Benefits of Jeera water For Diabetes:ಮಧುಮೇಹ ರೋಗಿಗಳಿಗೆ ಜೀರಿಗೆ ನೀರು ಒಂದು ವರದಾನವೇ ಇದ್ದಂತೆ. ಜೀರಿಗೆ ನೀರಿನ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಕೇವಲ ಮಧುಮೇಹ ಅಷ್ಟೇ ಅಲ್ಲ ಸ್ಥೂಲಕಾಯ ಸಮಸ್ಯೆ ಇರುವವರಿಗೂ ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿಹೊಟ್ಟೆ ಈ ನೀರನ್ನು ಸೇವಿಸಲು ಸಾಮಾನ್ಯವಾಗಿ ಸಲಹೆ ನೀಡಲಾಗುತ್ತದೆ. ಹಾಗಾದರೆ ಇದನ್ನು ಸೇವಿಸುವುದರಿಂದ ಸಿಗುವ ಇತರ ಪ್ರಯೋಜನಗಳು ಯಾವುವು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ.

COMMERCIAL BREAK
SCROLL TO CONTINUE READING

ಈ ಗುಣಗಳಿಂದ ಜೀರಿಗೆ ಸಮೃದ್ಧವಾಗಿದೆ
ಜೀರಿಗೆಯಲ್ಲಿ ಹಲವು ರೀತಿಯ ಔಷಧೀಯ ಗುಣಗಳಿವೆ. ನಿತ್ಯ ಖಾಲಿ ಹೊಟ್ಟೆ ಜೀರಿಗೆ ನೀರನ್ನು ಸೇವಿಸಲು ಪ್ರಾರಂಭಿಸಿದರೆ, ನಿಮ್ಮನ್ನು ನೀವು ಹಲವು ರೀತಿಯ ರೋಗಗಳಿಂದ ರಕ್ಷಿಸಿಕೊಳ್ಳಬಹುದು. ಜೀರಿಗೆಯಲ್ಲಿ ಹೇರಳ ಪ್ರಮಾಣದ ಫೈಬರ್ ಕಂಡುಬರುತ್ತದೆ. ಅಷ್ಟೇ ಅಲ್ಲ ಇದರಿಂದ ಹಲವು ರೀತಿಯ ಆರೋಗ್ಯಕರ ಲಾಭಗಳು ನಿಮಗೆ ಸಿಗುತ್ತವೆ. 

ಜೀರಿಗೆ ನೀರು ಸೇವನೆಯ ಲಾಭಗಳು
>> ಜೀರಿಗೆ ನೀರು ಉದರ ಸಂಬಂಧಿ ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ, ಜೀರಿಗೆ ನೀರನ್ನು ಅಸಿಡಿಟಿ, ಗ್ಯಾಸ್, ಅಜೀರ್ಣ ಮತ್ತು ಹೊಟ್ಟೆ ನೋವಿಗೆ ಒಂದು ರಾಮಬಾಣ ಮನೆಮದ್ದಾಗಿದೆ. ಜೀರಿಗೆ ನೀರು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಇದರಿಂದಾಗಿ ಕರುಳಿನ ಸಮಸ್ಯೆಗಳು ಎದುರಾಗುವುದಿಲ್ಲ.

>> ಮಹಿಳೆಯರಿಗೆ ಇದು ಗರ್ಭಾವಸ್ಥೆಯಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದರೆ, ವೈದ್ಯರನ್ನು ಸಂಪರ್ಕಿಸಿದ ನಂತರವೇ ಗರ್ಭಿಣಿಯರು ಇದನ್ನು ಸೇವಿಸಬೇಕು, ಇದು ನಿಮಗೆ ಹಲವು ಪ್ರಯೋಜನಗಳನ್ನು ನೀಡಲಿದೆ.

>> ಜೀರಿಗೆ ನೀರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಜೀರಿಗೆಯಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್ ಇದೆ, ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

>> ಮಧುಮೇಹಿಗಳಿಗೆ ಜೀರಿಗೆ ನೀರು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ.


ಇದನ್ನೂ ಓದಿ-Jackfruit: ಹಲಸು ತಿಂದ ನಂತರ ಈ ಆಹಾರಗಳನ್ನು ಸೇವಿಸಲೇಬಾರದು

>> ಅಧಿಕ ಬಿಪಿ ಇರುವ ರೋಗಿಗಳೂ ಇದನ್ನು ಸೇವಿಸಬೇಕು. ಇದರಿಂದ ನಿಮಗೆ ಸಾಕಷ್ಟು ಲಾಭ ಸಿಗಲಿದೆ.


ಇದನ್ನೂ ಓದಿ-ದುಬಾರಿ ಪ್ರಾಡಕ್ಟ್ ಬೇಕಿಲ್ಲ, ಮನೆಯಲ್ಲಿರುವ ಈ ಮೂರು ವಸ್ತುಗಳಿಂದಲೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು..!

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.