Home Remedies for Kidney Stone: ಆರೋಗ್ಯಕರವಾಗಿರಲು ಆಹಾರದಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸುವುದು ಮುಖ್ಯ. ಇದರ ಹೊರತಾಗಿ ದಿನಕ್ಕೆ ಕನಿಷ್ಠ 2 ಲೀಟರ್ ನೀರನ್ನು ಕುಡಿಯುವುದು ಮುಖ್ಯ. ಆದರೆ ಪ್ರಸ್ತುತ ಜನರು ಆರೋಗ್ಯಕರ ಆಹಾರವನ್ನು ಸೇವಿಸುವುದಿಲ್ಲ ಜೊತೆಗೆ ಅಗತ್ಯ ಪ್ರಮಾಣದ ನೀರು ಕುಡಿಯುವುದು ಕೂಡ ಇಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:ಒಂದು ನಿಮಿಷವೂ ಕಾಯಬೇಕಿಲ್ಲ, ಅಪ್ಲೈ ಮಾಡಿದ ತಕ್ಷಣ ಬಿಡುಗಡೆಯಾಗುತ್ತದೆ ಪಿಎಫ್ ಹಣ!ಬ್ಯಾಂಕ್ ನಂತೆ ಇಪಿಎಫ್ ಒ ಕೆಲಸ !ಕೇಂದ್ರ ಸರ್ಕಾರದ ಭರ್ಜರಿ ಯೋಜನೆ


ಕಡಿಮೆ ನೀರು ಕುಡಿಯುವುದರಿಂದ ಅನೇಕರು ಕಿಡ್ನಿ ಸ್ಟೋನ್‌ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದು ಗಂಭೀರ ಸಮಸ್ಯೆಯಾಗಿದ್ದು, ಇದರಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರದ ಮೂಲಕವೇ ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಹಲವು ವಿಧಾನಗಳಿವೆ. ಅವುಗಳಲ್ಲಿ ಉತ್ತಮ ಆಯುರ್ವೇದ ಪರಿಹಾರಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ,


ಮಜ್ಜಿಗೆ: ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಲ್ಲಿ ಮಜ್ಜಿಗೆಯ ಸೇವನೆಯು ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ನೀವು ಹುಳಿ ಮಜ್ಜಿಗೆಯನ್ನು ಸೇವಿಸಬೇಕು. ಹುಳಿ ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲವು ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಬೆಳಗ್ಗೆಯಿಂದ ಸಂಜೆ 6ರವರೆಗೆ ಯಾವಾಗ ಬೇಕಾದರೂ ಮಜ್ಜಿಗೆ ಸೇವಿಸಬಹುದು.


ಹುರುಳಿ ಬೀಜ: ಜೀವಸತ್ವಗಳು, ಖನಿಜಗಳು ಮತ್ತು ಅನೇಕ ರೀತಿಯ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಹುರುಳಿ ಬೀಜ ಮೂತ್ರಪಿಂಡದ ಕಲ್ಲುಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಆದರೆ ದೇಹದಲ್ಲಿ ಉಷ್ಣತೆ ಹೆಚ್ಚಿರುವವರು ಈ ಬೇಳೆಯನ್ನು ಸೇವಿಸಬಾರದು. ರಾತ್ರಿಯಿಡೀ ನೀರಿನಲ್ಲಿ 3-4 ಸ್ಪೂನ್‌ ಹುರುಳಿ ಬೀಜ ನೆನೆಸಿಟ್ಟು ಮರುದಿನ ಬೆಳಿಗ್ಗೆ ಈ ನೀರನ್ನು ಕುಡಿಯಬೇಕು. ಕುದಿಸಿ ಕೂಡ ಸೇವಿಸಬಹುದು.


ಬಾರ್ಲಿ ಹಿಟ್ಟು ಮತ್ತು ನೀರು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಲ್ಲಿ ಪ್ರಯೋಜನಕಾರಿ. ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾರ್ಲಿ ಹಿಟ್ಟಿನ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಬಾರ್ಲಿ ನೀರನ್ನು ಸೇವಿಸಿದರೆ, ಅದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ರಾತ್ರಿಯಿಡೀ ನೀರಿನಲ್ಲಿ 3 ಚಮಚ ಬಾರ್ಲಿಯನ್ನು ನೆನೆಸಿ ಮರುದಿನ ಬೆಳಿಗ್ಗೆ ಈ ನೀರನ್ನು ಕುಡಿಯಬೇಕು.


ಇದನ್ನೂ ಓದಿ: ಕ್ರಿಕೆಟ್‌ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್...‌ ಟೀಂ ಇಂಡಿಯಾಗೆ ಮತ್ತೆ ವಿರಾಟ್‌ ಕೊಹ್ಲಿ ಕ್ಯಾಪ್ಟನ್‌! ʼರಾಜʼನ ಹೆಗಲಿಗೆ ಭಾರತೀಯ ಕ್ರಿಕೆಟ್‌ ರಾಜ್ಯಾಭಾರ!?


ಈ ನೈಸರ್ಗಿಕ ಪರಿಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಸುಧಾರಿಸಬಹುದು. ಆದರೆ, ಈ ಪರಿಹಾರಗಳನ್ನು ಪ್ರಯತ್ನಿಸುವ ಮೊದಲು, ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.