Periods relief tips : ಮುಟ್ಟಿನ ಸಮಯದಲ್ಲಿ ಚುಂಬನ ಮಾಡುವುದು ಒಳ್ಳೆಯದು ಅಂತ ಹೇಳಲಾಗುತ್ತದೆ. ಆದ್ರೆ ಭಾರತೀಯ ಸಂಪ್ರದಾಯದಲ್ಲಿ ಪಿರಿಯಡ್ಸ್‌ ವೇಳೆ ಯುವತಿಯನ್ನು ಮುಟ್ಟುವಂತಿಲ್ಲ ಎನ್ನುವ ಮೂಡನಂಬಿಕೆ ಇವೆ. ಆದ್ರೆ ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದು ಈಗ ಬೇಡ. ಜಸ್ಟ್‌ ಮುಟ್ಟಿನ ಸಮಯದಲ್ಲಿ ಕಿಸ್‌ ಮಾಡುವುದರಿಂದ ಆಗುವ ಆರೋಗ್ಯ ಲಾಭಗಳ ಕುರಿತು ತಿಳಿಯೋಣ..


COMMERCIAL BREAK
SCROLL TO CONTINUE READING

ಹೌದು.. ಮುಟ್ಟಿನ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನ್ ಮಟ್ಟವು ಏರಿಳಿತಗೊಳ್ಳುತ್ತದೆ, ಇದು ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತದೆ. ಈ ಸಮಯದಲ್ಲಿ, ಅವರ ಮೂಡ್ ಸ್ವಿಂಗ್ ಆಗುತ್ತಿರುತ್ತದೆ. ಅಲ್ಲದೆ, ಸೆಳೆತ ಮತ್ತು ಆಯಾಸವನ್ನು ಅನುಭವಿಸುತ್ತಾರೆ. ಈ ವೇಳೆ ಒಂದು ಚುಂಬನ ಅವರ ಸಂತೋಷಕ್ಕೆ ಕಾರಣವಾಗುತ್ತದೆ.. 


ಇದನ್ನೂ ಓದಿ:ವಿಟಮಿನ್ ಸಿ ಕೊರತೆಯು ಈ ಪ್ರಮುಖ ಕಾಯಿಲೆಗಳಿಗೆ ಕಾರಣವಾಗಬಹುದು..!


ಅಧ್ಯಯನಗಳ ಪ್ರಕಾರ ಮುಟ್ಟಿನ ಸಮಯದಲ್ಲಿ ಕಿಸ್‌ ಮಾಡುವುದರಿಂದ ಮಹಿಳೆಯರಲ್ಲಿ ನೋವು ನಿವಾರಕಗಳಾದ ಎಂಡಾರ್ಫಿನ್‌ಗಳನ್ನು ಬಿಡುಗಡೆಯಾಗುತ್ತವೆ, ಇದು ಮೂಡ್‌ ಸ್ವಿಂಗ್‌ ಮತ್ತು ಅವರ ಇತರೆ ಅಸ್ವಸ್ಥತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಹೆಚ್ಚುವರಿಯಾಗಿ, ಚುಂಬನವು ಜೋಡಿಗಳ ನಡುವೆ ಭಾವನಾತ್ಮಕ ಸಂಪರ್ಕವನ್ನು ಹೆಚ್ಚಿಸುತ್ತದೆ. ಮಹಿಳೆಯರಿಗೆ ಇದು ಹೆಚ್ಚು ಆರಾಮದಾಯಕವಾದ ಮುಟ್ಟಿನ ಅನುಭವ ನೀಡುತ್ತದೆ.


ಮುಟ್ಟಿನ ಸಮಯದಲ್ಲಿ ಕಿಸ್‌ ಮಾಡುವುದರಿಂದ ಅವರ ಹಾರ್ಮೋನ್‌ಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದರಿಂದಾಗಿ "ಲವ್‌ ಹಾರ್ಮೋನ್" ಎಂದು ಕರೆಯಲ್ಪಡುವ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಇದು ಅವರಿಗೆ ನೆಮ್ಮದಿ, ಸಂತೋಷ ನೀಡುತ್ತದೆ. ಇವೆಲ್ಲವೂ ಮುಟ್ಟಿನ ಭಾವನಾತ್ಮಕ ಏರಿಳಿತಗಳನ್ನು ಸರಾಗಗೊಳಿಸುವಲ್ಲಿ ಸಹಾಯ ಮಾಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.