Anti Aging tips : ವಯಸ್ಸು ಹೆಚ್ಚಾದಂತೆ ಮುಖದಲ್ಲಿ ಸುಕ್ಕುಗಳು ಮೂಡುತ್ತವೆ. ಅವುಗಳ ಆಧಾರದ ಮೇಲೆ ನಿಮಗೆ ವಯಸ್ಸಾಗಿದೆ ಅಂತ ಹೇಳಬಹುದು. ವಯಸ್ಸಾದಂತೆ ಚರ್ಮ ಕಾಂತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.. ಹಾಗಾಗಿ ನಿತ್ಯ ಪಾರ್ಲರ್‌ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳಬೇಕು. ಆದರೆ ಇದಕ್ಕೆ ತುಂಬಾ ಹಣ ಖರ್ಚಾಗುತ್ತದೆ. ಈ ಸಮಸ್ಯೆಯಿಂದ ಹೊರ ಬರಲು ಇನ್ನೊಂದು ಸರಳ ಮಾರ್ಗವಿದೆ. ಅದೇ ಆಹಾರದ ಮೇಲೆ ಕೇಂದ್ರೀಕರಿಸುವುದು. 


COMMERCIAL BREAK
SCROLL TO CONTINUE READING

ಹೌದು.. ಪೌಷ್ಟಿಕಾಂಶದ ಸೇವನೆಯ ಕೊರತೆಯಿಂದಾಗಿ ಚರ್ಮವು ಅಕಾಲಿಕ ವಯಸ್ಸಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. ಸಾಮಾನ್ಯವಾಗಿ, ನಿಮ್ಮ ದೈನಂದಿನ ಆಹಾರದಲ್ಲಿ ಧಾನ್ಯಗಳು, ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸುವುದರಿಂದ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಬಹುದು. ದೇಹದಲ್ಲಿ ಪೋಷಕಾಂಶಗಳ ಕೊರತೆ ಅಕಾಲಿಕ ವಯಸ್ಸಿಗೆ ಕಾರಣವಾಗಬಹುದು. 


ಇದನ್ನೂ ಓದಿ:ಒಂದಲ್ಲ, ಎರಡಲ್ಲ... ಡೆಂಗ್ಯೂ, ಮಧುಮೇಹದಂತಹ 10 ರೋಗಗಳಿಗೆ ಈ ಬಳ್ಳಿಯ ಎಲೆಯೇ ದಿವ್ಯಔಷಧಿ: ಅರೆದು ರಸ ಕುಡಿದರೆ ಸಾಕು


ಪಪ್ಪಾಯಿ ಹಣ್ಣು ಚರ್ಮಕ್ಕೆ ತುಂಬಾ ಒಳ್ಳೆಯದು. ಈ ಹಣ್ಣಿನಲ್ಲಿ ವಿಟಮಿನ್ ಎ, ಸಿ, ಇ ಮುಂತಾದ ಪ್ರಮುಖ ಪೋಷಕಾಂಶಗಳಿವೆ. ಮಾಗಿದ ಪಪ್ಪಾಯಿಯನ್ನು ತಿನ್ನುವುದರಿಂದ ಹೊಟ್ಟೆಯೂ ಶುಚಿಯಾಗುತ್ತದೆ. ತಿನ್ನುವುದಲ್ಲದೆ ಮಾಗಿದ ಪಪ್ಪಾಯಿ ಸಿಪ್ಪೆಯನ್ನ ಮುಖಕ್ಕೆ ಉಜ್ಜಿಕೊಳ್ಳಿ.


ಸಿಟ್ರಸ್ ಹಣ್ಣುಗಳಾದ ಮುಸಂಬಿ, ಕಿತ್ತಳೆ ಮತ್ತು ನಿಂಬೆಹಣ್ಣು ಚರ್ಮಕ್ಕೆ ಒಳ್ಳೆಯದು. ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಅನ್ನು ಹೊಂದಿರುತ್ತವೆ. ಇದು ಚರ್ಮದಲ್ಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಈ ರೀತಿಯ ಹಣ್ಣುಗಳು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತವೆ.


ಇದನ್ನೂ ಓದಿ:ಈ 3 ವಿಟಮಿನ್ ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ ಕೂದಲು ಉದುರುವುದು ನಿಲ್ಲುತ್ತದೆ, ಒಮ್ಮೆ ಪ್ರಯತ್ನಿಸಿ ನೋಡಿ


ದಾಳಿಂಬೆ ರಕ್ತವನ್ನು ಶುದ್ಧೀಕರಿಸಲು ಮತ್ತು ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಾಳಿಂಬೆ ತಿನ್ನುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. ಯುವಿ ಕಿರಣಗಳಿಂದ ಉಂಟಾಗುವ ಚರ್ಮದ ಹಾನಿಯನ್ನು ಸುಲಭವಾಗಿ ತಡೆಯುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.