ಮಲಗುವ ಮುನ್ನ ಹೀಗೆ ಮಾಡಿದ್ರೆ, ಯಾವುದೇ ಪ್ರಯತ್ನವಿಲ್ಲದೆ ತೆಳ್ಳಗಾಗುತ್ತೀರಿ..! ಒಮ್ಮೆ ಟ್ರೈ ಮಾಡಿ
Weight loss : ಊಟ ಬಿಟ್ಟು, ಡಯಟ್ ಮಾಡಿದ್ರೆ ತೂಕ ಕಡಿಮೆಯಾಗುವುದಿಲ್ಲ. ಆದರೆ ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ 5 ಸಣ್ಣ ವಿಷಯಗಳು ಇಲ್ಲಿವೆ.. ನೆನಪಿನಲ್ಲಿಡಿ.
Dinner time for weight loss : ಸ್ಥೂಲಕಾಯತೆಯು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ದೊಡ್ಡವರು ಮತ್ತು ಚಿಕ್ಕವರು ಎಲ್ಲರನ್ನು ಒಂದು ಕಾಯಿಲೆಯಂತೆ ಕಾಡುತ್ತಿದೆ. ಕೆಟ್ಟ ಆಹಾರ, ಅನಾರೋಗ್ಯಕರ ಜೀವನಶೈಲಿ ಮತ್ತು ವ್ಯಾಯಾಮದ ಕೊರತೆಯು ಬೊಜ್ಜುಗೆ ಕಾರಣವಾಗುತ್ತದೆ. ಅಲ್ಲದೆ, ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
ಬೊಜ್ಜು ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ತೂಕ ಹೆಚ್ಚಾಗುವುದನ್ನು ನಿಯಂತ್ರಿಸಲು ಜನರು ಡಯಟ್ ಮತ್ತು ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುತ್ತಾರೆ. ಆದರೆ ಇದರಿಂದ ಯಾವುದೇ ಉಪಯೋಗವಾಗುವುದಿಲ್ಲ.. ನಿಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ 5 ಸಲಹೆಗಳು ಇಲ್ಲಿವೆ ನೋಡಿ..
ಇದನ್ನೂ ಓದಿ:ಮಧುಮೇಹ ನಿಯಂತ್ರಣಕ್ಕೆ ಈ ಪುಟ್ಟ ಹಣ್ಣು ಸಾಕು ! ಯಾವ ಹೊತ್ತಾಲ್ಲಾದರೂ ಸರಿ ದಿನಕ್ಕೊಮ್ಮೆ ಸೇವಿಸಿ !
ರಾತ್ರಿ 7 ಗಂಟೆಯ ಮೊದಲು ಭೋಜನ : ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ರಾತ್ರಿ 7 ಗಂಟೆಯ ಒಳಗೆ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ರಾತ್ರಿ ಊಟ ಮತ್ತು ಮಲಗುವ ಸಮಯದ ನಡುವೆ ಸುಮಾರು 3 ಗಂಟೆಗಳ ಅಂತರವಿರಬೇಕು. ತಡರಾತ್ರಿ ತಿಂದರೆ ಸರಿಯಾಗಿ ಜೀರ್ಣವಾಗುವುದಿಲ್ಲ. ಇದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಆದ್ದರಿಂದ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಸಂಜೆ ಬೇಗ ಊಟ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ.
ಲಘು ಆಹಾರ ಸೇವಿಸಿ : ರಾತ್ರಿಯಲ್ಲಿ ಯಾವಾಗಲೂ ಹಗುರವಾಗಿರಬೇಕು. ತೂಕ ಇಳಿಸಿಕೊಳ್ಳಲು ರಾತ್ರಿಯ ಊಟದಲ್ಲಿ ಪ್ರೋಟೀನ್ ಮತ್ತು ಫೈಬರ್ ಭರಿತ ಆಹಾರಗಳನ್ನು ಸೇರಿಸಿ. ರಾತ್ರಿಯಲ್ಲಿ ನೀವು ಹಸಿರು ತರಕಾರಿಗಳು, ಸೂಪ್, ಸಲಾಡ್ ಮತ್ತು ದಾಲ್ ತಿನ್ನಬಹುದು. ತಡರಾತ್ರಿ ಹಸಿವೆಯಾದರೆ ಸೌತೆಕಾಯಿ ಅಥವಾ ಸೇಬನ್ನು ತಿನ್ನಬಹುದು.
ಕತ್ತಲೆಯಲ್ಲಿ ನಿದ್ರೆ : ನಾವು ಬೇಗನೆ ಮಲಗಿದಾಗ, ಮೆಲಟೋನಿನ್ ಎಂಬ ಹಾರ್ಮೋನ್ ನಮ್ಮ ದೇಹದಲ್ಲಿ ಕಂದು ಕೊಬ್ಬನ್ನು ಸೃಷ್ಟಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಸುಡುವಲ್ಲಿ ಸಹಾಯ ಮಾಡುತ್ತದೆ ಎಂದು ಸಂಶೋಧನೆಯೊಂದು ಸಾಬೀತು ಪಡೆಸಿದೆ. ರಾತ್ರಿಯ ನಿದ್ರೆಯು ದೇಹದಲ್ಲಿ ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಇದನ್ನೂ ಓದಿ:ಈ ಆಹಾರಗಳನ್ನು ಫ್ರಿಜ್ ನಲ್ಲಿಟ್ಟರೆಯೇ ಕೆಡುತ್ತದೆ ! ನೀವೂ ಈ ವಸ್ತುಗಳಿಗಾಗಿ ರೆಫ್ರಿಜರೇಟರ್ ಬಳಸುತ್ತೀರಾ ?
ಅರಿಶಿನ ಹಾಲು ಕುಡಿಯಿರಿ : ಅರಿಶಿನ ಹಾಲು ತೂಕ ನಷ್ಟ ಮತ್ತು ಉತ್ತಮ ನಿದ್ರೆಗೆ ಸಹಕಾರಿಯಾಗಿದೆ. ಅರಿಶಿನವು ಥರ್ಮೋಜೆನಿಕ್ ಗುಣಗಳನ್ನು ಹೊಂದಿದ್ದು ಅದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಇದರೊಂದಿಗೆ, ಚಯಾಪಚಯವನ್ನು ಸಹ ಹೆಚ್ಚಿಸುತ್ತದೆ. ಆದ್ದರಿಂದ ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಅರಿಶಿನ ಹಾಲನ್ನು ಕುಡಿಯಿರಿ.
ಚೆನ್ನಾಗಿ ನಿದ್ದೆ ಮಾಡಿ : ಸ್ಥೂಲಕಾಯಕ್ಕೂ ನಿದ್ರೆಗೂ ನೇರ ಸಂಬಂಧವಿದೆ. ತೂಕ ಇಳಿಸಿಕೊಳ್ಳಲು ಕನಿಷ್ಠ 7 ಗಂಟೆಗಳ ಕಾಲ ಆಳವಾದ ನಿದ್ರೆ ಅಗತ್ಯ. ನೀವು ಸಾಕಷ್ಟು ನಿದ್ದೆ ಮಾಡದಿದ್ದರೆ, ಅದು ನಿಮ್ಮ ಚಯಾಪಚಯವನ್ನು ನಿಧಾನಗೊಳಿಸುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಕಷ್ಟವಾಗುತ್ತದೆ.
(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.