Health Tips Kannada: ಎಲ್ಲಾ ತರಕಾರಿಗಳಲ್ಲಿ ಪೋಷಕಾಂಶ ಹೇರಳವಾಗಿರಿವುದರಿಂದ ಆರೋಗ್ಯದ ವೃದ್ದಿಗೆ ಸಹಕಾರಿಯಾಗಿದೆ. ಅದರಲ್ಲೂ ಅಗ್ಗ ಬೆಲೆಯಲ್ಲಿ ಸಿಗುವ ಹೀರೆಕಾಯಿಯಲ್ಲಿ ಆಹಾರದ ನಾರುಗಳು, ನೀರಿನಾಂಶ, ವಿಟಮಿನ್ ಎ (Vitamin A), ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ6 ನಂತಹ ಅಂಶಗಳು ಹೇರಳವಾಗಿವೆ.


COMMERCIAL BREAK
SCROLL TO CONTINUE READING

ಹೀರೆಕಾಯಿಯಲ್ಲಿ ಹೇರಳವಾಗಿ ವಿಟಮಿನ್ ಎ ಬೀಟಾ ಕ್ಯಾರೋಟಿನ್ ಅಂಶವು ಯುವಕರು, ವೃದ್ದರು ಸೇರಿದಂತೆ ಉತ್ತಮ ಕಣ್ಣಿನ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಇದರಲ್ಲಿರುವ ಮ್ಯಾಕ್ಯುಲರ್ ಡಿಜೆನರೇಶನ್, ಅಂಶವು  ಭಾಗಶಃ ಕುರುಡುತನ ಮತ್ತು ಇತರ ಕಣ್ಣಿನ ಕಾಯಿಲೆಗಳನ್ನು ತಡೆಯುತ್ತದೆ. 


ಇದನ್ನೂ ಓದಿ: Papaya Seeds: ಪಪ್ಪಾಯಿ ಬೀಜಗಳಲ್ಲಿದೆ ಈ ಮಾರಕ ಕಾಯಿಲೆ ಗುಣಪಡಿಸುವ ಶಕ್ತಿ
 
ತೂಕ  ಇಳಿಕೆಗೆ ಸಹಕಾರಿ


ಹೀರೆಕಾಯಿಯಲ್ಲಿ ಕಡಿಮೆ ಮಟ್ಟದಕ್ಯಾಲೋರಿಗಳನ್ನು ಹೊಂದಿರುವುದರಿಂದ ಕೊಬ್ಬುಗಳು ಮತ್ತು ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುತ್ತದೆ. ಹೀರೆಯಲ್ಲಿರುವ ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಪೋಷಾಕಾಂಶವು  ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. 


ಹೀರೆಕಾಯಿಯಲ್ಲಿ ಸಾಕಷ್ಟು ನೀರಿನ ಅಂಶವಿರವುದರಿಂದ ಇದು ನೈಸರ್ಗಿಕ ಆಹಾರದ ಫೈಬರ್ ಆಗಿದೆ. ಈ ತರಕಾರಿ ಸೇವನೆಯಿಂದ ಮಲಬದ್ಧತೆಯನ್ನು  ನಿಯಂತ್ರಿಸುತ್ತದೆ. 


ಇದನ್ನೂ ಓದಿ: ತೂಕ ಇಳಿಸುವ ಭರದಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ..! ʼಜೀವಕ್ಕೆ ಕುತ್ತು ಖಂಡಿತʼ


ಮಧುಮೇಹ ನಿಯಂತ್ರಣ
ಹೀರೆಕಾಯಿಯಲ್ಲಿ ಸ್ವಾಭಾವಿಕವಾಗಿ ಸಕ್ಕರೆ ಅಂಶ ಕಡಿಮೆ ಇದೆ. ಹಾಗೆಯೇ ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಮಧುಮೇಹದ ಸಮಸ್ಯೆ ಇದ್ದರೆ ಅಂಥಹ ರೋಗಿಗಳು ಈ ತರಕಾರಿಯನ್ನು ನಿಯಮಿತ್ತವಾಗಿ ಸೇವಿಸಬಹುದಾಗಿದೆ.  


ಯಕೃತ್ತು ಆರೋಗ್ಯಕ್ಕೆ ಉತ್ತಮ ಆಹಾರ


ಹೀರೆಕಾಯಿಯು ವಿಷಕಾರಿ ತ್ಯಾಜ್ಯ, ಆಲ್ಕೋಹಾಲ್ ಅವಶೇಷಗಳು ಮತ್ತು ಜೀರ್ಣವಾಗದ ಆಹಾರದ ಕಣಗಳ ರಕ್ತವನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಹೊಂದಿದೆ ಸಂಶೋಧನೆಯಿಂದ ಕಂಡುಬಂದಿದೆ. ಆದ್ದರಿಂದ ಯಕೃತ್ತಿನ ಆರೋಗ್ಯ ಮತ್ತು ಪಿತ್ತರಸದ ಕಾರ್ಯವನ್ನು ಸುಧಾರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡ