ಎಲ್ಲಾ ರೀತಿಯ ಒಣ ಹಣ್ಣುಗಳು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಅದರಲ್ಲಿ  ಖರ್ಜೂರ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಖರ್ಜೂರದಲ್ಲಿ ಸಾಕಷ್ಟು   ಪೋಷಕಾಂಶಗಳಿವೆ, ಇದರಲ್ಲಿ ಜೀವಸತ್ವಗಳು, ಪ್ರೋಟೀನ್ ಮತ್ತು ಫೈಬರ್ ಅನ್ನು ಹೊಂದಿವೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಇದು ಅನೇಕ ರೋಗಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.


COMMERCIAL BREAK
SCROLL TO CONTINUE READING

ರೋಗನಿರೋಧಕ ಶಕ್ತಿ(Immunity)ಯನ್ನು ಕೂಡ ಖರ್ಜೂರ ಸುಧಾರಿಸುತ್ತದೆ, ಮಧುಮೇಹ ರೋಗಿಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿವೆ. ಮಧುಮೇಹ ರೋಗಿಗಳಿಗೆ ಬೇಕಾದ ಗ್ಲೂಕೋಸ್ ಮತ್ತು ಫ್ರಕ್ಟೋಸ್‌ ಅನ್ನು ಖರ್ಜೂರ ಸೇವಿಸುವ ಮೂಲಕ ಪಡೆಯಬಹುದು. ಖರ್ಜೂರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ. ಖರ್ಜೂರವು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ತಡೆಯುತ್ತದೆ.


ಇದನ್ನೂ ಓದಿ : ಸ್ಟ್ರಾಂಗ್ ಇಮ್ಯೂನಿಟಿಗಾಗಿ ಗ್ರೀನ್ ಟೀ.! ಕರೋನಾ ಕಾಲಕ್ಕೆ ಸೂಪರ್ ಡ್ರಿಂಕ್


ಖರ್ಜೂರದಿಂದ ಮಲಬದ್ಧತೆ ದೂರು :


ಯಾವಾಗಲೂ ಮಲಬದ್ಧತೆ ಸಮಸ್ಯೆಯಿಂದ ಬಳಲುವವರು ಖರ್ಜೂರ(Dates) ಬಳಕೆಯು ತುಂಬಾ ಪ್ರಯೋಜನಕಾರಿಯಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕೈದು ಖರ್ಜೂರಗಳನ್ನು ತಿನ್ನುವುದರಿಂದ, ಹೊಟ್ಟೆಯ ಕರುಳಿಗೆ ಅಂಟಿಕೊಂಡಿರುವ ಕೊಳೆಯನ್ನು ತೆಗೆಯುತ್ತದೆ. 


ಇದನ್ನೂ ಓದಿ : Immunity Booster: ಇಲಾಚಿ ಹಣ್ಣಿನಲ್ಲಿದೆ ರೋಗನಿರೋಧಕ ಶಕ್ತಿ: ಇಲ್ಲಿದೆ ಅದರ 5 ಪ್ರಯೋಜನಗಳು!


ಖರ್ಜೂರ ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ: 


ರಕ್ತಹೀನತೆಯಿಂದ ಬಳಲುತ್ತಿರುವವರು, ಸತತ 21 ದಿನಗಳ ಕಾಲ ಪ್ರತಿದಿನ ಐದು ಖರ್ಜೂರಗಳನ್ನು ಬೆಳಿಗ್ಗೆ ತಿನ್ನಬೇಕು. ಇದನ್ನು ಮಾಡುವುದರಿಂದ, ರಕ್ತ(Blood)ದಲ್ಲಿನ ಕಬ್ಬಿಣದ ಕೊರತೆಯು ಪೂರ್ಣಗೊಳ್ಳುತ್ತದೆ ಮತ್ತು ಹಿಮೋಗ್ಲೋಬಿನ್ ಸಹ ಬೆಳವಣಿಗೆಗೆ ಸಹಾಯ ಮಾಡುತ್ತದೆ.


ಇದನ್ನೂ ಓದಿ : Remdesivir : ರೆಮ್ಡೆಸಿವಿರ್ ಔಷಧಿಗೆ ಯಾಕಿಷ್ಟು ಬೇಡಿಕೆ? ಇಲ್ಲದೆ ನೋಡಿ


ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ:


ಖರ್ಜೂರ ರಕ್ತದಲ್ಲಿನ ಸಕ್ಕರೆ ಮಟ್ಟ(Sugar Content)ವನ್ನು ನಿಯಂತ್ರಣದಲ್ಲಿಡುತ್ತದೆ. ಖರ್ಜೂರಗಳಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೈಬರ್ ಇರುತ್ತದೆ.


ಇದನ್ನೂ ಓದಿ : Water Side Effects: ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ!


ಕಣ್ಣುಗಳಿಗೆ ಪ್ರಯೋಜನಕಾರಿ ಖರ್ಜೂರ:


ಪ್ರತಿದಿನ ಖರ್ಜೂರಗಳನ್ನು ಸೇವಿಸುವುದು ಕಣ್ಣಿ(Eye)ಗೆ ಒಳ್ಳೆಯದು. ಇದು ಕಣ್ಣುಗಳಿಗೆ ಶಕ್ತಿಯನ್ನು   ಹೆಚ್ಚಿಸುತ್ತದೆ ಏಕೆಂದರೆ ಖರ್ಜೂರವು ವಿಟಮಿನ್ ಎ ಅನ್ನು ಹೊಂದಿರುತ್ತದೆ, ಇದು ಕಣ್ಣುಗಳಿಗೆ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ : Health Tips: ನಿತ್ಯ ರಾತ್ರಿ ಹಾಲಿನೊಂದಿಗೆ ಈ ಹಣ್ಣನ್ನು ಸೇವಿಸಿ, ದೂರವಾಗುತ್ತೆ ಈ ಎಲ್ಲಾ ಸಮಸ್ಯೆ


ಮೂಳೆಗಳನ್ನು ಬಲಪಡಿಸಲು ಖರ್ಜೂರ


ಖರ್ಜೂರವು ರಂಜಕ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ. ಇದು ಮೂಳೆ(Bone)ಗಳಿಗೆ ಪ್ರಯೋಜನಕಾರಿ, ಇದು ಮೂಳೆಗಳಿಗೆ ಶಕ್ತಿಯನ್ನು ನೀಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.