ನೀವೂ ಐಸ್ ಕ್ರೀಂ ಪ್ರಿಯರೇ? ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೆ ಓದಿ
ಪ್ರತಿದಿನ ಒಂದು ಕಪ್ Ice-Cream ತಿನ್ನುವುದರಿಂದ ದೇಹಕ್ಕೆ ಪ್ರಯೋಜನ!
ನವದೆಹಲಿ: ನೀವೂ ಐಸ್ ಕ್ರೀಂ ಪ್ರಿಯರೇ? ಅತಿ ಹೆಚ್ಚು ಐಸ್ ಕ್ರೀಂ ಸೇವಿಸುತ್ತೀರೆ? ಐಸ್ ಕ್ರೀಂ ಸೇವನೆ ಆರೋಗ್ಯಕ್ಕೆ ಲಾಭದಾಯಕವೆಂದು ಕೇಳಿದ್ದೀರಾ? ಹೌದು, ಕೆಲವು ಸಂದರ್ಭಗಳಲ್ಲಿ ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ವಾಸ್ತವವಾಗಿ, ವಿವಿಧ ಸ್ವಾದಗಳಲ್ಲಿ ಬರುವ ಐಸ್ ಕ್ರೀಂ ನಿಮ್ಮ ಆರೋಗ್ಯಕ್ಕೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.
ಐಸ್ ಕ್ರೀಂ ಒಂದು ಡೈರಿ ಉತ್ಪನ್ನವಾದ್ದರಿಂದ ಇದರಲ್ಲಿ ಅನೇಕ ಪೋಷಕಾಂಶಗಳಿರುತ್ತವೆ. ಐಸ್ ಕ್ರೀಂ ಸೇವಿಸುವ ಮೂಲಕ ನಿಮ್ಮ ದೇಹವು ಆರೋಗ್ಯಕರವಾಗುತ್ತದೆ. ಸಾಕಷ್ಟು ವಿಟಮಿನ್ಗಳು ಮತ್ತು ಪ್ರೋಟೀನ್ಗಳು ಸಹ ಇವೆ. ಐಸ್ ಕ್ರೀಂ ಸೇವನೆಯಿಂದಾಗುವ ಲಾಭಗಳ ಬಗ್ಗೆ ತಿಳಿಯಿರಿ...
ಮೂಳೆಗಳು ಬಲಗೊಳ್ಳುತ್ತವೆ:
ಡೈರಿ ಉತ್ಪನ್ನಗಳಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಕಂಡುಬರುತ್ತದೆ. ಕ್ಯಾಲ್ಸಿಯಂ ಸೇವನೆಯಿಂದ ಮೂಳೆಗಳು ಬಲವಾಗಿರುತ್ತವೆ. ದೇಹವನ್ನು ಬಳಲಿಕೆಯಿಂದ ರಕ್ಷಿಸಲು ಕ್ಯಾಲ್ಸಿಯಂ ಅಗತ್ಯವಿದೆ. ದೇಹದಲ್ಲಿ ಶೇ. 99 ರಷ್ಟು ಕ್ಯಾಲ್ಸಿಯಂ ಮಾತ್ರ ಮೂಳೆಗಳಲ್ಲಿ ಕಂಡುಬರುತ್ತವೆ. ಹಾಗಾಗಿ ಹಾಲಿನ ಉತ್ಪನ್ನಗಳ ಸೇವನೆಯು ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಸಮೃದ್ಧವಾಗಿರಿಸುತ್ತದೆ. ಪ್ರತಿದಿನ ಹಾಲಿನಿಂದ ತಯಾರಿಸಿದ ಐಸ್ ಕ್ರೀಮ್ ಸೇವಿಸುವುದರಿಂದ ಆಸ್ಟಿಯೊಪೊರೋಸಿಸ್ (ಮೂಳೆ ತೆಳುವಾದ ಮತ್ತು ದುರ್ಬಲಗೊಳ್ಳುವ) ಅಪಾಯವನ್ನು ಕಡಿಮೆ ಮಾಡುತ್ತದೆ.
ಚರ್ಮಕ್ಕೆ ಪ್ರಯೋಜನಕಾರಿ:
ಹಾಲಿನಿಂದ ತಯಾರಿಸಿದ ಐಸ್ ಕ್ರೀಂ ಪ್ರೋಟೀನ್ನ ಉತ್ತಮ ಮೂಲವನ್ನು ಸಹ ಹೊಂದಿದೆ. ಮೂಳೆಗಳು, ನರಗಳು, ರಕ್ತ ಮತ್ತು ಚರ್ಮದಂತಹ ದೇಹದ ವಿವಿಧ ಭಾಗಗಳಿಗೆ ಪ್ರೋಟೀನ್ ಪ್ರಯೋಜನಕಾರಿಯಾಗಿದೆ. ಪ್ರೋಟೀನ್ ಸೇವನೆ ಮೂಲಕ, ಅಂಗಾಂಶ ಮತ್ತು ಸ್ನಾಯುಗಳು ಬಲವಾಗುವುವು. ಉಗುರುಗಳು ಮತ್ತು ಕೂದಲಿನಂತಹ ದೇಹದ ಕೆಲವು ಭಾಗಗಳಿಗೂ ಸಹ ಪ್ರೋಟೀನ್ ಅಗತ್ಯವಿದೆ. ಐಸ್ ಕ್ರೀಂ ತಿನ್ನುವ ಮೂಲಕ ದೇಹವು ಪ್ರೋಟೀನ್ ಪಡೆಯುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಳ:
ಐಸ್ ಕ್ರೀಂ ನಲ್ಲಿ ವಿಟಮಿನ್ A, B-2 ಮತ್ತು B-12 ಕಂಡುಬಂದಿದೆ. ವಿಟಮಿನ್ ಎ ನಿಮ್ಮ ಚರ್ಮ, ಮೂಳೆಗಳು ಮತ್ತು ರೋಗ ನಿರೋಧಕಗಳ ದಕ್ಷತೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಇದು ಉತ್ತಮ ದೃಷ್ಟಿ ನೀಡುತ್ತದೆ. ವಿಟಮಿನ್ ಬಿ -2 ಮತ್ತು ಬಿ -12 ಸಮತೋಲನ ಚಯಾಪಚಯ ಮತ್ತು ಬಿ -12 ತೂಕ ನಷ್ಟದಲ್ಲಿ ಸಹಾಯಕವಾಗಿವೆ. ನಿಮಗೆ ಹಾಲು ಕುಡಿಯಲು ತೊಂದರೆ ಇದ್ದಲ್ಲಿ ನೀವು ಐಸ್ ಕ್ರೀಮ್ ತಿನ್ನಬಹುದು. ಇದರಿಂದ ನೀವು ವಿಟಮಿನ್ ಕೊರತೆಯನ್ನು ಸರಿದೂಗಿಸಬಹುದು.
ಐಸ್ ಕ್ರೀಂ ನಿಂದ ಉಂಟಾಗುವ ತೊಂದರೆಗಳು:
ಐಸ್ ಕ್ರೀಂ ಸೇವನೆ ನಿಮಗೆ ಪ್ರಯೋಜನವನ್ನು ಮಾತ್ರ ನೀಡುವುದಿಲ್ಲ, ಅದು ನಿಮ್ಮ ದೇಹಕ್ಕೆ ಹಲವು ರೀತಿಯ ತೊಂದರೆಯನ್ನು ಕೂಡಾ ಉಂಟುಮಾಡುತ್ತದೆ. ಐಸ್ ಕ್ರೀಂ ನಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಅಂತಹ ಸಂದರ್ಭದಲ್ಲಿ, ನೀವು ಅದನ್ನು ಹೆಚ್ಚು ಸೇವಿಸಿದರೆ, ಸ್ಥೂಲಕಾಯತೆಯ ಅಪಾಯ ಉಂಟಾಗುತ್ತದೆ.
ಇದಲ್ಲದೆ, ಬೆಣ್ಣೆ ಮತ್ತು ಚಾಕೋಲೇಟ್ನಿಂದ ಮಾಡಿದ ಐಸ್ ಕ್ರೀಂ ನಲ್ಲಿ ಸಹ ಕ್ಯಾಲೋರಿ ಹೆಚ್ಚಾಗಿದೆ, ಇದು ದೇಹಕ್ಕೆ ಹಾನಿಕಾರಕವಾಗಿದೆ. ಹೆಚ್ಚು ಐಸ್ ಕ್ರೀಂ ಸೇವನೆ ತಲೆನೋವು, ಆಹಾರ ವಿಷಕಾರಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅದನ್ನು ತಿನ್ನುವ ಮೊದಲು ಐಸ್ ಕ್ರೀಂನ ಗುಣಮಟ್ಟವನ್ನು ಪರೀಕ್ಷಿಸಲು ಮರೆಯದಿರಿ.
ಅತಿಯಾದರೆ ಅಮೃತವೂ ವಿಷ ಎಂಬಂತೆ, ಯಾವುದನ್ನೇ ಆದರೂ ಹಿತ-ಮಿತವಾಗಿ ಬಳಸಿದರೆ ಮಾತ್ರ ಅದರಿಂದ ಪ್ರಯೋಜನ ಪಡೆಯಬಹುದು.