Benefits of Ghee: ತುಪ್ಪದ ತಪ್ಪು ಕಲ್ಪನೆ ಬಿಟ್ಟು ಬಿಡಿ..! ತುಪ್ಪ ತಿಂದರೆ ಏನು ಲಾಭ.? ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು..ತಿಳಿಯಿರಿ
ತುಪ್ಪ ಇಲ್ಲದೆ ಭಾರತೀಯರ ಅಡುಗೆ ಮನೆ ಅಪೂರ್ಣವಾಗಿರುತ್ತದೆ. ಅಡುಗೆ ಮನೆ, ಪೂಜೆ ಇತ್ಯಾದಿ ವಿಷಯದಲ್ಲೂ ತುಪ್ಪಕ್ಕೆ ವಿಶೇಷ ಸ್ಥಾನಮಾನವಿದೆ. ಅದರಲ್ಲೂ ಮನೆಯಲ್ಲಿ ಮಾಡಿದ ತುಪ್ಪದ ಪ್ರಯೋಜನ ತುಸು ಹೆಚ್ಚು.
ಬೆಂಗಳೂರು : ಭಾರತೀಯರ ಅಡುಗೆ ಮನೆಯಲ್ಲಿ ತುಪ್ಪ (Ghee) ಕ್ಕೆ ವಿಶೇಷ ಮಹತ್ವ ವಿದೆ. ತುಪ್ಪ ಇಲ್ಲದೆ ಭಾರತೀಯರ ಅಡುಗೆ ಮನೆ ಅಪೂರ್ಣವಾಗಿರುತ್ತದೆ. ಅಡುಗೆ ಮನೆ, ಪೂಜೆ ಇತ್ಯಾದಿ ವಿಷಯದಲ್ಲೂ ತುಪ್ಪಕ್ಕೆ ವಿಶೇಷ ಸ್ಥಾನಮಾನವಿದೆ. ಅದರಲ್ಲೂ ಮನೆಯಲ್ಲಿ ಮಾಡಿದ ತುಪ್ಪದ ಪ್ರಯೋಜನ ತುಸು ಹೆಚ್ಚು. ದೇಹಾರೋಗ್ಯಕ್ಕೆ (Health benefits of ghee) ತುಪ್ಪ ಯಾಕೆ ಸಹಕಾರಿ? ತುಪ್ಪ ಎಷ್ಟರ ಪ್ರಮಾಣದಲ್ಲಿ ತಿನ್ನಬೇಕು? ಅದರಿಂದ ಲಾಭ ಏನು ? ಇವನ್ನೆಲ್ಲಾ ಇವತ್ತು ತಿಳಿದುಕೊಳ್ಳೋಣ.
ದೇಹಕ್ಕೆ ಎನರ್ಜಿ ನೀಡುವ ತುಪ್ಪ!
ತುಪ್ಪ, (Ghee) ಅದರಲ್ಲೂ ಅಮ್ಮ ಮಾಡಿದ ದೇಸಿ ತುಪ್ಪ ಶಕ್ತಿಯ ಮೂಲ. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲರಿ (Calories), ಫ್ಯಾಟ್, ಸಾಚುರೇಟೆಡ್ ಫ್ಯಾಟ್, ವಿಟಮಿನ್ ಎ(Vitamin), ಡಿ, ಇ, ಮತ್ತು ಕೆ ಸಿಗುತ್ತದೆ. ನಮ್ಮ ಹೃದಯಾರೋಗ್ಯಕ್ಕೆ (Heart), ಹೊಟ್ಟೆಗೆ, ತ್ವಚೆಗೆ ತುಪ್ಪ ತುಂಬಾ ಸಹಕಾರಿ.
ಇದನ್ನೂ ಓದಿ :Red Banana Health Benefits: ಕೆಂಪು ಬಾಳೆಹಣ್ಣಿನ ಆರೋಗ್ಯಕರ ಲಾಭಗಳ ಕುರಿತು ನಿಮಗೆ ತಿಳಿದಿದೆಯೇ?
ಬೊಜ್ಜು ಬೆಳೆಯುವುದಿಲ್ಲ:
ತುಪ್ಪ ನಮ್ಮ ದೇಹದ ಮೆಟಬೊಲಿಸಂನ್ನು (Metabolism) ರಕ್ಷಿಸುತ್ತದೆ. ತುಪ್ಪದಲ್ಲಿರುವ ಸಿಎಲ್ ಎ ಮೆಟಬಾಲಿಸಂನ್ನು ಸಮಪ್ರಮಾಣದಲ್ಲಿಡುತ್ತದೆ. ಹಾಗಾಗಿಬೊಜ್ಜು (Fat) ಬೆಳೆಯುವುದಿಲ್ಲ. ಹಸುವಿನ ತುಪ್ಪದಲ್ಲಿ ಕೊಲೆಸ್ಟ್ರಾಲ್ (Cholestrol) ಇರುವುದಿಲ್ಲ. ಹಾಗಾಗಿ ಬೊಜ್ಜು ಬರಲು ಸಾಧ್ಯವಿಲ್ಲ.
ಬಲಗೊಳ್ಳುತ್ತದೆ ಎಲುಬು:
ತುಪ್ಪದಲ್ಲಿ ವಿಟಮಿನ್ ಕೆ2 ಹೇರಳವಾಗಿ ಸಿಗುತ್ತದೆ. ಮೂಳೆಗಳನ್ನು ಬಲಿಷ್ಠಗೊಳಿಸಲು ವಿಟಮಿನ್ ಕೆ2 ಅತ್ಯಗತ್ಯ. ಹಾಗಾಗಿ ನಿತ್ಯವೂ ತುಪ್ಪ ತಿಂದರೆ ನಮ್ಮ ಮೂಳೆಗಳು ಬಲಗೊಳ್ಳುತ್ತವೆ.
ಇದನ್ನೂ ಓದಿ :ಅತಿಯಾದ Tomato ಸೇವನೆ ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು, ಎಚ್ಚರ!
ಕಣ್ಣಿನ ಆರೋಗ್ಯಕ್ಕೂ ಸಹಕಾರಿ :
ದೇಸಿ ತುಪ್ಪದಲ್ಲಿ ಅಂಟಿಅಕ್ಸಿಡೆಂಟ್ (Antioxidant),, ಅಂಟಿಬ್ಯಾಕ್ಟೀರಿಯಲ್ (Antibacterial) ಮತ್ತು ಮಿಟಮಿನ್ (Vitamin) ಸಾಕಷ್ಟು ಪ್ರಮಾಣದಲ್ಲಿರುತ್ತವೆ. ಇವು ನಮ್ಮ ದೇಹವನ್ನು ಸೋಂಕಿನಿಂದ (Infections) ರಕ್ಷಿಸುತ್ತವೆ. ಈ ಎಲ್ಲಾ ಪದಾರ್ಥಗಳು ದೇಹಾದಲ್ಲಿನ ವಿಷಕಾರಕ ಅಂಶಗಳನ್ನು ಹೊರ ಹಾಕುತ್ತವೆ. ಒಂದು ಚಮಚ ಹಸುವಿನ ತುಪ್ಪಕ್ಕೆ ಅದರ ಕಾಲು ಭಾಗದಷ್ಟು ಕರಿಮೆಣಸಿನ ಪುಡಿ ಮಿಕ್ಸ್ ಮಾಡಿ ರಾತ್ರಿ ಮಲಗುವ ಮುನ್ನಅಥವಾ ಬೆಳಗ್ಗೆ ಎದ್ದ ನಂತರ ತಿಂದರೆ, ದೃಷ್ಟಿಗೆ ತುಂಬಾ ಉಪಕಾರಿ..
ಕೇಶಾರೋಗ್ಯಕ್ಕೆ ಒಳ್ಳೆಯದು..!
ನಿಮ್ಮ ಕೂದಲು ಪೇಲವ ಅಥವಾ ಡ್ಯಾಮೇಜ್ (Damage) ಆಗುತ್ತಿದ್ದರೆ ತುಪ್ಪ ತಿನ್ನಿ. ತುಪ್ಪ ತಲೆಯ ಸ್ಕೇಲ್ಪ್ ನ್ನು ಬಲಗೊಳಿಸುತ್ತದೆ. ತುಪ್ಪದಲ್ಲಿ ಫ್ಯಾಟಿ ಆಸಿಡ್ ಹೇರಳವಾಗಿರುತ್ತದೆ. ಇದು ಕೂದಲನ್ನು ಒಳಗಿನಿಂದಲೇ ಹೈಡ್ರೇಟ್ ಮಾಡುತ್ತದೆ. ತುಪ್ಪ ತಿನ್ನೋದರಿಂದ ನಿಮ್ಮ ಕೂದಲು ಒಣಗಿ ಹೋಗೋದಿಲ್ಲ. ಮಾಶ್ಚುರೈಸ್ಡ್ ಆಗಿರುತ್ತದೆ.
ಇದನ್ನೂ ಓದಿ :ಮಹಿಳೆಯರ ಆರೋಗ್ಯ, ಸೌಂದರ್ಯಕ್ಕೆ ರಾಮಬಾಣ Soybean
ಜೀರ್ಣಕ್ರಿಯೆ ಚೆನ್ನಾಗಿರುತ್ತದೆ:
ಚಳಿಗಾಲದಲ್ಲಿ ಮಲಬದ್ಧತೆ (Constipation)ಸಮಸ್ಯೆ ಹೆಚ್ಚು. ನಿದ್ದೆ ಮಾಡುವ ಮೊದಲು ನೀವು ಒಂದು ಚಮಚ ತುಪ್ಪವನ್ನು ಒಂದು ಕಪ್ ಬೆಚ್ಚಗಿನ ಹಾಲಿನಲ್ಲಿ ಕುಡಿಯಿರಿ. ಇದರಿಂದ ಪಚನ ಕ್ರಿಯೆ ಚೆನ್ನಾಗಿರುತ್ತದೆ.
ಹಾರ್ಮೋನುಗಳ ಸಮತೋಲನ:
ದೇಸಿ ತುಪ್ಪದಲ್ಲಿ ವಿಟಮಿನ್ ಡಿ, ವಿಟಮಿನ್ ಇ, ವಿಟಮಿನ್ ಎ ಮತ್ತು ವಿಟಮಿನ್ ಕೆ 2 ನಂತಹ ಪೋಷಕಾಂಶಗಳಿವೆ, ಇದು ದೇಹದ ಹಾರ್ಮೋನುಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ತುಪ್ಪ ಚೆನ್ನಾಗಿ ತಿನ್ನಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.