ಇಂದು ನಾವು ನಿಮಗಾಗಿ ಒಣ ಶುಂಠಿಯ ಆರೊಗ್ಯ ಪ್ರಯೋಜನಗಳನ್ನು ತಂದಿದ್ದೇವೆ. ಹೌದು, ಶುಂಠಿಯು ಆಯುರ್ವೇದದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ. ಮಲಬದ್ಧತೆಯ ಸಮಸ್ಯೆಯ ಜೊತೆಗೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಶುಂಠಿಯನ್ನು ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಅದ್ಭುತ ಔಷಧವೆಂದು ಪರಿಗಣಿಸಲಾಗಿದೆ. ಆಹಾರ ಸೇವಿಸಿದ ನಂತರ ನಿಮಗೆ ವಾಯು ಸಮಸ್ಯೆ ಇದ್ದರೆ, ಶುಂಠಿ ಮತ್ತು ಹಾಲನ್ನು ಸೇವಿಸುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ.


COMMERCIAL BREAK
SCROLL TO CONTINUE READING

ಒಣ ಶುಂಠಿಯಲ್ಲಿ ಏನು ಕಂಡುಬರುತ್ತದೆ?


ಡಾ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಕಬ್ಬಿಣ, ಫೈಬರ್ ನಂತಹ ಪೋಷಕಾಂಶಗಳು ಒಣ ಶುಂಠಿ(Dry Ginger)ಯಲ್ಲಿ ಹೇರಳವಾಗಿ ಕಂಡುಬರುತ್ತವೆ, ಇದರಿಂದಾಗಿ ದೇಹದ ರಕ್ತ ಪರಿಚಲನೆ ಉತ್ತಮವಾಗಿರುತ್ತದೆ ಮತ್ತು ಆಮ್ಲಜನಕವು ಸರಿಯಾದ ಪ್ರಮಾಣದಲ್ಲಿ ಮೆದುಳಿಗೆ ತಲುಪುತ್ತದೆ. ಒಣ ಶುಂಠಿಯ ಪುಡಿಯನ್ನು ನೀರು ಅಥವಾ ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ.


ಇದನ್ನೂ ಓದಿ : Weight Loss Tips: ರಾತ್ರಿ ಮಲಗುವ ಮುನ್ನ ಈ 3 ವಸ್ತುಗಳನ್ನು ಸೇವಿಸಿ, ತೂಕ ಇಳಿಸಿ


ಒಣ ಶುಂಠಿ ಸೇವಿಸುವುದರಿಂದ ಆಗುವ ಪ್ರಯೋಜನಗಳು 


1.ಒಣ ಶುಂಠಿ ತೂಕವನ್ನು ಕಡಿಮೆ ಮಾಡುತ್ತದೆ


ಒಣ ಶುಂಠಿ ದೇಹದ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ ಮತ್ತು ರಕ್ತ(Blood)ದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಒಣ ಶುಂಠಿ ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ, ಇದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.


2. ಹೊಟ್ಟೆ ನೋವು ನಿವಾರಣೆಗೆ ಒಣ ಶುಂಠಿ


ಒಣ ಶುಂಠಿಯ ಬಳಕೆಯು ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವು(Stomach Problems) ಹಾಗೂ ದೇಹದ ನೋವನ್ನು ನಿವಾರಿಸುತ್ತದೆ. ಇದಲ್ಲದೆ ಒಣ ಶುಂಠಿಯ ಸೇವನೆಯು ಹೊಟ್ಟೆಯನ್ನು ಶುದ್ಧೀಕರಿಸಲು ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : Side Effects Of Salt: ನೀವು ಅವಶ್ಯಕತೆಗಿಂತ ಹೆಚ್ಚು ಉಪ್ಪು ಸೇವಿಸುತ್ತಿರುವಿರಿ ಎನ್ನುತ್ತವೆ ಈ 6 ಸಂಕೇತಗಳು


3. ಜೀರ್ಣ ಶಕ್ತಿ ಬಲವಾಗಲು


ಒಣ ಶುಂಠಿಯ ಪುಡಿ ದೀರ್ಘಕಾಲದ ಅಜೀರ್ಣದಿಂದಾಗಿ ಹೊಟ್ಟೆ ನೋವು ಮತ್ತು ಕಿಬ್ಬೊಟ್ಟೆಯ ಅಸ್ವಸ್ಥತೆಯನ್ನು ನಿವಾರಿಸುತ್ತದೆ. ಒಣ ಶುಂಠಿಯ ಪುಡಿ(Dry Ginger Powder) ಈ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


4. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಒಣ ಶುಂಠಿ


ಶುಂಠಿ(Ginger)ಯು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ಮಟ್ಟದ ಎಲ್ಡಿಎಲ್ ಲಿಪೊಪ್ರೋಟೀನ್ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಒಣ ಶುಂಠಿ ಸೇವಿಸಿದರೆ ನಿಮ್ಮ ಸಮಸ್ಯೆಯಿಂದ ದೂರವಾಗಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ