Benefits of Kasoori Methi: ಈ ಮಹಿಳೆಯರಿಗೆ ಅತ್ಯಂತ ಲಭಕಾರಿ ಕಸೂರಿ ಮೆಂತೆ, ಹಲವು ಕಾಯಿಲೆಗಳಿಗೆ ರಾಮಬಾಣ
Benefits of Kasoori Fenugreek: ಇಂದು ನಾವು ನಿಮಗೆ ಕಸೂರಿ ಮೆಂತೆಯ ಆರೋಗ್ಯಕರ ಲಾಭಗಳ ಕುರಿತು ಹೇಳಲಿದ್ದೇವೆ.
Benefits of Kasoori Fenugreek: ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಕಸೂರಿ ಮೆಂತ್ಯವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕಸೂರಿ ಮೆಂತ್ಯವನ್ನು (How To Eat Kasoori Fenugreek) ಸೇವಿಸುವುದರಿಂದ, ನೀವು ಅನೇಕ ರೋಗಗಳಿಂದ ಸುರಕ್ಷಿತವಾಗಿರಬಹುದು. ಆಯುರ್ವೇದದಲ್ಲಿ ಕಸೂರಿ ಮೆಂತ್ಯದ ಅನೇಕ ಪ್ರಯೋಜನಗಳನ್ನು ಉಲ್ಲೇಖಿಸಲಾಗಿದೆ. ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಕಸೂರಿ ಮೆಂತ್ಯವನ್ನು ನಿಯಮಿತವಾಗಿ ಸೇವಿಸುವುದರಿಂದ (Consumption Of Kasooru Fenugreek) ನೀವು ಅನೇಕ ರೋಗಗಳಿಂದ ದೂರವಿರಬಹುದು ಎನ್ನಲಾಗಿದೆ. ಇದು ಮಹಿಳೆಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಏನಿದು ಕಸೂರಿ ಮೆಂತ್ಯೆ? (What Is Kasoori Fenugreek)
ಕಸೂರಿ ಮೆಂತ್ಯವನ್ನು ಮೆಂತ್ಯದ ಎಲೆಗಳನ್ನು ಒಣಗಿಸಿ ತಯಾರಿಸಲಾಗುತ್ತದೆ ಎಂದು ದೇಶದ ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿ ಹೇಳುತ್ತಾರೆ. ಮೆಂತ್ಯ ಸಸ್ಯವು ಫ್ಯಾಬಾಸೀ (Fabaceae) ಕುಟುಂಬಕ್ಕೆ ಸೇರಿದೆ. ಇದರ ಎಲೆಗಳು ಮತ್ತು ಬೀಜಗಳನ್ನು ಗರಂ ಮಸಾಲೆಯಾಗಿ ಬಳಸಲಾಗುತ್ತದೆ. ರುಚಿಯ ಜೊತೆಗೆ, ಇದು ಅನೇಕ ಔಷಧೀಯ ಗುಣಗಳನ್ನು (Health Tips) ಹೊಂದಿದೆ. ಇದರಲ್ಲಿರುವ ಔಷಧೀಯ ಗುಣಗಳು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಿಸುತ್ತದೆ.
ಕಸೂರಿ ಮೆಂತ್ಯೆಯ ಆರೋಗ್ಯಕರ ಲಾಭಗಳು (Benefits of Kasoori Fenugreek)
1. Infection ನಿಂದ ರಕ್ಷಣೆ ನೀಡುತ್ತದೆ - ಕಸೂರಿ ಮೆಂತ್ಯವು ವಿಟಮಿನ್-ಸಿ ಮತ್ತು ಕಬ್ಬಿಣವನ್ನು ಹೊಂದಿರುತ್ತದೆ, ಇದು ಚರ್ಮವನ್ನು ಸೋಂಕಿನಿಂದ ರಕ್ಷಿಸುತ್ತದೆ. ಇದೇ ವೇಳೆ ಇದು ಆ ಬ್ಯಾಕ್ಟೀರಿಯಾವನ್ನು ಸಹ ನಾಶಪಡಿಸುತ್ತದೆ, ಬ್ಯಾಕ್ಟೀರಿಯಾ ಕಾರಣ ಮೊಡವೆ ಸಮಸ್ಯೆ ಎದುರಾಗುತ್ತದೆ.
2. Anemia ದಲ್ಲಿ ತುಂಬಾ ಲಭಾಕಾರಿ - ರಕ್ತಹೀನತೆಯ ರೋಗವು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಕಸೂರಿ ಮೆಂತ್ಯೆಯನ್ನು (Kasuri Methi) ನೀವು ನಿಮ್ಮ ಆಹಾರದಲ್ಲಿ ಶಾಮೀಳುಗೊಳಿಸಿ. ಮೆಂತ್ಯ ಸೊಪ್ಪನ್ನು (Kasuri Methi Health Benefits) ತಿನ್ನುವುದು ಕೂಡ ರಕ್ತಹೀನತೆಯ ರೋಗದಲ್ಲಿ ಪ್ರಯೋಜನಗಳನ್ನು ನೀಡುತ್ತದೆ.
3. ಹಾಲುಣಿಸುವ ತಾಯಂದಿರರಿಗೆ ಇದು ಲಾಭಕಾರಿ - ಹಾಲುಣಿಸುವ (Brest Feeding Mothers) ಮಹಿಳೆಯರಿಗೆ ಕಸೂರಿ ಮೆಂತ್ಯ ತುಂಬಾ ಪ್ರಯೋಜನಕಾರಿ. ಕಸೂರಿ ಮೆಂತ್ಯದಲ್ಲಿ ಕಂಡುಬರುವ ಒಂದು ರೀತಿಯ ಸಂಯುಕ್ತವು ಹಾಲುಣಿಸುವ ಮಹಿಳೆಯರಲ್ಲಿ ಎದೆ ಹಾಲನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
4. ಹೊಟ್ಟೆಯ ಇನ್ಫೆಕ್ಷನ್ ನಿಂದ ರಕ್ಷಣೆ ನೀಡುತ್ತದೆ - ನೀವು ಹೊಟ್ಟೆಯ ಕಾಯಿಲೆಗಳನ್ನು ತಪ್ಪಿಸಲು ಬಯಸಿದರೆ, ಕಸೂರಿ ಮೆಂತ್ಯವನ್ನು ನಿಮ್ಮ ಆಹಾರದ ಭಾಗವಾಗಿ ಮಾಡಿ. ಕಸೂರಿ ಮೇಥಿಯು ಹೃದಯ, ಗ್ಯಾಸ್ಟ್ರಿಕ್ ಮತ್ತು ಕರುಳಿನ ಸಮಸ್ಯೆಗಳನ್ನು ಸಹ ಗುಣಪಡಿಸುತ್ತದೆ.
ಇದನ್ನೂ ಓದಿ-Survey: ದೊಡ್ಡ ಪಾದಗಳಿರುವ ಪುರುಷರು ಮೋಸಗಾರರು, ಸಂಗಾತಿಯಿಂದ ಮರೆಮಾಚಿ ಈ ಕೆಲಸ ಮಾಡುತ್ತಾರೆ
5. ಕೂದಲಿನ ಆರೋಗ್ಯಕ್ಕೆ ತುಂಬಾ ಲಾಭಕಾರಿ - ಕಸೂರಿ ಮೆಂತ್ಯವನ್ನು ಅನೇಕ ಕೂದಲಿನ ಸಮಸ್ಯೆಗಳನ್ನುತೊಡೆದು ಹಾಕಲು ಬಳಸಲಾಗುತ್ತದೆ. ಇದರಲ್ಲಿರುವ ಪ್ರೋಟೀನ್, ಲೆಕ್ಟಿನ್ ಮತ್ತು ನಿಕೋಟಿನ್ ನಂತಹ ಪೋಷಕಾಂಶಗಳು ಕೂದಲಿನ ಬೆಳವಣಿಗೆ ಹಾಗೂ ಕೂದಲನ್ನು ಬಲಪಡಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿವೆ. ಇದಲ್ಲದೇ, ಕೂದಲಿನ ಬೇರುಗಳನ್ನು ಬಲಪಡಿಸಲು ಮತ್ತು ಕೂದಲನ್ನು ದಪ್ಪವಾಗಿಸಲು ಇದು ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ-Health Tips: ನೀವು ಮೈಗ್ರೇನ್ ನಿಂದ ಬಳಲುತ್ತಿದ್ದರೆ ಕೂಡಲೇ ಈ ಆಹಾರ ಸೇವಿಸುವುದನ್ನು ನಿಲ್ಲಿಸಿ
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಯಾವುದೇ ಒಂದು ಚಿಕಿತ್ಸೆಗೆ ಪರ್ಯಾಯ ಆಯ್ಕೆ ಅಲ್ಲ. ಇದನ್ನು ಕೇವಲ ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. )
ಇದನ್ನೂ ಓದಿ-Benefits of Curry Leaves: ತೂಕ ಕಡಿಮೆ ಮಾಡಲು ಕರಿಬೇವಿನ ಎಲೆಗಳನ್ನು ಈ ರೀತಿ ಬಳಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.