Banana for Piles patient : ಕಳಪೆ ಆಹಾರ ಪದ್ದತಿಯಿಂದಾಗಿ ಜೀರ್ಣಕಾರಿ ಸಮಸ್ಯೆಗಳು ಇಂದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆಹಾರದಲ್ಲಿ ಫೈಬರ್ ಮತ್ತು ನೀರಿನ ಕೊರತೆ ಉಂಟಾಗಿ ಪೈಲ್ಸ್‌ ಆಗುವ ಸಂಭವ ಹೆಚ್ಚು. ಈ ಸಮಸ್ಯೆ ಇಂದು ಹೆಚ್ಚಾಗಿ ಯುವ ಜನತೆಯನ್ನು ಕಾಡುತ್ತಿದೆ. ಪೈಲ್ಸ್‌ ಚಿಕಿತ್ಸೆ ಅಂತ ಬಂದಾಗ ಮನೆಮದ್ದು ಸಹ ಕೆಲಸ ಮಾಡುತ್ತದೆ. ಅವುಗಳಲ್ಲಿ ಬಾಳೆಹಣ್ಣುಗಳನ್ನು ಸೇವಿಸುವುದು ಅತ್ಯಂತ ಉತ್ತಮ ಮತ್ತು ಪರಿಣಾಮಕಾರಿ ಆಯ್ಕೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.


COMMERCIAL BREAK
SCROLL TO CONTINUE READING

ಜೀರ್ಣಕಾರಿ ಸಮಸ್ಯೆಗಳನ್ನು ಪರಿಹರಿಸಲು, ತಾಜಾ ಹಣ್ಣುಗಳು ಮತ್ತು ತರಕಾರಿಗಳು ಉತ್ತಮ ಆಯ್ಕೆಗಳಲ್ಲಿ ಒಂದು. ಏಕೆಂದರೆ ಜೀರ್ಣಾಂಗ ವ್ಯವಸ್ಥೆ ಮತ್ತು ಚಯಾಪಚಯ ಕ್ರಿಯೆಯಲ್ಲಿ ಇವು ಉತ್ತಮ ಕಾರ್ಯ ನಿರ್ವಹಿಸುತ್ತವೆ. ಅಪೂರ್ಣ ಜೀರ್ಣಕ್ರಿಯೆಯಿಂದಾಗಿ ಪೈಲ್ಸ್ ಉಂಟಾಗುತ್ತದೆ. ಆಯುರ್ವೇದ ತಜ್ಞರ ಪ್ರಕಾರ, ಬಾಳೆಹಣ್ಣನ್ನು ಮಲಬದ್ಧತೆಗೆ ರಾಮಬಾಣವೆಂದು ಪರಿಗಣಿಸಲಾಗುತ್ತದೆ. ಇದು ಮೂಲವ್ಯಾಧಿಗೆ ಪ್ರಾಥಮಿಕ ಚಿಕಿತ್ಸೆಯಾಗಿದೆ. ಆದ್ದರಿಂದ ಪೈಲ್ಸ್ ಚಿಕಿತ್ಸೆಗಾಗಿ ಬಾಳೆಹಣ್ಣುಗಳನ್ನು ಸೇವಿಸುವ ಬಹಳ ಮುಖ್ಯ.


ಇದನ್ನೂ ಓದಿ: Diabetes: ಮಧುಮೇಹಿಗಳಿಗೆ ಔಷಧೀಯ ಕೆಲಸ ಮಾಡುತ್ತದೆ ಹಸಿ ಶುಂಠಿ!


ದೀರ್ಘಕಾಲದ ಮಲಬದ್ಧತೆಯ ಇಂದಾಗಿ ಹೆಮೊರೊಯಿಡ್ಸ್ ಕಾಣಿಸಿಕೊಳ್ಳಬಹುದು. ಇದು ದೀರ್ಘಕಾಲದವರೆಗೆ ಮುಂದುವರಿಯುತ್ತದೆ. ಇದು ಗುದನಾಳ ಮತ್ತು ಗುದದ್ವಾರದಲ್ಲಿ ಸಿರೆಗಳ ಊತಕ್ಕೆ ಕಾರಣವಾಗುತ್ತದೆ. ಇದರಿಂದ ಅಸ್ವಸ್ಥತೆ ಮತ್ತು ಸಂಕಟ ಉಂಟುಮಾಡುತ್ತದೆ. ಮೂಲವ್ಯಾಧಿಗಳ ನಿರ್ವಹಣೆಗೆ ವೈದ್ಯಕೀಯ ಚಿಕಿತ್ಸೆಗಳು ಮತ್ತು ಮನೆಮದ್ದುಗಳೆರಡೂ ಲಭ್ಯವಿದೆ. ಆದಾಗ್ಯೂ, ಫೈಬರ್ ಮತ್ತು ಸಾಕಷ್ಟು ನೀರಿನ ಅಂಶ ಇರುವ ಆಹಾರ ಸೇವಿಸುವುದು ಅತಿಮುಖ್ಯ.


ಬಾಳೆಹಣ್ಣುಗಳು ಮಲಬದ್ಧತೆಯನ್ನು ತಗ್ಗಿಸಲು ಸಹಾಯ ಮಾಡುವ ನೈಸರ್ಗಿಕ ಮದ್ದು. ಒಬ್ಬ ವ್ಯಕ್ತಿಯು ಪೈಲ್ಸ್‌ನೊಂದಿಗೆ ಹೋರಾಡುತ್ತಿದ್ದರೆ, ಬಾಳೆಹಣ್ಣುಗಳನ್ನು ಸೇವಿಸುವುದರಿಂದ ಮಲವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ರಕ್ತಸ್ರಾವ ಮತ್ತು ನೋವು ಕಡಿಮೆಯಾಗುತ್ತದೆ. ಬಾಳೆಹಣ್ಣಿನಲ್ಲಿ ಸ್ವಾಭಾವಿಕವಾಗಿ ಕಂಡುಬರುವ ಸಕ್ಕರೆಯು ಆಂಟಿಬಯೋಟಿಕ್ ಗುಣಗಳನ್ನು ಹೊಂದಿದ್ದು ಅದು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಶುದ್ಧೀಕರಿಸುತ್ತದೆ. ಅಲ್ಲದೆ, ಗುದದ್ವಾರದ ಸುತ್ತ ಉಂಟಾಗುವ ಉರಿಯೂತ ಮತ್ತು ಸಂವೇದನೆಗಳಿಂದ ಪರಿಹಾರ ನೀಡುತ್ತದೆ.


ಇದನ್ನೂ ಓದಿ: ಬೇಸಿಗೆಯಲ್ಲಿ ಈ 10 ಆಹಾರಗಳು ತಿನ್ನಲೇಬೇಡಿ..! ಏಕೆ..? ವಿವರಣೆ ಇಲ್ಲಿದೆ ನೋಡಿ


ಬಾಳೆ ಹಣ್ಣು ತಿನ್ನುವ ವಿಧಾನ : ಮಲಬದ್ಧತೆ ಮತ್ತು ಪೈಲ್ಸ್ ಕಡಿಮೆಯಾಗಲು ನೀವು ಸಂಪೂರ್ಣವಾಗಿ ಮಾಗಿದ ಬಾಳೆಹಣ್ಣುಗಳನ್ನು ಸೇವಿಸುವುದು ಒಳ್ಳೆಯದು. ರಾತ್ರಿ ಮಲಗುವ ಮುನ್ನ ಎರಡು ಬಾಳೆಹಣ್ಣುಗಳನ್ನು ತಿನ್ನುವಂತೆ ತಜ್ಞರು ಸಲಹೆ ನೀಡುತ್ತಾರೆ.


ಗಮನಿಸಿ: ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಒದಗಿಸುವ ಉದ್ದೇಶ ಒಳಗೊಂಡಿದೆ. ಇದನ್ನು ಅಳವಡಿಸಿಕೊಳ್ಳುವ ಮುನ್ನ ವೃತ್ತಿಪರ ವೈದ್ಯಕೀಯ ಸಲಹೆ ಪಡೆಯುವುದು ಸೂಕ್ತ. ಹೆಚ್ಚಿನ ವಿವರವಾದ ಮಾಹಿತಿಗಾಗಿ, ವೈದ್ಯರನ್ನು ಸಂಪರ್ಕಿಸಲು ಯಾವಾಗಲೂ ಸಲಹೆ ನೀಡಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.