ತದೆ. ವಿಶೇಷವಾಗಿ ಜೀವಸತ್ವಗಳು ಮತ್ತು ಖನಿಜಗಳ ಹೀರಿಕೊಳ್ಳುವಿಕೆಯು ಸುಲಭವಾಗಿರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.