ಈ 7 ಪಾನೀಯಗಳ ಸೇವನೆಯಿಂದ ತಟ್ಟನೆ ಕಂಟ್ರೋಲ್‌ಗೆ ಬರುತ್ತೆ ಬ್ಲಡ್ ಶುಗರ್..!
Diabetes Tips: ಮಧುಮೇಹವನ್ನು ವಾಸಿ ಮಾಡುವ ಔಷಧ ಇಲ್ಲ. ಆರೆ ಇದನ್ನು ನಿಯಂತ್ರಿಸಲು ಮಾತ್ರ ಔಷಧಿಗಳಿವೆ. ಔಷಧಿಯ ಬದಲಿಗೆ ನಾವು ಕೆಲವು ಮನೆಮದ್ದುಗಳನ್ನು ಬಳಸುವುದರಿಂದ, ಇದು ಸಕ್ಕರೆ ಮಟ್ಟವನ್ನು ಕಂಟ್ರೋಲ್‌ನಲ್ಲಿಡಲು ಸಹಾಯ ಮಾಡುತ್ತದೆ.
Diabetes Tips: ಮಧುಮೇಹವನ್ನು ವಾಸಿ ಮಾಡುವ ಔಷಧ ಇಲ್ಲ. ಆರೆ ಇದನ್ನು ನಿಯಂತ್ರಿಸಲು ಮಾತ್ರ ಔಷಧಿಗಳಿವೆ. ಔಷಧಿಯ ಬದಲಿಗೆ ನಾವು ಕೆಲವು ಮನೆಮದ್ದುಗಳನ್ನು ಬಳಸುವುದರಿಂದ, ಇದು ಸಕ್ಕರೆ ಮಟ್ಟವನ್ನು ಕಂಟ್ರೋಲ್‌ನಲ್ಲಿಡಲು ಸಹಾಯ ಮಾಡುತ್ತದೆ.
ಆಯುರ್ವೇದದ ಪ್ರಕಾರ, ಕಫ ಮತ್ತು ಪಿತ್ತ ದೋಷಗಳ ಅಸಮತೋಲನವೇ ಮಧುಮೇಹಕ್ಕೆ ಕಾರಣ. ಸರಿಯಾದ ಜೀರ್ಣಕ್ರಿಯೆಯ ಕೊರತೆಯು ಕಡಿಮೆಯಾದ ಚಯಾಪಚಯ ಕ್ರಿಯೆಯಿಂದ ದೇಹದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ. ಸಕ್ಕರೆಯನ್ನು ಕಡಿಮೆ ಮಾಡಲು ಸರಿಯಾದ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ. ಕೆಲವೊಂದು ಪಾನೀಯಾಗಳನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ಬ್ಲಡ್ ಶುಗರ್ ಅನ್ನು ಕಂಟ್ರೋಲ್‌ನಲ್ಲಿಡಬಹುದು.
ದಾಲ್ಚಿನ್ನಿ ಮತ್ತು ಮೆಂತ್ಯ ಚಹಾ
ಆಯುರ್ವೇದದ ಪ್ರಕಾರ ದಾಲ್ಚಿನ್ನಿ ಮತ್ತು ಮೆಂತ್ಯ ಅನೇಕ ಸಮಸ್ಯೆಗಳಿಗೆ ಪರಿಹಾರ ಎಂದು ಹೇಳಲಾಗುತ್ತದೆ. ಇದರಲ್ಲಿರುವ ಅಂಶಗಳು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿದೆ. ಇದಕ್ಕಾಗಿ ಒಂದೂವರೆ ಲೋಟ ನೀರು ತೆಗೆದುಕೊಂಡು ಅದಕ್ಕೆ ಮೆಂತ್ಯ ಮತ್ತು ದಾಲ್ಚಿನ್ನಿ ಹಾಕಿ ಕುದಿಸಿ ಬೆಳಗ್ಗೆ ಇದನ್ನು ಚಹಾದಂತೆ ಸೇವಿಸಿ, ಈ ರೀತಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿನ ಬ್ಲಡ್ ಶುಗರ್ ಕಡಿಮೆಯಾಗುತ್ತದೆ.
ಹಾಗಲಕಾಯಿ ಜ್ಯೂಸ್
ಅನೇಕರರಿಗೆ ಹಾಗಲಕಾಯಿ ಎಂದರೆ ಇಷ್ಟವಾಗುವುದಿಲ್ಲ, ಹೆಸರು ಕೇಳುತ್ತಿದ್ದಂತೆ ಜನರು ಮೂಗು ಮುರಿಯುತ್ತಾರೆ, ಆದರೆ ಹಾಗಲಕಾಯಿ ಸಕ್ಕರೆ ಕಾಯಿಲೆಗೆ ರಾಮಬಾಣ, ಹಾಗಲಕಾಯಿಯಲ್ಲಿ ಮಧುಮೇಹವನ್ನು ನಿವಾರಿಸುವ ಗುಣವಿದೆ. ಬೆಳಗ್ಗೆ ಇದರೊಂದಿಗೆ ಜ್ಯೂಸ್ ಮಾಡಿ ಕುಡಿಯುವುದರಿಂದ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಬೇವಿನ ಚಹಾ
ಬೇವಿನ ಎಲೆ ಅನೇಕ ಆರೋಗ್ಯ ಗುನಗಳನ್ನು ಒಳಗೊಂಡಿದೆ. ಇದರ ಸೇವನೆಯಿಂದ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ. ಇದಕ್ಕಾಗಿ, 4 ತಾಜಾ ಬೇವುಗಳನ್ನು ತೊಳೆದು ನೀರಿನಲ್ಲಿ ಕುದಿಸಿ ಈ ನೀರನ್ನು ಸೋದಿಸಿ ಕುಡಿಯಿರಿ, ಪ್ರತಿನಿತ್ಯ ಈ ಚಹಾವನ್ನು ಸೇವಿಸುವುದರಿಂದ ಯಾವುದೇ ಔಷಧಿಗಲ ಬಳಕೆ ಇಲ್ಲದೆ ನಿಮ್ಮ ಬ್ಲಡ್ ಶುಗರ್ ಕಂಟ್ರೋಲ್‌ಗೆ ಬರುವುದನ್ನು ನIೌು ಗಮನಿಸಬಹುದು.
ತುಳಸಿ ಚಹಾ
ತುಳಸಿಯನ್ನು ನಮ್ಮ ಮನೆಗಳಲ್ಲಿ ಪವಿತ್ರ ಸಸ್ಯವಾಗಿ ಬಳಸಲಾಗುತ್ತದೆ. ಇದನ್ನು ಸೇವಿಸುವುದರಿಂದ ಸಕ್ಕರೆಯನ್ನೂ ನಿಯಂತ್ರಿಸಬಹುದು. ತುಳಸಿ ಎಲೆಗಳ ಗುಣಲಕ್ಷಣಗಳು ಸಕ್ಕರೆ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ . ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಬೆಳಿಗ್ಗೆ ಕುಡಿಯಿರಿ. ಇದರಿಂದ ನಿಮ್ಮ ದೇಹದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.
ಶುಂಠಿ, ನಿಂಬೆ ರಸದ ಚಹಾ
ಶುಂಠಿ ಮತ್ತು ನಿಂಬೆ ಎರಡೂ ಕೂಡ ಮಧುಮೇಹವನ್ನು ನಿಯಂತ್ರಿಸುತ್ತದೆ. ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಶುಂಠಿ ರಸ ಮತ್ತು ಅರ್ಧ ಚಮಚ ನಿಂಬೆ ರಸವನ್ನು ಬೆರಸಿ ಕುದಿಸಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು.
ಅರಿಶಿನ ಹಾಲು
ಅರಿಶಿನವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಹಾಲಿನಲ್ಲಿ ಅರಿಶಿನವನ್ನು ಕುಡಿಯುವುದರಿಂದ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ. ಹಾಲಿಗೆ ಅರಿಶಿನ ಹಾಕಿ ಬೆಳಗ್ಗೆ ಕುಡಿಯಿರಿ. ಅಥವಾ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಇದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಆಮ್ಲಾ ರಸ
ಆಮ್ಲಾ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದನ್ನು ತೆಗೆದುಕೊಳ್ಳುವುದರಿಂದ ಇನ್ಸುಲಿನ್ ಸೆನ್ಸಿಟಿವಿಟಿ ಹೆಚ್ಚುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸುತ್ತದೆ. ಆದ್ದರಿಂದ, ಬೆಳಿಗ್ಗೆ ಮೊದಲು ಆಮ್ಲಾ ಜ್ಯೂಸ್ ಸೇವಿಸುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.