ನವದೆಹಲಿ : ಅನೇಕ ಜನರು ಸಾಸಿವೆ ಎಣ್ಣೆಯನ್ನು ಇಷ್ಟಪಡುವುದಿಲ್ಲ, ಆದರೆ ಸಾಸಿವೆ ಎಣ್ಣೆಯು ನಿಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ಗೊತ್ತೇ?. ಸಾಸಿವೆ ಎಣ್ಣೆ ಸೇವನೆಯು ನಿಮಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ ಎಂದು ಅನೇಕ ಅಧ್ಯಯನಗಳಿಂದ ತಿಳಿದುಬಂದಿದೆ. ಆಹಾರದಲ್ಲಿ ಅಷ್ಟೇ ಅಲ್ಲ  ಸಾಸಿವೆ ಎಣ್ಣೆಯನ್ನು ಅನೇಕ ಜನರು ಕೂದಲು ಮಸಾಜ್‌ಗಾಗಿ ಮತ್ತೆ ಕೆಮ್ಮು ನಿವಾರಣೆಗೂ ಬಳಸಲಾಗುತ್ತದೆ.


COMMERCIAL BREAK
SCROLL TO CONTINUE READING

ಸಾಸಿವೆ ಎಣ್ಣೆ(Mustard Oil)ಯು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಹಾಗಾಗಿ ಇದು ಹೃದಯಕ್ಕೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ, ಆದ್ದರಿಂದ ಇದು ಸೋಂಕನ್ನು ತಡೆಯುತ್ತದೆ. ಪ್ರಾಣಿಗಳ ಅಧ್ಯಯನದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಮತ್ತು ಅವು ಹರಡದಂತೆ ತಡೆಯುತ್ತದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ : ಅತಿಯಾಗಿ ಬೆಳ್ಳುಳ್ಳಿ ಸೇವನೆ ಕೂಡಾ ಅಪಾಯಕಾರಿ, ಆರೋಗ್ಯಕ್ಕಾಗಿ ಇಷ್ಟು ಮಾತ್ರ ತಿನ್ನಬೇಕು


ಶೀತ ಮತ್ತು ಕೆಮ್ಮಿಗಾಗಿ  ಸಾಸಿವೆ ಎಣ್ಣೆ


ಸಾಸಿವೆ ಎಣ್ಣೆಯನ್ನು ಶೀತ ಮತ್ತು ಕೆಮ್ಮಿನ(Cold and Cough) ಸಮಸ್ಯೆಗೆ ಭಾರಿ ಪ್ರಯೋಜನಕರೋಯಾಗಿದೆ. ಸಾಸಿವೆ ಎಣ್ಣೆಯನ್ನು ಹಚ್ಚುವುದು ಅಥವಾ ಇದರ ಹಬೆ ತೆಗೆದುಕೊಳ್ಳುವುದರಿಂದ ಶೀತ ಮತ್ತು ಕೆಮ್ಮಿಗೆ ಪರಿಣಾಮಕಾರಿ ಮನೆಮದ್ದಾಗಿದೆ. ರಾತ್ರಿ ಮಲಗುವ ಮುನ್ನ ಎದೆಯ ಮೇಲೆ ಸಾಸಿವೆ ಎಣ್ಣೆಯನ್ನು ಹಚ್ಚುವುದರಿಂದ ಉಸಿರಾಟದ ಪ್ರದೇಶವು ಸ್ವಚ್ಛವಾಗುತ್ತದೆ. ಇದು ಕಫದ ಸಮಸ್ಯೆಗೆ ಪರಿಹಾರ ನೀಡುತ್ತದೆ.


ಹೃದಯಕ್ಕೆ ಸಾಸಿವೆ ಎಣ್ಣೆ


ಸಾಸಿವೆ ಎಣ್ಣೆಯು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ, ಇದು ಅನೇಕ ಆರೋಗ್ಯ ಪ್ರಯೋಜನ(Health Benefits)ಗಳನ್ನು ಹೊಂದಿದೆ. ಇದು ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ಸ್ಯಾಚುರೇಟೆಡ್ ಕೊಬ್ಬಿನ ಬದಲು ಮೊನೊಸಾಚುರೇಟೆಡ್ ಕೊಬ್ಬು ಇದ್ದು ಇದನ್ನ ಆಹಾರದಲ್ಲಿ ಬಳಸುವುದರಿಂದ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆದ್ದರಿಂದ ಹೃದಯಕ್ಕೆ ಇದು ತುಂಬಾ ಒಳ್ಳೆಯದು. ಇದಲ್ಲದೇ, ಇದು ಟ್ರೈಗ್ಲಿಸರೈಡ್‌ಗಳು, ಅಧಿಕ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.


ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು


ಸಾಸಿವೆ ಎಣ್ಣೆಯು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ, ಆದ್ದರಿಂದ ಇದು ನಿಮ್ಮನ್ನು ಸೋಂಕಿನಿಂದ ರಕ್ಷಿಸುತ್ತದೆ. ಸಾಸಿವೆ ಎಣ್ಣೆಯು ಬ್ಯಾಕ್ಟೀರಿಯಾ(Virus) ವಿರೋಧಿ, ಶಿಲೀಂಧ್ರ-ವಿರೋಧಿ ಮತ್ತು ವೈರಾಣು-ವಿರೋಧಿ ಗುಣಗಳನ್ನು ಹೊಂದಿದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ. ಟೆಸ್ಟ್ ಟ್ಯೂಬ್ ಅಧ್ಯಯನಗಳು ಸಾಸಿವೆ ಎಣ್ಣೆಯು ಬ್ಯಾಕ್ಟೀರಿಯಾದ ತಳಿಗಳಾದ ಇ.ಕೋಲಿ, ಸ್ಟ್ಯಾಫಿಲೋಕೊಕಸ್ ಔರಿಯಸ್ ಮತ್ತು ಬ್ಯಾಸಿಲಸ್ ಸೆರಿಯಸ್ ಮೇಲೆ ಪರಿಣಾಮಕಾರಿಯಾಗಿದೆ.


ಇದನ್ನೂ ಓದಿ : Empty Stomach : ಖಾಲಿ ಹೊಟ್ಟೆಯಲ್ಲಿ ನೀವು ಎಂದು ಮಾಡಬಾರದು ಈ 6 ಕೆಲಸಗಳನ್ನ..!


ಸಾಸಿವೆ ಎಣ್ಣೆಯನ್ನು ಹಚ್ಚುವ ಮೂಲಕ ಅಥವಾ ಆಹಾರ(Food)ದಲ್ಲಿ ಬಳಸುವುದರಿಂದ, ನೀವು ಅನೇಕ ರೀತಿಯ ಸೋಂಕುಗಳ ವಿರುದ್ಧ ಹೋರಾಡಬಹುದು. ವಿಶೇಷವಾಗಿ ಜೀರ್ಣಾಂಗವ್ಯೂಹದ ಸೋಂಕಿನಿಂದ ರಕ್ಷಿಸುತ್ತದೆ.


ಕ್ಯಾನ್ಸರ್ ಕೋಶಗಳ ಬೆಳವಣಿಗೆ ಕಡಿಮೆ ಮಾಡಲು ಸಾಸಿವೆ ಎಣ್ಣೆ


ಇದು ಕ್ಯಾನ್ಸರ್ ಕೋಶಗಳ(Cancer Cells) ಬೆಳವಣಿಗೆ ಮತ್ತು ಹರಡುವಿಕೆಯನ್ನು ನಿಲ್ಲಿಸುವ ಗುಣ ಹೊಂದಿದೆ. ಈ ಬಗ್ಗೆ ಸಂಶೋಧನೆಯು ಇನ್ನೂ ಬಹಿರಂಗಗೊಂಡಿಲ್ಲವಾದರೂ, ಅನೇಕ ಪ್ರಯೋಗಾಲಯ ಅಧ್ಯಯನಗಳು ಸಾಸಿವೆ ಎಣ್ಣೆಯು ಕ್ಯಾನ್ಸರ್ ಕೋಶಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಅಂಬಾ ಮಾಹಿತಿ ಬಹಿರಂಗಪಡಿಸಿದೆ.ಇಲಿಗಳ ಮೇಲೆ ಒಂದು ಅಧ್ಯಯನವನ್ನು ಮಾಡಲಾಯಿತು, ಇದರಲ್ಲಿ ಸಾಸಿವೆ ಎಣ್ಣೆಯು ಕೊಲೊನ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ ಅಂಬಾ ಮಾಹಿತಿ ತಿಳಿದುಬಂದಿದೆ. ಇನ್ನೊಂದು ಪ್ರಾಣಿ ಅಧ್ಯಯನದ ಪ್ರಕಾರ, ಸಾಸಿವೆ ಎಣ್ಣೆಯಲ್ಲಿರುವ ಅಲ್ಲೈಲ್ ಐಸೊಥಿಯೊಸೈನೇಟ್ ಮೂತ್ರಕೋಶದ ಕ್ಯಾನ್ಸರ್ ಬೆಳವಣಿಗೆಯನ್ನು ಶೇ.35 ರಷ್ಟು ಕಡಿಮೆ ಮಾಡಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.