ಮನೆಯಲ್ಲಿ ಹಾಲು ಒಡೆದರೆ ಅಯ್ಯೋ ಸುಮ್ಮನೆ ವೇಸ್ಟ್ ಆಯ್ತಲ್ಲಾ. ಇದರಿಂದ ಇನ್ನೇನು ಪ್ರಯೋಜನ ಇಲ್ಲ ಅಂತ ನಾವು ಹೊರ ಚೆಲ್ಲುತ್ತೇವೆ. ಕೆಲವು ಈ ಹಾಲಿನಿಂದ ಪನ್ನೀರ್ ಮಾಡಲು ಮಾತ್ರ ಸಾಧ್ಯ ಅನ್ಕೊತಾರೆ. ಆದರೆ 'ಒಡೆದ ಹಾಲು' ನಿಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂಬುದು ನಿಮಗೆ ಗೊತ್ತೇ? 


COMMERCIAL BREAK
SCROLL TO CONTINUE READING

ಹಾಲು ಹಸಿಯಾಗಿರಲಿ, ಬಿಸಿಯಿರಲಿ ಅಥವಾ ಒಡೆದಿರಲಿ ಅದರಲ್ಲಿ ಸಾಕಷ್ಟು ಪ್ರೋಟೀನ್ ಇದೇ. ಆದರೆ ಒಡೆದ ಹಾಲಿನಲ್ಲಿ ಹುಳಿ ರುಚಿಯಿರುವ ಕಾರಣ ಅದು ಚೆನ್ನಾಗಿಲ್ಲ ಎಂದೆಸಿಸುತ್ತದೆ. ಹಾಲು ಒಡೆಯುವುದು ಸಾಮಾನ್ಯ. ಆದರೆ ಒಡೆದ ಹಾಲನ್ನು ಹೊರ ಹಾಕುವ ಬದಲು ಅದರಿಂದ ಏನೆಲ್ಲಾ ಪ್ರಯೋಜನ ಇದೇ ಎಂಬುದನ್ನು ನಾವಿಂದು ನಿಮಗೆ ತಿಳಿಸುತ್ತೇವೆ.


ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ:
ಒಡೆದ ಹಾಲಿನ ನೀರಿನಲ್ಲಿ ಪ್ರೋಟೀನ್ಗಳ ಪ್ರಮಾಣವು ತುಂಬಾ ಹೆಚ್ಚಾಗಿದೆ.  ಈ ನೀರಿನು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ನೀರಿನಿಂದ ಸ್ನಾಯುವಿನ ಶಕ್ತಿಯು ಹೆಚ್ಚಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ. ಈ ನೀರಿನಲ್ಲಿ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವೂ ಇದೆ ಮತ್ತು ಅದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. 


ಕೊಲೆಸ್ಟ್ರಾಲ್ ನಿಯಂತ್ರಣ:
ಒಡೆದ ಹಾಲಿನ ನಿಯಮಿತ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಎಂದು ಹಲವು ಸಂಶೋಧನೆಯಿಂದ ತಿಳಿದುಬಂದಿದೆ. ಕೊಲೆಸ್ಟರಾಲ್ ನಿಯಂತ್ರಣದಲ್ಲಿದ್ದರೆ, ಹೃದಯಾಘಾತ ಮತ್ತು ಸ್ಟ್ರೋಕ್ ನಂತಹ ಕಾಯಿಲೆಗಳಿಂದ ದೂರವಿರಬಹುದು.


ಹಿಟ್ಟು ಮೃದುವಾಗಲು ಸಹಾಯಕ:
ನೀವು ಚಪಾತಿ, ರೊಟ್ಟಿ ಹಿಟ್ಟನ್ನು ಕಲಸುವಾಗ ಈ ಒಡೆದ ಹಾಲಿನ ನೀರನ್ನು ಬಳಸುವುದರಿಂದ ಅದು ಮೃದುವಾಗುವುದಲ್ಲದೆ, ರುಚಿ ಕೂಡಾ ಹೆಚ್ಚಾಗುತ್ತದೆ. ಇದರೊಂದಿಗೆ ನೀವು ಸಾಕಷ್ಟು ಪ್ರೋಟೀನ್ ಗಳನ್ನೂ ಸಹ ಪಡೆಯುತ್ತೀರಿ. ಒಡೆದ ಹಾಲಿನ ನೀರನ್ನು ವಿವಿಧ ರೀತಿಯ ಭಕ್ಷ್ಯ ತಯಾರಿಸಲು ಬಳಸಲಾಗುತ್ತದೆ. 


ಹಾಲು ರಕ್ತ ಪರಿಚಲನೆಗೆ ಉತ್ತಮವಾಗಿರುತ್ತದೆ, ಆದ್ದರಿಂದ ಚರ್ಮದ ಜೀವಕೋಶಗಳು ಆರೋಗ್ಯಕರವಾಗಿರುತ್ತವೆ.


ಮುಖದ ಸೌಂದರ್ಯಕ್ಕೂ ಉಪಯುಕ್ತ:
ಒಡೆದ ಹಾಲಿನ ನೀರಿಗೆ ಕಡಲೆಹಿಟ್ಟು, ಅರಿಶಿನ ಮತ್ತು ಗಂಧದ ಪುಡಿ ಸೇರಿಸಿ ನಿಮ್ಮ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.