ನವದೆಹಲಿ : How to control blood sugar level : ಶುಗರ್ ಅನ್ನುವುದು ಇಂದಿನ ಸಾಮಾನ್ಯ ಸಮಸ್ಯೆಯಾಗಿದೆ. ನಮ್ಮ ಸುತ್ತಮುತ್ತಲಿನ ಬಹುತೇಕ ಮಂದಿ ಶುಗರ್ ನಿಂದ (Sugar problem) ಬಳಲುತ್ತಿರುತ್ತಾರೆ. ಶುಗರ್ ಇರುವವರಿಗೆ   ಮೆಂತ್ಯ ಎಲೆಗಳು ಬಹಳ ಪ್ರಯೋಜನಕಾರಿಯಾಗಿದೆ. ಚಳಿಗಾಲದಲ್ಲಿ, ಮಧುಮೇಹ ರೋಗಿಗಳು ಮೆಂತ್ಯ ಎಲೆಗಳನ್ನು ಸೇವಿಸಬೇಕು, ಇದರಿಂದಾಗಿ ಸಕ್ಕರೆ ಮಟ್ಟವು (Sugar level) ನಿಯಂತ್ರಣದಲ್ಲಿರುತ್ತದೆ. 


COMMERCIAL BREAK
SCROLL TO CONTINUE READING

ಏನು ಹೇಳುತ್ತಾರೆ ಆಯುರ್ವೇದ ವೈದ್ಯರು :
ದೇಶದ ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿ ಪ್ರಕಾರ, ಮೆಂತ್ಯದ ಎಲೆಗಳು (Fenugreek Leaves )  ಟೈಪ್ 1 ಮತ್ತು ಟೈಪ್ 2 ಮಧುಮೇಹ ಎರಡರಲ್ಲೂ ಬಹಳ ಪ್ರಯೋಜನಕಾರಿಯಾಗಿರುತ್ತದೆ. ಮಧುಮೇಹ ರೋಗಿಗಳ ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಉತ್ಪತ್ತಿಯಾಗುವುದಿಲ್ಲ. ಈ ಕಾರಣದಿಂದಾಗಿ, ಅವರ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು (blood sugar level) ಹೆಚ್ಚಾಗುತ್ತದೆ.  ಈ ಸಮಸ್ಯೆಗೆ ಮೆಂತ್ಯ ಸೇವನೆಯು ಪ್ರಯೋಜನಕಾರಿಯಾಗಿದೆ.  ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 


ಇದನ್ನೂ ಓದಿ : Benefits of Eating Eggs: ಮೊಟ್ಟೆಯಲ್ಲಿ ಎಷ್ಟು ಪ್ರೋಟೀನ್ ಇದೆ ಎಂದು ಅದರ ಬಣ್ಣದಿಂದಲೇ ಪತ್ತೆ ಹಚ್ಚಬಹುದು


ಮೆಂತ್ಯವನ್ನು ಸೇವಿಸುವುದರಿಂದ ಆಗುವ ಇತರ ಪ್ರಯೋಜನಗಳು
1. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ :  
ಕೆಲವು ಅಧ್ಯಯನಗಳ ಪ್ರಕಾರ, ಮೆಂತ್ಯವು ಉತ್ತಮ ಕೊಲೆಸ್ಟ್ರಾಲ್ (HDL) ಅನ್ನು ಹೆಚ್ಚಿಸಲು ಮತ್ತು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಮೆಂತ್ಯ ಎಲೆಗಳು ಯಕೃತ್ತಿನಲ್ಲಿ ಕೊಲೆಸ್ಟ್ರಾಲ್ ರಚನೆಯನ್ನು ತಡೆಯುತ್ತದೆ. 


2. ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಸಹಕಾರಿ :
ಮೆಂತ್ಯದ ಎಲೆಗಳು ಫೈಬರ್ ಜೊತೆಗೆ ಅಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿವೆ. ಇದು ಜೀರ್ಣಕ್ರಿಯೆಯನ್ನು (digestion) ಸುಧಾರಿಸುತ್ತದೆ. ಮೆಂತ್ಯ ಎಲೆಯ ಚಹಾವು ಮಲಬದ್ಧತೆ (Constipation), ಅಜೀರ್ಣ ಮತ್ತು ಹೊಟ್ಟೆ ನೋವಿನ ಸಮಸ್ಯೆಯನ್ನು ನಿವಾರಿಸುತ್ತದೆ. ಇವುಗಳ ಸೇವನೆಯಿಂದ ಅಸಿಡಿಟಿ (acidity) ಸಮಸ್ಯೆಯೂ ದೂರವಾಗುತ್ತದೆ.


ಇದನ್ನೂ ಓದಿ : Cashew Side Effects: ಖಾಲಿ ಹೊಟ್ಟೆಯಲ್ಲಿ ಮರೆತೂ ಗೋಡಂಬಿ ತಿನ್ನಬೇಡಿ


3. ಹೃದ್ರೋಗಿಗಳಿಗೆ ಪ್ರಯೋಜನಕಾರಿ :
ಮೆಂತ್ಯ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಮೆಂತ್ಯ ಎಲೆಗಳು ಗಿಡಮೂಲಿಕೆಗಳಂತೆ ಕಾರ್ಯನಿರ್ವಹಿಸುತ್ತವೆ, ಇದು ಹೃದಯಾಘಾತ (Heart attack) ಮತ್ತು ಪಾರ್ಶ್ವವಾಯು ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. 


4. ಮೆಂತ್ಯವು ತೂಕ ನಷ್ಟಕ್ಕೂ ಸಹಕಾರಿ : 
ತೂಕ ಇಳಿಸಿಕೊಳ್ಳಬೇಕಾದರೆ ಆಹಾರದಲ್ಲಿ ಮೆಂತ್ಯವನ್ನು ಸೇವಿಸಿ. ತೂಕ ಇಳಿಸಿಕೊಳ್ಳಲು (weight loss) ಪ್ರಯತ್ನಿಸುತ್ತಿದ್ದರೆ ಮೆಂತ್ಯಕ್ಕಿಂತ ಉತ್ತಮವಾದ ಆಯ್ಕೆ ಇನ್ನೊಂದಿಲ್ಲ. ಒಂದು ಕಪ್ ಮೆಂತ್ಯ ಎಲೆಗಳು ಕೇವಲ 13 ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇದನ್ನು ಸ್ವಲ್ಪ ತಿಂದರೆ ಹೊಟ್ಟೆ ತುಂಬಿದಂತೆ ಅನಿಸುತ್ತದೆ. ನಂತರ ಬೇಗ ಹಸಿವಾಗುವುದಿಲ್ಲ. ಇದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. 


ಮೆಂತ್ಯ ಎಲೆಗಳನ್ನು ಹೇಗೆ ಸೇವಿಸಬೇಕು?
ಮೆಂತ್ಯ ಎಲೆಗಳನ್ನು ನೇರವಾಗಿ ತೊಳೆದ ನಂತರ ಹಾಗೇ ತಿನ್ನಬಹುದು.
ಇದಲ್ಲದೇ ಆಲೂಗೆಡ್ಡೆ (Potato) ಮೆಂತ್ಯ ಸೊಪ್ಪಿನ ತರಕಾರಿ ಮಾಡಿ ಸೇವಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.