Benefits of Green Peas: ಚಳಿಗಾಲ ಬಂತೆಂದರೆ ಮಾರುಕಟ್ಟೆಗಳಲ್ಲಿ ಹಸಿರು ಬಟಾಣಿಗಳು ಬರಲಾರಂಭಿಸುತ್ತವೆ. ಈ ಸಿಹಿ ರುಚಿಯ ಅವರೆಕಾಳುಗಳನ್ನು ಆಹಾರದಲ್ಲಿ ಬೆರೆಸಿದಾಗ, ಆಹಾರದ ರುಚಿಯೂ ಹೆಚ್ಚಾಗುತ್ತದೆ. ಪರಾಠ, ಕರ್ರಿ, ಮಟರ್ ಪುಲಾವ್ ಮುಂತಾದ ಹಲವು ಬಗೆಯ ಖಾದ್ಯಗಳನ್ನು ಬಟಾಣಿಗಳಿಂದ ತಯಾರಿಸಬಹುದು. ಆದರೆ, ಕೆಲವರು ಇವುಗಳನ್ನು ಸಿಪ್ಪೆ ಸುಲಿದು ಹಾಗೆಯೇ ತಿನ್ನಲು ತುಂಬಾ ಇಷ್ಟಪಡುತ್ತಾರೆ. ಆದರೆ ಆಹಾರದ ರುಚಿಯನ್ನು ಹೆಚ್ಚಿಸುವ ಅವರೆಕಾಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದಿದೆಯೇ?

COMMERCIAL BREAK
SCROLL TO CONTINUE READING

ಪೌಷ್ಟಿಕ ತಜ್ಞರೊಬ್ಬರು ತಮ್ಮ ಇತ್ತೀಚಿನ Instagram ಪೋಸ್ಟ್‌ನಲ್ಲಿ ಹಸಿರು ಬಟಾಣಿಗಳ ಪ್ರಯೋಜನಗಳ ಬಗ್ಗೆ ಹೇಳಿದ್ದಾರೆ. ಈ ಕುರಿತು ತಜ್ಞರು ಹೇಳಿದ್ದೇನು ತಿಳಿದುಕೊಳ್ಳೋಣ ಬನ್ನಿ,


ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ಸ್ಥಿರಗೊಳಿಸುತ್ತದೆ 
ಬಟಾಣಿಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಅನ್ನು ಹೊಂದಿರುತ್ತವೆ, ಇವು ಊಟದ ನಂತರ ನಿಮ್ಮ ರಕ್ತದಲ್ಲಿನ ಸಕ್ಕರೆ ಎಷ್ಟು ವೇಗವಾಗಿ ಏರುತ್ತದೆ ಎಂಬುದರ ಅಳತೆಯಾಗಿದೆ. ಅಷ್ಟೇ ಅಲ್ಲ, ಹಸಿರು ಬಟಾಣಿಯಲ್ಲಿ ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ.


ತ್ವಚೆಯ ಆರೋಗ್ಯಕ್ಕೆ ಉತ್ತಮ
ಬಟಾಣಿಯಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ ಮತ್ತು ಫೋಲೇಟ್ (ಫೋಲಿಕ್ ಆಸಿಡ್) ಸೇರಿದಂತೆ ಚರ್ಮ ಸ್ನೇಹಿ ಪೋಷಕಾಂಶಗಳಿಂದ ಬಟಾಣಿ ಸಮೃದ್ಧವಾಗಿದೆ. ಈ ಪೋಷಕಾಂಶಗಳು ಫ್ರೀ ರಾಡಿಕಲ್ಗಳಿಂದ ಉಂಟಾಗುವ ಉರಿಯೂತ ಮತ್ತು ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಪ್ರೋಟೀನ್‌ನ ಅತ್ಯುತ್ತಮ ಮೂಲ
ಹಸಿರು ಬಟಾಣಿ ಪ್ರೋಟೀನ್‌ನ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ, ಇದು ದೇಹದಲ್ಲಿ ಫೈಬರ್‌ ಹೆಚ್ಚಿನ ಪ್ರಮಾಣದಲ್ಲಿರಲು ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಪ್ರಾಣಿ ಮೂಲದ ಪ್ರೋಟೀನ್‌ಗಳನ್ನು ಸೇವಿಸದವರಿಗೆ, ಅವರ ಪ್ರೋಟೀನ್ ಅಗತ್ಯಗಳನ್ನು ಪೂರೈಸಲು ಅವರೆಕಾಳು ಉತ್ತಮ ಒಂದು ಆಯ್ಕೆಯಾಗಿದೆ.


ಇದನ್ನೂ ಓದಿ-Peanuts Benefits : ಉತ್ತಮ ಆರೋಗ್ಯಕ್ಕೆ ತಪ್ಪದೆ ಸೇವಿಸಿ ಟೈಂ ಪಾಸ್ ಕಡಲೆಕಾಯಿ..!


ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
ಹಸಿರು ಬಟಾಣಿಗಳಲ್ಲಿ ನಿಯಾಸಿನ್ ಸಮೃದ್ಧವಾಗಿದೆ, ಇದು ಟ್ರೈಗ್ಲಿಸರೈಡ್‌ಗಳು ಮತ್ತು ವಿಎಲ್‌ಡಿಎಲ್ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ-Raisins Benefits : ನೆನೆಸಿದ ಒಣದ್ರಾಕ್ಷಿ ಸೇವಿಸಿ ಹೊಟ್ಟೆ ನೋವು, ಅಸಿಡಿಟಿ ಸಮಸ್ಯೆಗೆ ಹೇಳಿ ಗುಡ್ ಬೈ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.