ಲಾವಂಚ ಶರಬತ್ತಿನ ಆರೋಗ್ಯಕರ ಲಾಭಗಳು: ಬೇಸಿಗೆ ಕಾಲದಲ್ಲಿ ಜನರು ಸಾಮಾನ್ಯವಾಗಿ ತಂಪು ನೀಡುವ ಅಥವಾ ರಿಫ್ರೆಶ್ ಮಾಡುವ ಪಾನೀಯಗಳಿಗಾಗಿ ಹುಡುಕಾಟ ನಡೆಸುತ್ತಾರೆ. ಹೀಗಿರುವಾಗ ಜನರು ರೂಹ್ ಅಫ್ಜಾ, ಕೆಲವೊಮ್ಮೆ ಮಾವಿನ ಪಾನಕ ಅಥವಾ ಕೆಲವೊಮ್ಮೆ ತಂಪು ಪಾನೀಯಗಳಿಂದ ತಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಾರೆ. ಆದರೆ ಬೇಸಿಗೆಯಲ್ಲಿ, ಲಾವಂಚ ಜ್ಯೂಸ್ ಸೇವನೆ ನಿಮಗೆ ಕೇವಲ ತಂಪಿನ ಅನುಭವವನ್ನು ಮಾತ್ರ ನೀಡದೆ, ಹಲವು ಆರೋಗ್ಯಕರ ಪ್ರಯೋಜನಗಳನ್ನು ಕೂಡ ಒದಗಿಸುತ್ತದೆ. ಖಸ್ ಸಿರಪ್ ನಿಮ್ಮನ್ನು ತಾಜಾ ಹಾಗೂ ಆರೋಗ್ಯಕರವಾಗಿರಿಸುತ್ತದೆ. ಸಾಮಾನ್ಯವಾಗಿ ಇದು ಹಸಿರು ಬಣ್ಣದ ಸಿರಪ್ ಆಗಿರುತ್ತದೆ. ಕೆಲವರು ಇದನ್ನು ಮನೆಯಲ್ಲಿಯೂ ಕೂಡ ತಯಾರಿಸುತ್ತಾರೆ. ಹಾಗಾದರೆ, ಲಾವಂಚ ಸಿರಪ್ ಅಥವಾ ಜ್ಯೂಸ್ ಅನ್ನು ಹೇಗೆ ತಯಾರಿಸಬೇಕು ಮತ್ತು ಅದರ ಆರೋಗ್ಯಕರ ಲಾಭಗಳೇನು ತಿಳಿದುಕೊಳ್ಳೋಣ ಬನ್ನಿ. 

COMMERCIAL BREAK
SCROLL TO CONTINUE READING

ಲಾವಂಚದಿಂದಾಗುವ  ಆರೋಗ್ಯ ಪ್ರಯೋಜನಗಳು


1. ಉಷ್ಣತೆಯನ್ನು ನಿವಾರಿಸುತ್ತದೆ
ಖಸ್ ಒಂದು ಸಂಪೂರ್ಣ ನೈಸರ್ಗಿಕ ಪಾನೀಯವಾಗಿದೆ. ಬೇಸಿಗೆ ಕಾಲದಲ್ಲಿ ಇದು ನಿರ್ಜಲೀಕರಣದಿಂದಾಗುವ ಹೀಟ್ ಸ್ಟ್ರೋಕ್ ನಿಂದ ಇದು ರಕ್ಷಣೆ ಒದಗಿಸುತ್ತದೆ ಮಾತು ಆರೋಗ್ಯಕ್ಕೆ ಇದು ಒಂದು ವರದಾನದಂತೆ ಕೆಲಸ ಮಾಡುತ್ತದೆ. 

2. ಕಣ್ಣುಗಳ ಆರೋಗ್ಯಕ್ಕೆ ಉತ್ತಮ
ಲಾವಂಚ ಬೇರಿನಲ್ಲಿ ಹೇರಳ ಪ್ರಮಾಣದಲ್ಲಿ ಜಿಂಕ್ ಇರುತ್ತದೆ. ಇದೆ ಕಾರಣದಿಂದ ಅದು ದೇಹವನ್ನು ತಂಪಾಗಿಸುತ್ತದೆ. ಇದಲ್ಲದೆ ಇದು ನಮ್ಮ ಕಣ್ಣಿನ ಆರೋಗ್ಯಕ್ಕೂ ಕೂಡ ಹಿತಕಾರಿಯಾಗಿದೆ. ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಕಣ್ಣು ಕೆಂಪಾಗುವ ಸಮಸ್ಯೆ ಕೂಡ ಇದರಿಂದ ನಿವಾರಣೆಯಾಗುತ್ತದೆ. 

3. ರಕ್ತ ಪರಿಚಲನೆ ಸುಧಾರಿಸುತ್ತದೆ
ಲಾವಂಚ ವಿಟಮಿನ್ ಬಿ6 ಮತ್ತು ಮೆಗ್ನೆಸಿಯಮ್ನ ಉತ್ತಮ ಮೂಲವಾಗಿದೆ. ಇದರಿಂದ ದೇಹದಲ್ಲಿನ ರಕ್ತ ಪರಿಚಲನೆ ಸುಧಾರಿಸುತ್ತದೆ.

4. ಆಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದೆ
ರಾಮಚ್ಚ ಆಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದೆ. ಹೀಗಾಗಿ ಇದು ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.


ಇದನ್ನೂ ಓದಿ-ಮಧುಮೇಹಿಗಳು ನಿಂಬೆಹಣ್ಣು ಸೇವಿಸಬಹುದೇ? ಇಲ್ಲಿದೆ ನೋಡಿ ಉತ್ತರ

5. ಬಾಯಾರಿಕೆ ತಣಿಸುತ್ತದೆ 
ಖಸ್ ದೇಹಕ್ಕೆ ತಂಪಿನ ಅನುಭವ ನೀಡುತ್ತದೆ. ಇದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ ಮತ್ತು ದೀರ್ಘಕಾಲದವರೆಗೆ ತಂಪಿನ ಅನುಭವ ಒದಗಿಸುತ್ತದೆ. 


ಇದನ್ನೂ ಓದಿ-Health Tips: ಯಾವ ಸಮಯದಲ್ಲಿ ಮೊಸರು ಸೇವಿಸಬೇಕು ಗೊತ್ತಾ?

ಲಾವಂಚ ಶರಬತ್ತನ್ನು ತಯಾರಿಸುವ ವಿಧಾನ
ಎಲ್ಲಕ್ಕಿಂತ ಮೊದಲು ಒಂದು ಪಾತ್ರೆಯಲ್ಲಿ ಸ್ವಲ್ಪ ಶುದ್ಧ ನೀರನ್ನು ತೆಗೆದುಕೊಂಡು ಅದರಲ್ಲಿ ಸಕ್ಕರೆಯನ್ನು ಬೆರಸಿ ಕುದಿಸಿಕೊಳ್ಳಿ. ಸ್ವಲ್ಪ ಗಟ್ಟಿಯಾಗುವವರೆಗೆ ಅದನ್ನು ಹಾಗೆಯೇ ಬಿಡಿ. ಸಕ್ಕರೆ ಪಾಕದ ತಂತಿ ಕಾಣಿಸಿಕೊಂಡ ಬಳಿಕ ಅದರಲ್ಲಿ ಲಾವಂಚ ಎಸೆನ್ಸ್ ಜೊತೆಗೆ ಸ್ವಲ್ಪ ನೈಸರ್ಗಿಕ ಹಸಿರು ಅಡುಗೆ ಬಣ್ಣವನ್ನು ಹಾಕಿ, ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಈ ಮಿಶ್ರಣವನ್ನು ತಂಪಾಗಿಸಿ. ತಂಪಾದ ಬಳಿಕ ಅದರಲ್ಲಿ ಮತ್ತಷ್ಟು ನೀರು ಮತ್ತು ಐಸ್ ಕ್ಯೂಬ್ ಗಳನ್ನು ಬೆರೆಸಿ ಎಂಜಾಯ್ ಮಾಡಿ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.