Bitter gourd Side Effects : ಹಾಗಲಕಾಯಿ ತುಂಬಾ ಕಹಿ. ಆದರೆ ಇದು ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೆಲವು ರೂಪದಲ್ಲಿ ಹಾಗಲಕಾಯಿಯನ್ನು ಸೇವಿಸುತ್ತಾರೆ. ಹಾಗಲಕಾಯಿ ಹೃದಯದ ಆರೋಗ್ಯಕ್ಕೂ ಉತ್ತಮ. ಆದರೆ ಕೆಲವು ಆರೋಗ್ಯ ಸಮಸ್ಯೆ ಇರುವವರು ಹಾಗಲಕಾಯಿಯನ್ನು ತಿನ್ನಬಾರದು. ಹಾಗಲಕಾಯಿಯನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೂ ಹಾನಿಯಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಪ್ರತಿದಿನ ಹಾಗಲಕಾಯಿಯನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಲಕಾಯಿಯನ್ನು ತಿನ್ನುವ ವಿಷಯಕ್ಕೆ ಬಂದರೆ, ಕೆಲವು ಸಮಸ್ಯೆಗಳಿರುವ ಕೆಲವರು ಬಹಳ ಜಾಗರೂಕರಾಗಿರಬೇಕು ಎಂದು ತಿಳಿದಿರಲಿ.


COMMERCIAL BREAK
SCROLL TO CONTINUE READING

ಯಕೃತ್ತಿನ ಹಾನಿ : ಡಯಾಬಿಟೀಸ್ ರೋಗಿಗಳು ಹಾಗಲಕಾಯಿಯ ರಸವನ್ನು ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಹಾಗಲಕಾಯಿಯ ರಸವನ್ನು ಕುಡಿಯುವುದರಿಂದ ಮಧುಮೇಹವನ್ನೇನೋ ನಿಯಂತ್ರಿಸಬಹುದು, ಆದರೆ ಇದು ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಇದು ಯಕೃತ್ತನ್ನು ಹಾನಿಗೊಳಿಸುತ್ತದೆ. ಆದ್ದರಿಂದ, ನೀವು ಪ್ರತಿದಿನ ಹಾಗಲಕಾಯಿ ತಿನ್ನುವುದನ್ನು ತಪ್ಪಿಸಬೇಕು. ಮತ್ತೊಂದೆಡೆ, ನಿಮಗೆ ಯಾವುದೇ ಲಿವರ್ ಸಂಬಂಧಿತ ಸಮಸ್ಯೆ ಇದ್ದರೆ, ನೀವು ಹಾಗಲಕಾಯಿ  ತಿನ್ನಬಾರದು.


ಇದನ್ನೂ ಓದಿ : Weight Loss Diet: ಈ ಬಿಳಿ ಬೀಜಗಳಲ್ಲಿ ಅಡಗಿದೆ ತೂಕ ಇಳಿಕೆಯ ರಹಸ್ಯ.!


ಗರ್ಭಿಣಿಯರು : ಹಾಗಲಕಾಯಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಋತುಚಕ್ರವನ್ನು ಹೆಚ್ಚಿಸಬಹುದು. ಅದೇ ಸಮಯದಲ್ಲಿ, ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ಅತಿಯಾದ ಸೇವನೆಯು ಗರ್ಭಪಾತಕ್ಕೆ ಕಾರಣವಾಗಬಹುದು, ಆದ್ದರಿಂದ ಗರ್ಭಿಣಿಯರು ಹಾಗಲಕಾಯಿಯ ಸೇವನೆಯನ್ನು ತಪ್ಪಿಸಬೇಕು.


ಹೈಪೊಗ್ಲಿಸಿಮಿಯಾ ಇರುವವರು : ಹಾಗಲಕಾಯಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಬಹುದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಲೋ ಬ್ಲಡ್‌ ಶುಗರ್‌ ಸಮಸ್ಯೆ ಇರುವವರು ಹಾಗಲಕಾಯಿ ತಿನ್ನಬಾರದು. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತಷ್ಟು ಕಡಿಮೆ ಮಾಡಬಹುದು.


ಇದನ್ನೂ ಓದಿ : Diabetes: ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು ಈ ಸೂಪರ್ ಫುಡ್ ಗಳು ನಿಮ್ಮ ಆಹಾರದಲ್ಲಿರಲಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.