White Rice: ಬಿಳಿ ಅಕ್ಕಿಯ ಅನ್ನ ತಿನ್ನೋದು ಆರೋಗ್ಯಕ್ಕೆ ಉತ್ತಮವೋ? ಹಾನಿಕಾರಕವೋ?
Benefits Of Eating Rice: ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೋಲಿಕ್ ಆಮ್ಲದಂತಹ ಪೋಷಕಾಂಶಗಳು ಬಿಳಿ ಅಕ್ಕಿಯಲ್ಲಿ ಕಂಡುಬರುತ್ತವೆ, ಇದು ರಕ್ತದೊತ್ತಡ ಮತ್ತು ಹೃದ್ರೋಗಕ್ಕೆ ಪ್ರಯೋಜನಕಾರಿಯಾಗಿದೆ.
White Rice Health Benefits: ಹೆಚ್ಚಿನ ಭಾರತೀಯ ಮನೆಗಳಲ್ಲಿ ಅನ್ನವಿಲ್ಲದೆ ಊಟವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಅನೇಕ ದೇಶಗಳಲ್ಲಿ ಅನ್ನವನ್ನು ಊಟದ ಭಾಗವಾಗಿ ಸೇವಿಸುವ ರೂಢಿಯಿದೆ. ಸಾಮಾನ್ಯವಾಗಿ ಬಿಳಿ ಅಕ್ಕಿಯಿಂದ ಅನ್ನ ಮಾಡುತ್ತಾರೆ. ಆದರೆ ಬಿಳಿ ಅಕ್ಕಿಯ ಬಗ್ಗೆ ಜನರು ವಿಭಿನ್ನ ನಂಬಿಕೆಗಳನ್ನು ಹೊಂದಿದ್ದಾರೆ. ಬಿಳಿ ಅಕ್ಕಿ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಮತ್ತು ದೇಹಕ್ಕೆ ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ ಎಂದು ಹಲವರು ನಂಬುತ್ತಾರೆ. ಈ ನಂಬಿಕೆಗಳಿಂದಾಗಿ ಅನೇಕ ಜನರು ಅನ್ನವನ್ನು ತಿನ್ನುವುದಿಲ್ಲ. ಆದರೆ ಬಿಳಿ ಅಕ್ಕಿ ನೀವು ಅಂದುಕೊಂಡಷ್ಟು ಅನಾರೋಗ್ಯಕರವಲ್ಲ ಎಂಬುದು ನಿಮಗೆ ತಿಳಿದಿದೆಯೇ?
ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೋಲಿಕ್ ಆಮ್ಲದಂತಹ ಪೋಷಕಾಂಶಗಳು ಬಿಳಿ ಅಕ್ಕಿಯಲ್ಲಿ ಕಂಡುಬರುತ್ತವೆ. ಇದು ರಕ್ತದೊತ್ತಡ ಮತ್ತು ಹೃದ್ರೋಗ ಇರುವವರಿಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಕೊಬ್ಬು ಮತ್ತು ಸೋಡಿಯಂ ಅಂಶವೂ ಇರುತ್ತದೆ. ನೀವು ಇದನ್ನು ಕೆಲವು ಪೌಷ್ಟಿಕಾಂಶದ ತರಕಾರಿಗಳೊಂದಿಗೆ ಸೇವಿಸಿದರೆ, ಅದು ನಿಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ಇದನ್ನೂ ಓದಿ: ದೀರ್ಘಕಾಲದ ಬೆನ್ನುನೋವಿನ ಸಮಸ್ಯೆಯನ್ನು ಪರಿಹರಿಸಲು ಹೀಗೆ ಮಾಡಿ!
ಬಿಳಿ ಅನ್ನ ತಿನ್ನುವುದರಿಂದ ದೇಹಕ್ಕೆ ಆಗುವ ಲಾಭಗಳು :
ಎನರ್ಜಿ ಬೂಸ್ಟರ್: ಬಿಳಿ ಅಕ್ಕಿಯ ಅನ್ನವನ್ನು ತಿನ್ನುವುದರಿಂದ ದೇಹ ತ್ವರಿತ ಶಕ್ತಿಯನ್ನು ಪಡೆಯುತ್ತದೆ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ ಇರುವುತ್ತದೆ.
ಗ್ಲುಟನ್ ಮುಕ್ತ: ಬಿಳಿ ಅಕ್ಕಿ ಅಂಟು ಮುಕ್ತ ಆಹಾರವಾಗಿದೆ. ಅದಕ್ಕಾಗಿಯೇ ಗ್ಲುಟನ್ ಅಲರ್ಜಿ ಸಮಸ್ಯೆ ಇರುವವರಿಗೆ ಇದು ತುಂಬಾ ಪ್ರಯೋಜನಕಾರಿ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ.! ಆರೋಗ್ಯ ಹಾಳು ಮಾಡಿಕೊಳ್ಳಬೇಡಿ..
ಉತ್ತಮ ಜೀರ್ಣಕ್ರಿಯೆ: ಬಿಳಿ ಅಕ್ಕಿಯ ಅನ್ನವನ್ನು ತಿನ್ನುವುದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ.
ರಕ್ತದೊತ್ತಡ: ಬಿಳಿ ಅಕ್ಕಿಯ ಸೇವನೆಯಿಂದ ರಕ್ತದೊತ್ತಡ ನಿಯಂತ್ರಿಸಬಹುದು. ಬಿಪಿ ರೋಗಿಗಳಿಗೆ ಪ್ರಯೋಜನಕಾರಿ. ಇದನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಯ ಅಪಾಯ ಸಹ ಕಡಿಮೆಯಾಗುವುದು.
ಉತ್ಕರ್ಷಣ ನಿರೋಧಕ: ಆಂಟಿಆಕ್ಸಿಡೆಂಟ್‌ಗಳು ಬಿಳಿ ಅಕ್ಕಿಯಲ್ಲಿ ಹೇರಳವಾಗಿ ಇರುತ್ತವೆ. ಇದು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಸಹಾಯಕ.
ಇದನ್ನೂ ಓದಿ: ಹೊಟ್ಟೆಯ ಭಾಗದಲ್ಲೇ ಸೇರಿಕೊಂಡಿರುವ ಕೊಬ್ಬನ್ನು ಕರಗಿಸಲು ಬಳಸಿ ಈ ಪಾನೀಯ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.